ಮುಂಬೈ : ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಮೂರು ಕಡೆಗಳಲ್ಲಿ ಮನೆ, ಗೋಡೆ, ಗುಡ್ಡ ಕುಸಿದು ಬಿದ್ದು ಒಟ್ಟು 21 ಜನ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರ್ಘಟನೆ ನಡೆದ ಮೂರು ಕಡೆಗಳಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ನಗರದ ಚೆಂಬೂರಿನ ಭಾರತ್ ನಗರ, ವಿಖ್ರೋಲಿ ಮತ್ತು ಮುಲುಂದ್ನಲ್ಲಿ ಮನೆ, ಗೋಡೆ ಮತ್ತು ಗುಡ್ಡ ಕುಸಿತ ಸಂಭವಿಸಿದೆ. ಚೆಂಬೂರಿನಲ್ಲಿ 4-5 ಮನೆಗಳು ನೆಲ ಸಮಗೊಂಡಿದ್ದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಒಟ್ಟು 19 ಜನರನ್ನು ರಕ್ಷಣೆ ಮಾಡಲಾಗಿದೆ.
ವಿಖ್ರೋಲಿಯಲ್ಲಿ ಮನೆಗಳು ಕುಸಿದಿರುವುದು ಅದೇ ರೀತಿ ವಿಖ್ರೋಲಿಯಲ್ಲಿ ಒಂದು ಮನೆ ಕುಸಿದು ಬಿದ್ದು ಮೂವರು ಕೊನೆಯುಸಿರೆಳೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮುಲುಂದ್ನಲ್ಲಿ ಗೋಡೆ ಕುಸಿದು ಬಿದ್ದು 15 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಚೆಂಬೂರಿನಲ್ಲಿ ರಕ್ಷಣಾ ಕಾರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮುಂಬೈ ಮಹಾನಗರ ಪಾಲಿಕೆ ( ಬಿಎಂಸಿ) ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿ ಸಿಲುಕಿದವರ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್ಡಿಆರ್ಎಫ್ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.