ಬೆತುಲ್(ಮಧ್ಯಪ್ರದೇಶ):ಡೆಡ್ಲಿ ವೈರಸ್ ಕೊರೊನಾಗೆ ದೇಶದ ಅನೇಕರು ನಲುಗಿ ಹೋಗಿದ್ದು, ಸೋಂಕಿಗೊಳಗಾಗುತ್ತಿದ್ದಂತೆ ಅದರಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ. ಹಲವರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ಮಧ್ಯೆ 104 ವರ್ಷದ ವೃದ್ಧನೋರ್ವ ಮಹಾಮಾರಿ ಗೆದ್ದಿದ್ದಾನೆ.
ಮಧ್ಯಪ್ರದೇಶದ ಬೆತುಲ್ನಲ್ಲಿ 104 ವರ್ಷದ ಬಿರಾಡಿ ಚಂದ್ ಗೋಟಿ ಮಹಾಮಾರಿ ವಿರುದ್ಧ ಗೆದಿದ್ದಾರೆ. ಇವರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಿರಾಡಿ ಚಂದ್ ಗೋಟಿ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದರು. ಹೀಗಾಗಿ ಏನಾಗಬಹುದು ಎಂಬ ಆತಂಕದಲ್ಲಿ ಕುಟುಂಬ ಸದಸ್ಯರಿದ್ದರು.
ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ವೃದ್ಧ, ವೈದ್ಯರು ಹೇಳಿದ ರೀತಿಯಲ್ಲಿ ಕಾಲಕಾಲಕ್ಕೆ ಔಷಧಿ ಮತ್ತು ಆಮ್ಲಜನಕ ಸ್ವೀಕರಿಸಿದ್ದಾರೆ. ಹೀಗಾಗಿ ಕೇವಲ 10 ದಿನಗಳಲ್ಲಿ ಅವರು ಚೇತರಿಸಿಕೊಂಡಿದ್ದಾರೆ.