ಕರ್ನಾಟಕ

karnataka

ETV Bharat / bharat

100 ಕೋಟಿ ಲಸಿಕೆ ನೀಡಿ ಭಾರತ ದಾಖಲೆ..100 ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ - ಸ್ಮಾರಕಗಳಲ್ಲಿ ತ್ರಿವರ್ಣ ಧ್ವಜ

ಕೋವಿಡ್​ ವ್ಯಾಕ್ಸಿನೇಷನ್​ ವಿಚಾರದಲ್ಲಿ ಇಡೀ ಪ್ರಪಂಚಕ್ಕೆ ಮಾದರಿಯಾಗಿರುವ ಭಾರತ 100 ಕೋಟಿ ಲಸಿಕೆ ನೀಡಿದ್ದು, ಇದೀಗ ದೇಶದ 100 ಸ್ಮಾರಕಗಳು ತ್ರಿವರ್ಣ ಧ್ವಜ ದೀಪಾಲಂಕಾರದಲ್ಲಿ ಮಿಂಚಿವೆ.

monuments  illuminating tricolour
monuments illuminating tricolour

By

Published : Oct 21, 2021, 7:56 PM IST

ಹೈದರಾಬಾದ್​: ಕೋವಿಡ್​ ವ್ಯಾಕ್ಸಿನೇಷನ್​ ನೀಡುವಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಬರೋಬ್ಬರಿ 100 ಕೋಟಿ ವ್ಯಾಕ್ಸಿನ್ ನೀಡುವ ಮೂಲಕ ಹೊಸದೊಂದು ರೆಕಾರ್ಡ್ ನಿರ್ಮಾಣ ಮಾಡಿದೆ.

ಭಾರತ 100 ಕೋಟಿ ಕೋವಿಡ್​ ವ್ಯಾಕ್ಸಿನ್ ನೀಡಿರುವ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ದೇಶದ 100 ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ವಿದ್ಯುತ್​ ದೀಪಾಲಂಕಾರವಾಗಿದ್ದು, ಜನಮನ ಸೆಳೆಯುತ್ತಿವೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿರಿ:ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ.. 2 ಕೋಟಿ ಮೌಲ್ಯದ ಚಿನ್ನ, 31 ಲಕ್ಷ ರೂ.ದೋಚಿದ ಕಳ್ಳರು

ದೆಹಲಿಯಲ್ಲಿರುವ ಹೂಮಾಯೂನ್​ ಸ್ಮಾರಕದಲ್ಲಿ ಭಾರತೀಯ ತ್ರಿವರ್ಣ ಧ್ವಜ ವಿದ್ಯುತ್​ ಅಲಂಕಾರದಿಂದ ಕಂಗೊಳಿಸುತ್ತಿದೆ.

ಹೈದರಾಬಾದ್​ನಲ್ಲಿರುವ ವಿಶ್ವವಿಖ್ಯಾತ ಚಾರ್​ ಮೀನಾರ್​ ಕೂಡ ತ್ರಿವರ್ಣ ಧ್ವಜದ ವಿದ್ಯುತ್​ ಅಲಂಕಾರದಿಂದ ಗಮನ ಸೆಳೆಯಿತು

ತ್ರಿಪುರಾದ ಭುವನೇಶ್ವರಿ ದೇವಸ್ಥಾನವೂ ತ್ರಿವರ್ಣ ಧ್ವಜದ ಬಣ್ಣಗಳಿಂದ ಪ್ರಕಾಶಿಸಲ್ಪಟ್ಟಿದೆ.

ದೆಹಲಿಯಲ್ಲಿರುವ ಜಗತ್ಪ್ರಸಿದ್ದ ಕುತುಬ್​​ ಮಿನಾರ್ ಹಾಗೂ ಕೆಂಪು ಕೋಟೆ​​​​ ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದವು

ABOUT THE AUTHOR

...view details