ನವದೆಹಲಿ:ಕೊರೊನಾ ವೈರಸ್ ಎರಡನೇ ಅಲೆ ಕಳೆದೆರಡು ವಾರಗಳಿಂದ ಜೋರಾಗಿದ್ದು, ದಿನ ಕಳೆದಂತೆ ಹೆಚ್ಚಿನ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇಂದು ಕೂಡ ದೇಶದ ಕೆಲವು ನಗರಗಳಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಕರಣಗಳು ಕಂಡು ಬಂದಿರುವ ಕಾರಣ ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು, ಕರ್ನಾಟಕದ ಬೆಂಗಳೂರು ನಗರ ಸೇರಿ 10 ಜಿಲ್ಲೆಗಳಲ್ಲಿ ಸೋಂಕಿತ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿವೆ. ಮಹಾರಾಷ್ಟ್ರದ ಪುಣೆ, ಮುಂಬೈ, ನಾಗ್ಪುರ, ನಾಶಿಕ್, ಔರಂಗಾಬಾದ್, ನಾಂದೇಡ, ದೆಹಲಿ ಹಾಗೂ ಅಹಮದನಗರನಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು.
ಪುಣೆಯಲ್ಲಿ 59,475, ಮುಂಬೈನಲ್ಲಿ 46,248, ನಾಗ್ಪುರ್ 45,322, ಥಾಣೆ 35,264, ನಾಶಿಕ್ 26,553, ಔರಂಗಾಬಾದ್ 21,282, ಬೆಂಗಳೂರು ಗ್ರಾಮಾಂತರ 16,259, ನಾಂದೇಡ 15,171, ದೆಹಲಿ 8,032 ಹಾಗೂ ಅಹಮದನಗರನಲ್ಲಿ 7,952 ಪ್ರಕರಣ ದಾಖಲಾಗಿವೆ.