ತೆಲಂಗಾಣ ಚುನಾವಣೆ: ಅಧಿಕಾರದತ್ತ ಕಾಂಗ್ರೆಸ್.. ಎರಡು ಅವಧಿಯ ಕೆಸಿಆರ್ ಆಡಳಿತಕ್ಕೆ ತೆರೆ! - ತೆಲಂಗಾಣ ವಿಧಾನಸಭೆ ಚುನಾವಣೆ ಕನ್ನಡ
Telangana assembly election result 2023 live: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮ್ಯಾಜಿಕ್ ನಂಬರ್ 60. ಸಿಎಂ ಕೆಸಿಆರ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮುನ್ನಡೆ ಪಡೆದುಕೊಂಡಿದ್ದಾರೆ.
ಹೈದರಾಬಾದ್:ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದತ್ತ ಮುನ್ನುಗ್ಗುತ್ತಿದೆ. ಅಶ್ವರೋಪೇಟ ಕ್ಷೇತ್ರದ ಅಭ್ಯರ್ಥಿ ಆದಿನಾರಾಯಣ ರಾವ್ ಅವರು ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಶುಭಾರಂಭ ಮಾಡಿತ್ತು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಒಟ್ಟಾರೆ ಕಾಂಗ್ರೆಸ್ ಇದುವರೆಗೂ 33 ಸ್ಥಾನಗಳನ್ನು ಗೆದ್ದುಕೊಂಡಿದ್ದು, 30 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಇನ್ನು ಬಿಆರ್ಎಸ್ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 28 ರಲ್ಲಿ ಮುನ್ನಡೆಯಲ್ಲಿದೆ. ಇನ್ನು ಬಿಜೆಪಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 3 ರಲ್ಲಿ ಮುನ್ನಡೆ ಸಾಧಿಸಿದೆ. ಎಂಐಎಂ ಎರಡರಲ್ಲಿ ಗೆಲುವು ಸಾಧಿಸಿದ್ದು, ಐದು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.
TELANGANA119/119
PARTY
BRS
INC
BJP
MIM
OTH
LEAD
28
30
3
5
1
WON
12
33
5
2
0
CHANGE
-48
+44
+7
-
-3
ಅಶ್ವರೋಪೇಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಜರೆ ಜಯ ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಧಿಕೃತವಾಗಿ ಗೆಲುವಿನ ನಗೆ ಬೀರಿದೆ.
49 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ನವೆಂಬರ್ 30 ರಂದು ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 35,655 ಮತಗಟ್ಟೆಗಳ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಚಾರ್ಮಿನಾರ್, ಭದ್ರಾಚಲಂ ಮತ್ತು ಆಶ್ವರಪೇಟ ಕ್ಷೇತ್ರಗಳ ಮತ ಎಣಿಕೆ ಅಂತಿಮ ಸುತ್ತುಗಳು ತಲುಪುತ್ತಿದ್ದು, ಈ ಕ್ಷೇತ್ರಗಳ ಫಲಿತಾಂಶ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ಚಾರ್ಮಿನಾರ್ ಕ್ಷೇತ್ರದ ಮತ ಎಣಿಕೆ ಅತ್ಯಂತ ಕಡಿಮೆ ಇದ್ದು, ಮೊದಲು ಫಲಿತಾಂಶ ಸಿಗಲಿದೆ. ಮ್ಯಾಜಿಲ್ ನಂಬರ್ 60.
ಪ್ರಮುಖ ನಾಯಕರ ಮಾಹಿತಿ:ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿರುವ ರೇವಂತ್ರೆಡ್ಡಿ ಕಾಮಾರೆಡ್ಡಿ ಮತ್ತು ಕೋಡಂಗಲ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಮಾರೆಡ್ಡಿಯಲ್ಲಿ ಮುನ್ನುಗ್ಗವ ಮೂಲಕ ಸಿಎಂ ಚಂದ್ರಶೇಖರ್ರಾವ್ ಅವರಿಗೆ ವಿರುದ್ಧ ಸವಾಲು ಒಡ್ಡಿದ್ದಾರೆ. ಸಿಎಂ ಕೆಸಿಆರ್ ಸ್ಪರ್ಧಿಸಿರುವ ಎರಡು ಕ್ಷೇತ್ರಗಳ ಪೈಕಿ ಕಾಮಾರೆಡ್ಡಿ ಕ್ಷೇತ್ರ ಕೂಡ ಒಂದು. ಅಲ್ಲಿ ಸದ್ಯ ಅವರು ಹಿನ್ನಡೆಯಲ್ಲಿದ್ದಾರೆ. ಗಜ್ವಲ್ ಕ್ಷೇತ್ರದಲ್ಲಿ ಮುನ್ನಡೆಯಲಿದ್ದಾರೆ.
ಬಿಜೆಪಿಯ ಮಾಜಿ ಅಧ್ಯಕ್ಷ, ಸಂಸದ ಬಂಡಿ ಸಂಜಯ್ಕುಮಾರ್ ಅವರು ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಬಿಆರ್ಎಸ್ನ ಗಂಗುಲು ಕಮಲಾಕರ್ ಅವರು ಮುನ್ನಡೆ ಕಾಪಾಡಿಕೊಂಡಿದ್ದಾರೆ. ಸಿಎಂ ಕೆಸಿಆರ್ ಪುತ್ರ, ಸಚಿವ ಕೆಟಿ ರಾಮರಾವ್ ಸಿರ್ಚಿಲ್ಲಾ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಕ್ರಿಕೆಟಿಗ, ಮಾಜಿ ಸಂಸದ ಮಹಮದ್ ಅಜರುದ್ದೀನ್ ಜ್ಯುಬ್ಲಿಹಿಲ್ಸ್ನಲ್ಲಿ ಹಿನ್ನಡೆಯಲ್ಲಿದ್ದರೆ, ಬಿಆರ್ಎಸ್ ಮಗಂಟಿ ಗೋಪಿನಾಥ್ ಮುನ್ನಡೆಯಲ್ಲಿದ್ದಾರೆ.