ETV Bharat / technology

8 ಸಾವಿರದೊಳಗಿನ ಫೋನ್​ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಹೊಸ ಸ್ಮಾರ್ಟ್​ಫೋನ್ O2 ಬಿಡುಗಡೆಯಾಗಿದೆ ನೋಡಿ - new smartphone

author img

By ETV Bharat Karnataka Team

Published : Mar 22, 2024, 4:26 PM IST

ಲಾವಾ ಸ್ಮಾರ್ಟ್​ಫೋನ್ ಒ2 ಬಿಡುಗಡೆ: ಬೆಲೆ 7,999 ರೂ.ಗಳಿಂದ ಆರಂಭ

Lava
Lava

ನವದೆಹಲಿ: ಭಾರತದ ಸ್ಥಳೀಯ ಸ್ಮಾರ್ಟ್ ಫೋನ್ ಕಂಪನಿ ಲಾವಾ ಶುಕ್ರವಾರ 128 ಜಿಬಿ ಸ್ಟೋರೇಜ್ ಮತ್ತು 6.5 ಇಂಚಿನ ಎಚ್​ಡಿ+ ಪಂಚ್ ಹೋಲ್ ಡಿಸ್ ಪ್ಲೇ ಹೊಂದಿರುವ ಹೊಸ ಸ್ಮಾರ್ಟ್ ಫೋನ್ - ಒ 2 (O2) ಅನ್ನು ಬಿಡುಗಡೆ ಮಾಡಿದೆ. ಲಾವಾ ಒ2 ಮಾರ್ಚ್ 27 ರಿಂದ ಅಮೆಜಾನ್ ಮತ್ತು ಲಾವಾ ಇ-ಸ್ಟೋರ್​ನಲ್ಲಿ ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್​ಫೋನ್​ 7,999 ರೂ.ಗಳ ಆರಂಭಿಕ ಬೆಲೆಯಲ್ಲಿ ಸಿಗಲಿದೆ.

"ಗ್ರಾಹಕರ ಬೇಡಿಕೆಗಳು ನಿರಂತರವಾಗಿ ಬದಲಾಗುತ್ತಿವೆ. ವಿಶೇಷವಾಗಿ ಯುವ ಪೀಳಿಗೆಯು ತಮ್ಮ ಸ್ಮಾರ್ಟ್ ಫೋನ್​​​ಗಳ ಶೈಲಿ ಮತ್ತು ಕಾರ್ಯಕ್ಷಮತೆ ಎರಡರಲ್ಲಿಯೂ ಅತ್ಯುತ್ತಮವಾಗಿರಬೇಕು ಎಂದು ಬಯಸುತ್ತಾರೆ" ಎಂದು ಲಾವಾ ಇಂಟರ್ ನ್ಯಾಷನಲ್ ಲಿಮಿಟೆಡ್​ನ ಉತ್ಪನ್ನ ಮುಖ್ಯಸ್ಥ ಸುಮಿತ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇತ್ತೀಚಿನ ಗ್ಲಾಸ್ ಬ್ಯಾಕ್ ವಿನ್ಯಾಸದಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಸ್ಟಾಕ್ ಆಂಡ್ರಾಯ್ಡ್ 13 ನೊಂದಿಗೆ ಆರಾಮದಾಯಕ ಬಳಕೆಯ ಅನುಭವ ನೀಡುವ ಮೂಲಕ ಲಾವಾ ಒ2 ಈ ನಿರೀಕ್ಷೆಗಳನ್ನು ಪೂರೈಸುತ್ತದೆ. ಈ ಫೋನ್​​ಗೆ ಆಂಡ್ರಾಯ್ಡ್ 14 ಅಪ್ಡೇಟ್​ ಅನ್ನು ಖಾತರಿಯಾಗಿ ನೀಡಲಾಗುವುದು ಹಾಗೂ 2 ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ಸ್​ ಗಳನ್ನು ಕೂಡ ನೀಡಲಾಗುವುದು" ಎಂದು ಅವರು ಹೇಳಿದರು.

8 ಎಂಪಿ ಮುಂಭಾಗದ ಕ್ಯಾಮೆರಾದೊಂದಿಗೆ 50 ಎಂಪಿ ಡ್ಯುಯಲ್ ಎಐ ಹಿಂಭಾಗದ ಕ್ಯಾಮೆರಾ, ಬಾಟಮ್ - ಫೈರಿಂಗ್ ಸ್ಪೀಕರ್, ಟೈಪ್ - ಸಿ ಯುಎಸ್​ಬಿ ಕೇಬಲ್​ನೊಂದಿಗೆ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಮತ್ತು ವರ್ಧಿತ ಭದ್ರತೆಗಾಗಿ ಫೇಸ್ ಅನ್ಲಾಕ್ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ. ಕಂಪನಿಯ ಪ್ರಕಾರ, ಲಾವಾ ಒ 2 ಸಾಟಿಯಿಲ್ಲದ ಕಾರ್ಯಕ್ಷಮತೆಗಾಗಿ ಯುನಿಸೋಕ್ ಟಿ 616 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ದೀರ್ಘಕಾಲೀನ ಬಳಕೆಗಾಗಿ ಶಕ್ತಿಯುತ 5000 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ. ಸ್ಮಾರ್ಟ್ ಫೋನ್ 90 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ.

ಭಾರತದ ಪ್ರಮುಖ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ಲಾವಾ ಮೊಬೈಲ್ಸ್, ಇಂಡಿಯನ್ ಟಿ 20 ಲೀಗ್​​ನ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ನೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಕಾರ್ಯತಂತ್ರದ ಸಹಯೋಗದೊಂದಿಗೆ, ಲಾವಾ ಮೊಬೈಲ್ಸ್ ಈಗ 2024 ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್​ನ ಅಧಿಕೃತ ಸ್ಮಾರ್ಟ್ ಫೋನ್ ಪಾಲುದಾರನಾಗಿದೆ.

ಇದನ್ನೂ ಓದಿ : ಮೈಕ್ರೋಸಾಫ್ಟ್ ಎಐ ನೂತನ ಸಿಇಒ ಮುಸ್ತಫಾ ಸುಲೇಮಾನ್ ಯಾರು?: ಅವರ ಸಾಧನೆಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.