ETV Bharat / technology

ಮನೆಯಲ್ಲೇ ಕುಳಿತು ನರೇಗಾ ಜಾಬ್​ ಕಾರ್ಡ್​ ಅಪ್ಲೈ ಮಾಡುವುದು ಹೇಗೆ?, ಇಲ್ಲಿದೆ ಟಿಪ್ಸ್​

MGNREGA Job Card: ಈಗ ನೀವು ನರೇಗಾ ಜಾಬ್ ಕಾರ್ಡ್ ಪಡೆಯಲು ಮನೆಯಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅದು ಯಾವರೀತಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

MGNREGA APPLICATION  MGNREGA JOB CARD  MGNREGA JOB CARD ONLINE APPLICATION
ಮನೆಯಲ್ಲೇ ಕುಳಿತು ನರೇಗಾ ಜಾಬ್​ ಕಾರ್ಡ್​ ಅಪ್ಲೇ ಮಾಡುವುದು ಹೇಗೆ (ETV Bharat)
author img

By ETV Bharat Tech Team

Published : Oct 8, 2024, 1:29 PM IST

MGNREGA Job Card: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಗ್ರಾಮೀಣ ಜನರಿಗೆ ಉದ್ಯೋಗವನ್ನು ಖಾತರಿಪಡಿಸುತ್ತದೆ. MGNREGA ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ಸರ್ಕಾರವು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡುತ್ತದೆ.

ನೀವು ನಿಮ್ಮ ಗ್ರಾಮ ಪಂಚಾಯತ್‌ನಲ್ಲಿ MGNREGA ಅಡಿಯಲ್ಲಿ ಕೆಲಸ ಮಾಡಬೇಕಾದ್ರೆ MGNREGA ಜಾಬ್ ಕಾರ್ಡ್ ಹೊಂದಿರಬೇಕು. ಈ ಕಾರ್ಡ್ ನಿಮಗೆ ಅನೇಕ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ನಿಮ್ಮ ಕೆಲಸವನ್ನು ಅದರಲ್ಲಿ ದಾಖಲಿಸಲಾಗುತ್ತದೆ. ಇದರಿಂದ ನೀವು ಮಾಡಿದ ಕೆಲಸದ ಸಂಪೂರ್ಣ ದಾಖಲೆ ಸರ್ಕಾರದ ಬಳಿ ಇರುತ್ತದೆ. ಈ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಯ ಅವಶ್ಯಕತೆಗಳು ಯಾವುವು? ಅಗತ್ಯವಿರುವ ದಾಖಲೆಯ ವಿವರವಾದ ಮಾಹಿತಿ ಇಲ್ಲಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಮೊದಲನೆಯದಾಗಿ ನೀವು ಉಮಾಂಗ್ ಆಪ್‌ ಡೌನ್​ಲೋಡ್​ ಮಾಡಿ ಇನ್​ಸ್ಟಾಲ್​ ಮಾಡಿಕೊಳ್ಳಬೇಕು. ಇದರ ನಂತರ, ನೀವು ನೋಂದಾಯಿಸಿಕೊಳ್ಳಬೇಕು ಅಥವಾ ಲಾಗಿನ್ ಆಗಬೇಕು. ಆಗ MNREGA ಉದ್ಯೋಗ ಕಾರ್ಡ್ ಅರ್ಜಿಯ ಮೇಲೆ ಕ್ಲಿಕ್ ಮಾಡಿ. ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರಲ್ಲಿ ನಿಮ್ಮ ಸಾಮಾನ್ಯ ಮಾಹಿತಿ ಮತ್ತು ಕುಟುಂಬದ ಮುಖ್ಯಸ್ಥರ ಹೆಸರು, ಪಡಿತರ ಚೀಟಿ ಸಂಖ್ಯೆ ಇತ್ಯಾದಿಗಳನ್ನು ನೀವು ಭರ್ತಿ ಮಾಡಬೇಕು. ಅದರ ನಂತರ ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬೇಕು ಮತ್ತು "Apply for Job Card" ಕ್ಲಿಕ್ ಮಾಡಬೇಕು. ಅದರ ನಂತರ, ನಿಮ್ಮ ಫಾರ್ಮ್ ಅನ್ನು ಸಲ್ಲಿಸಲಾಗುತ್ತದೆ. ಫಾರ್ಮ್​ ಸಲ್ಲಿಸಿದ ಬಳಿಕ ನೀವು ನೋಂದಣಿ ಸಂಖ್ಯೆಯನ್ನು ಪಡೆಯುತ್ತೀರಿ.

ನರೇಗಾ ಜಾಬ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ವಯಸ್ಸಿನ ಪ್ರಮಾಣಪತ್ರ
  • ಪಡಿತರ ಚೀಟಿ
  • ಜಾತಿ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಆದಾಯ ಪ್ರಮಾಣಪತ್ರ
  • ಪಾಸ್ಪೋರ್ಟ್ ಗಾತ್ರದ ಫೋಟೋ ಇತ್ಯಾದಿ.

ನೆರೇಗಾ ಜಾಬ್ ಕಾರ್ಡ್‌ನ ಪ್ರಯೋಜನಗಳು:

  • ನರೇಗಾ ಜಾಬ್ ಕಾರ್ಡ್ ಹೊಂದಿರುವವರು ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತರಿಯನ್ನು ಪಡೆಯುತ್ತಾರೆ.
  • ಜಾಬ್ ಕಾರ್ಡ್ ಹೊಂದಿರುವವರು ದೈನಂದಿನ ಕೆಲಸಕ್ಕೆ ನಿಗದಿತ ಮೊತ್ತವನ್ನು ಪಡೆಯುತ್ತಾರೆ. ಆ ಮೊತ್ತ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
  • ಸರ್ಕಾರಿ ಯೋಜನೆಗಳಲ್ಲಿ ಜಾಬ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗಿರುವುದರಿಂದ ಸರ್ಕಾರದ ಹಲವು ಯೋಜನೆಗಳನ್ನು ಈ ಕಾರ್ಡ್ ಮೂಲಕ ಪಡೆಯಬಹುದಾಗಿದೆ.
  • ಜಾಬ್ ಕಾರ್ಡ್ ಕಾರ್ಮಿಕರ ಕೆಲಸವನ್ನು ದಾಖಲಿಸುತ್ತದೆ. ಅದರ ಮೂಲಕ ಸರ್ಕಾರವು ಕಾರ್ಮಿಕರಿಗೆ ಉದ್ಯೋಗವನ್ನು ಖಾತರಿಪಡಿಸುತ್ತದೆ.

ಓದಿ: ಮಿಲ್ಟನ್ ಚಂಡಮಾರುತಕ್ಕೆ ನಲುಗಿದ ಬಾಹ್ಯಾಕಾಶ ಸಂಸ್ಥೆ : NASA-SpaceX ಯುರೋಪಾ ಕ್ಲಿಪ್ಪರ್ ಕಾರ್ಯಾಚರಣೆ ವಿಳಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.