ETV Bharat / technology

ಗಗನಯಾನ ಮಿಷನ್​​: ವಿಕ್ರಂ ಸಾರಾಬಾಯ್​​ ಬಾಹ್ಯಾಕಾಶ ಕೇಂದ್ರಕ್ಕೆ ಇಂದು ಪ್ರಧಾನಿ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಒಂದು ದಿನದ ಭೇಟಿಗಾಗಿ ಕೇರಳಕ್ಕೆ ಆಗಮಿಸಲಿದ್ದಾರೆ. ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ವಿಎಸ್‌ಎಸ್‌ಸಿಗೆ ಭೇಟಿ ನೀಡಲಿರುವ ಅವರು ಸುಮಾರು 1800 ಕೋಟಿ ರೂಪಾಯಿ ಮೌಲ್ಯದ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

author img

By ETV Bharat Karnataka Team

Published : Feb 27, 2024, 7:30 AM IST

'Group Captain Prashanth Nair among four test pilots for Gaganyaan Mission'
ಗಗನಯಾನ ಮಿಷನ್​​: ವಿಕ್ರಂ ಸಾರಾಬಾಯ್​​ ಬಾಹ್ಯಾಕಾಶ ಕೇಂದ್ರಕ್ಕೆ ಇಂದು ಪ್ರಧಾನಿ ಭೇಟಿ

ತಿರುವನಂತಪುರಂ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗಗನ್‌ಯಾನ್ ಮಿಷನ್‌ಗಾಗಿ ತರಬೇತಿ ಪಡೆಯುತ್ತಿರುವ ನಾಲ್ವರು ಪರೀಕ್ಷಾ ಪೈಲಟ್‌ಗಳ ಹೆಸರನ್ನು ಬಹಿರಂಗಪಡಿಸಲಿದ್ದಾರೆ. ಈ ಮೂಲಕ ಕೇರಳವು ಹೊಸ ಶಕೆ ಆರಂಭಿಸಲು ಸನ್ನದ್ಧವಾಗಿದೆ.

ಕೇರಳ ಮೂಲದ ಸುಖೋಯ್ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತದ ಬಹು ಮಹತ್ವಾಕಾಂಕ್ಷೆಯ ಹಾಗೂ ಕನಸಿನ ಮಿಷನ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ವರು ಪೈಲಟ್‌ಗಳು ಈಗಾಗಲೇ ರಷ್ಯಾದಲ್ಲಿ ತಮ್ಮ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಈಗ ಇಸ್ರೋದ ಘಟಕದಲ್ಲಿ ಗಗನಯಾನ್ ಮಿಷನ್​​ನ ಪರೀಕ್ಷೆಗಳ ಪಾಲ್ಗೊಳ್ಳುತ್ತಿದ್ದಾರೆ. ಮಿಷನ್​​​ನ ಸಂಕೀರ್ಣತೆ ಮತ್ತು ಜಟಿಲತೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ಮೂಲಕ ಅವರೆಲ್ಲ ಗಗನಯಾನಕ್ಕೆ ಸರ್ವ ಸನ್ನದ್ಧರಾಗುತ್ತಿದ್ದಾರೆ.

ಪರೀಕ್ಷಾರ್ಥ ಪೈಲಟ್‌ಗಳ ತಂಡದಲ್ಲಿ ಕೇರಳದವರೂ ಇದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದಲೂ ಆ ಅಧಿಕಾರಿ ಯಾರೆಂದು ಪತ್ತೆ ಹಚ್ಚುವ ಕೆಲಸ ಜೋರಾಗಿಯೇ ಸಾಗಿದೆ. ತಿರುವನಂತಪುರಂನಲ್ಲಿರುವ ವಿಎಸ್‌ಎಸ್‌ಸಿಗೆ ಪ್ರಧಾನಿ ಭೇಟಿ ನೀಡಿ ಗಗನ್‌ಯಾನ್ ಮಿಷನ್‌ನ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಮಂಗಳವಾರ ಬೆಳಗ್ಗೆ 10.45ಕ್ಕೆ ವಿಎಸ್ ಎಸ್ ಸಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಒಂದು ಗಂಟೆ ಅಲ್ಲಿಯೇ ಕಳೆಯಲಿದ್ದಾರೆ. ಈ ವೇಳೆ 1800 ಕೋಟಿ ರೂಗಳ ಮೂರು ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಅವರು ಗಗನಯಾನದ ತಯಾರಿ, ಮುಂದಿನ ಕೆಲಸ ಏನು ಎಂಬ ಬಗ್ಗೆ ಇಸ್ರೋ ವಿಜ್ಞಾನಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಗಗನಯಾನ ಮಿಷನ್ ಯಶಸ್ವಿಯಾಗಲಿ ಎಂದು ಅಲ್ಲಿನ ಸಿಬ್ಬಂದಿಗೆ ಹುರುಪು ಹಾಗು ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವ ಸಾಧ್ಯತೆ ಇದೆ.

ಇಸ್ರೋ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆ ಹೊಂದಿದ್ದು, ಮಂಗಳನ ಅಂಗಳದಲ್ಲಿ ಮತ್ತಷ್ಟು ಅಧ್ಯಯನ ನಡೆಸಲು ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಇಸ್ರೋ ಹಗಲಿರುಳು ಶ್ರಮಿಸುತ್ತಿದೆ. ಇದಕ್ಕೆ ಭಾರತ ಸರ್ಕಾರದ ಬೆಂಬಲವೂ ಇದ್ದು, ವಿಕ್ರಮ್​ ಸಾರಾಭಾಯ್​ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದರಿಂದ ಅಲ್ಲಿ ಹೊಸ ಹುರುಪು ಕಂಡು ಬರುವ ಸಾಧ್ಯತೆಗಳಿವೆ.

ಇಸ್ರೋ ಮುಂದಿನ ಗುರಿಗಳಲ್ಲಿ ಮೊದಲನೆಯದು ಗಗನಯಾನ ಯೋಜನೆ. ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಮತ್ತು ಸುರಕ್ಷಿತವಾಗಿ ಭೂಮಿಗೆ ಕರೆತರುವುದು ಇಸ್ರೋದ ಮೊದಲ ಆದ್ಯತೆ ಆಗಿದೆ. ಈ ಸಂಬಂಧ ಕಳೆದ ಅಕ್ಟೋಬರ್​ನಲ್ಲಿ ಗಗನಯಾನ ಮಿಷನ್​ನ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಇನ್ನೇನಿದ್ದರು ಇನ್ನಷ್ಟು ಸುರಕ್ಷತಾ ಪರೀಕ್ಷೆಗಳ ಬಳಿಕ ಗಗನಯಾನ ಆರಂಭವಾಗಲಿದೆ.

ಇದನ್ನು ಓದಿ: ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಸಿದ್ಧ; ಇಸ್ರೋ ಮತ್ತೊಂದು ಮೈಲಿಗಲ್ಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.