Best Earbuds Under Rs 2000: ಸಂಗೀತವು ದೇಹ ಮತ್ತು ಮನಸ್ಸನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುತ್ತದೆ. ಜೊತೆಗೆ ಹಾಡು ಕೇಳಲು ಅತ್ಯುತ್ತಮ ಇಯರ್‌ಬಡ್‌ಗಳಿದ್ದರೆ ಮನಸು ಇನ್ನಷ್ಟು ಉಲ್ಲಾಸಗೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಇಯರ್‌ಬಡ್‌ಗಳು ಲಭ್ಯವಿದ್ದರೂ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಯಾವುದು ಉತ್ತಮ ಎಂದು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ನೀವು ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದಾದ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯದೊಂದಿಗೆ ಬರುವ ಇಂತಹ 5 ಇಯರ್‌ಬಡ್‌ಗಳ ಕುರಿತು ಮಾಹಿತಿ ಇಲ್ಲಿದೆ.
BoAt Airdopes 141 ANC: ಈ ಇಯರ್ಬಡ್ನಲ್ಲಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯವನ್ನು ಪಡೆಯುತ್ತೀರಿ. ಇದು ನಿಮ್ಮ ಸಂಗೀತದ ಅನುಭವವನ್ನು ಉತ್ತಮಗೊಳಿಸುತ್ತದೆ. ಈ ಇಯರ್‌ಬಡ್‌ಗಳು IPX5 ವಾಟರ್ ರಜಿಸ್ಟೆನ್ಸ್ ವೈಶಿಷ್ಟ್ಯ ಹೊಂದಿದೆ. ಇದು 21 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಬರುತ್ತದೆ. ಈ ಇಯರ್‌ಬಡ್‌ಗಳು ಅಮೆಜಾನ್‌ನಲ್ಲಿ 1,599 ರೂಗಳಿಗೆ ಲಭ್ಯವಿದೆ.
BoAt Airdopes 141 ANC ವೈಶಿಷ್ಟ್ಯಗಳು..
- 32dB ವರೆಗೆ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್
- 21 ಗಂಟೆಗಳವರೆಗೆ ಪ್ಲೇಬ್ಯಾಕ್ ಬ್ಯಾಟರಿ
- IPX4 ವಾಟರ್ ರಜಿಸ್ಟೆನ್ಸ್ ಸೆಫ್ಟಿ
- ಬ್ಲೂಟೂತ್ 5.1 ಕನೆಕ್ಟಿವಿಟಿ
- ಇನ್‌ಸ್ಟೆಂಟ್ ವಾಯಸ್ ಅಸಿಸ್ಟೆಂಟ್ ಆಕ್ಟಿವೇಶನ್
Noise Tune Charge: ಈ ಇಯರ್ಬಡ್ ಅನ್ನು ಅಮೆಜಾನ್‌ನಲ್ಲಿ 899 ರೂಪಾಯಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯು ಈ ಇಯರ್‌ಬಡ್‌ಗಳಲ್ಲಿ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯವನ್ನು ನೀಡುತ್ತದೆ. 30 ಗಂಟೆಗಳ ಬ್ಯಾಟರಿ ಬ್ಯಾಕಪ್ ಇದೆ.
Noise Tune Charge ವೈಶಿಷ್ಟ್ಯಗಳು..
- 30 ಗಂಟೆಗಳವರೆಗೆ ಪ್ಲೇಟೈಮ್
- ಟಚ್ ಕಂಟ್ರೋಲ್
- ಇನ್‌ಸ್ಟೆಂಟ್ ವಾಯಸ್ ಅಸಿಸ್ಟೆಂಟ್ ಆಕ್ಟಿವೇಶನ್
- ಬ್ಲೂಟೂತ್ 5.0 ಕನೆಕ್ಟಿವಿಟಿ
- IPX5 ವಾಟರ್ ರಜಿಸ್ಟೆನ್ಸ್ ಸೆಫ್ಟಿ
Realme Buds Q2 Neo : ಕಡಿಮೆ ತೂಕ ಮತ್ತು ಕೂಲ್ ವಿನ್ಯಾಸದೊಂದಿಗೆ Realme Buds Q2 ನಿಯೋ ಕಿವಿಗೆ ತುಂಬಾ ಆರಾಮದಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಕಂಪನಿಯು ಈ ಇಯರ್‌ಬಡ್‌ಗಳಲ್ಲಿ AI ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯವನ್ನು ನೀಡುತ್ತದೆ. ಇದು ಕಾಲಿಂಗ್ ವೈಶಿಷ್ಟ್ಯ ಹೊಂದಿದೆ. ಇದು ದೈನಂದಿನ ಬಳಕೆಗೆ ಉತ್ತಮವಾಗಿದೆ. ಅಮೆಜಾನ್‌ನಲ್ಲಿ 1,499 ರೂ.ಗೆ ಮಾರಾಟವಾಗುತ್ತಿದೆ.
Realme Buds Q2 Neo ವೈಶಿಷ್ಟ್ಯಗಳು..
- ಹಗುರವಾದ ಮತ್ತು ಆರಾಮದಾಯಕ ವಿನ್ಯಾಸ
- 28 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್
- IPX4 ವಾಟರ್ ರಾಜಿಸ್ಟೆನ್ಸ್ ಸೆಫ್ಟಿ
- ಬ್ಲೂಟೂತ್ 5.2 ಕನೆಕ್ಟಿವಿಟಿ
- ಇನ್‌ಸ್ಟೆಂಟ್ ವಾಯಸ್ ಅಸಿಸ್ಟೆಂಟ್ ಆಕ್ಟಿವೇಶನ್
OnePlus Nord Buds 2r: ಈ ಇಯರ್‌ಬಡ್‌ಗಳು ಕಂಪನಿಯ ಅತ್ಯಂತ ಉತ್ತಮ ಇಯರ್‌ಬಡ್‌ಗಳಲ್ಲಿ ಒಂದಾಗಿದೆ. 12.4mm ಡೈನಾಮಿಕ್ ಡ್ರೈವರ್ಸ್ ಮತ್ತು Dolby Atmos ಬೆಂಬಲದೊಂದಿಗೆ ಅತ್ಯುತ್ತಮ ಸೌಂಡ್ ನೀಡುತ್ತದೆ. 38 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು IP55 ವಾಟರ್ ಮತ್ತು ಡಸ್ಟ್ ರಜಿಸ್ಟೆನ್ಸ್ ಸೆಫ್ಟಿ ಹೊಂದಿದೆ.
OnePlus Nord Buds 2r ವೈಶಿಷ್ಟ್ಯಗಳು..
- Dolby Atmos ಸಪೋರ್ಟ್ ಮತ್ತು 11mm ಡೈನಾಮಿಕ್ ಡ್ರೈವರ್ಸ್ ಹೊಂದಿದೆ
- 38 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್
- IP55 ವಾಟರ್ ಮತ್ತು ಡಸ್ಟ್ ರಜಿಸ್ಟೆನ್ಸ್ ಸೆಫ್ಟಿ
- ಬ್ಲೂಟೂತ್ 5.2 ಕನೆಕ್ಟಿವಿಟಿ
- ಸ್ಪೀಡ್ ಚಾರ್ಜಿಂಗ್ ಸಪೋರ್ಟ್
Noise Air Buds: ಅಮೆಜಾನ್‌ನಲ್ಲಿ 1,499 ರೂ.ಗೆ ಲಭ್ಯವಿರುವ ಈ ಇಯರ್‌ಬಡ್‌ಗಳು ಕಂಪನಿಯ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ವೈಶಿಷ್ಟ್ಯವನ್ನು ಹೊಂದಿವೆ. ಇದರ ಹೊರತಾಗಿ, ಈ ಇಯರ್‌ಬಡ್‌ಗಳು ಇಸ್ಟಾಚಾರ್ಜ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ಅದರ ಪ್ರಾಯೋಗಿಕತೆಯನ್ನು ಹೆಚ್ಚಿಸುತ್ತದೆ. ಸುಮಾರು 20 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ.
Noise Air Buds ವೈಶಿಷ್ಟ್ಯಗಳು..
- ಸ್ಪೀಡ್ ಚಾರ್ಜಿಂಗ್‌ಗಾಗಿ InstaCharge ತಂತ್ರಜ್ಞಾನ
- 20 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್
- ಕಸ್ಟಮೈಜೆಬಲ್ ಟಚ್ ಕಂಟ್ರೋಲ್
- ಬ್ಲೂಟೂತ್ 5.0 ಕನೆಕ್ಟಿವಿಟಿ
- IPX4 ವಾಟರ್ ರಾಜಿಸ್ಟೆನ್ಸ್ ಸೆಫ್ಟಿ