Royal Enfield Classic 350 Launch: ರೆಟ್ರೋ-ಮಾಡರ್ನ್ ಬೈಕ್ ತಯಾರಕ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ. ಈಗ ರಾಯಲ್ ಎನ್‌ಫೀಲ್ಡ್ ತನ್ನ 2024 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾಡೆಲ್ ಅನ್ನು ಭಾರತದಲ್ಲಿ ಭಾನುವಾರ ಅಂದರೆ ಸೆಪ್ಟೆಂಬರ್ 1 ರಿಂದ ಬಿಡುಗಡೆ ಆಗಿದೆ. ಈ ಹೊಸ ಮೋಟಾರ್‌ಸೈಕಲ್‌ನ ಬುಕ್ಕಿಂಗ್ ಕೂಡ ಆರಂಭವಾಗಿದೆ.
ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನ ಅಪ್ಡೇಟ್ ಮಾದರಿಯನ್ನು ಆಗಸ್ಟ್ 12 ರಂದು ಅನಾವರಣಗೊಳಿಸಿರುವುದು ಗಮನಾರ್ಹ. ಆದರೆ ಅದರ ಬೆಲೆ ಭಾನುವಾರದಿಂದ ಬಹಿರಂಗಗೊಂಡಿದೆ. ಕ್ಲಾಸಿಕ್ 350ನ 2024 ಮಾದರಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೆ ಅದರಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂಬುದು ಗಮನಾರ್ಹ.
ಬದಲಾವಣೆಗಳೇನು?: ಬಲ್ಬ್ ಟೈಪ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಗರ್ ಲ್ಯಾಂಪ್‌ಗಳ ಬದಲಿಗೆ ಈಗ ಎಲ್‌ಇಡಿ ಯೂನಿಟ್ ಬಳಸಲಾಗಿದ್ದು, ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರ್‌ಗಳನ್ನು ಸಹ ಸೇರಿಸಲಾಗಿದೆ. ಎಲ್ಇಡಿ ಟರ್ನ್ ಇಂಡಿಕೇಟರ್ ಅದರ ಟಾಪ್-ಸ್ಪೆಕ್ ರೂಪಾಂತರದಲ್ಲಿ ಕಂಡುಬರುತ್ತವೆ. ಆದರೆ ಬಲ್ಬ್ ಇಂಡಿಕೇಟರ್ಗಳನ್ನು ಕಡಿಮೆ ಟ್ರಿಮ್‌ಗಳಲ್ಲಿ ಬಳಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ರ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೆ ಈಗ ಅದರ ಸಣ್ಣ ಎಲ್ಸಿಡಿ ಡಿಸ್ಪ್ಲೇಯಲ್ಲಿ ಗೇರ್ ಪೊಜಿಷನ್ ಇಂಡಿಕೇಟರ್ ಸೇರಿಸಿದೆ. ಇದಲ್ಲದೆ ಬೈಕ್‌ಗೆ ಸೇರಿಸಲಾದ ಹೊಸ ವೈಶಿಷ್ಟ್ಯಗಳ ಪಟ್ಟಿಯಲ್ಲಿ USB-C ಚಾರ್ಜಿಂಗ್ ಪೋರ್ಟ್ ಅನ್ನು ಸಹ ಅಳವಡಿಸಲಾಗಿದೆ.
ಏಳು ಹೊಸ ಬಣ್ಣಗಳಲ್ಲಿ ಮೂಡಿಬಂದ ಬೈಕ್: 2024 ಕ್ಲಾಸಿಕ್ 350ನ ಬಾಡಿವರ್ಕ್ ಒಂದೇ ಆಗಿದೆ. ಆದರೂ ರಾಯಲ್ ಎನ್‌ಫೀಲ್ಡ್ ಎಮರಾಲ್ಡ್, ಜೋಧ್‌ಪುರ ಬ್ಲೂ, ಕಮಾಂಡೋ ಸ್ಯಾಂಡ್, ಮದ್ರಾಸ್ ರೆಡ್, ಮೆಡಾಲಿಯನ್ ಬ್ರೋಂಜ್, ಸ್ಯಾಂಡ್ ಗ್ರೇ ಮತ್ತು ಸ್ಟೆಲ್ತ್ ಬ್ಲ್ಯಾಕ್ ಸೇರಿದಂತೆ ಏಳು ಹೊಸ ಬಣ್ಣಗಳಲ್ಲಿ ಮೂಡಿಬಂದಿದೆ. ಇದು ಸ್ಪೋಕ್ ವ್ಹೀಲ್ಗಳು ಸ್ಟೆಲ್ತ್ ಕಪ್ಪು ಬಣ್ಣದಲ್ಲಿ ಮೂಡಿಬಂದಿದೆ. ಆದರೆ ಸ್ಪೋಕ್ ವ್ಹೀಲ್ಗಳು ಇತರ ಟ್ರಿಮ್‌ಗಳಲ್ಲಿಯೂ ಸಹ ಲಭ್ಯವಿದೆ.
ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ: 2024 ಕ್ಲಾಸಿಕ್ 350 ನಲ್ಲಿ ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಅದೇ ಹಳೆಯ 349cc, ಸಿಂಗಲ್-ಸಿಲಿಂಡರ್, J-ಸರಣಿ ಎಂಜಿನ್ ಅನ್ನು ಹೊಂದಿದೆ. ಇದು 6,100rpm ನಲ್ಲಿ 20.2bhp ಮತ್ತು 4,000rpm ನಲ್ಲಿ 27 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇತರೆ ವೈಶಿಷ್ಟ್ಯಗಳು: ಈ ಏರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರಲ್ಲಿ ಲಭ್ಯವಿರುವ ಇತರ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದ್ರೆ, ಹೊಸ ಕ್ಲಾಸಿಕ್ 350 18-ಇಂಚಿನ ವ್ಹೀಲ್ಗಳನ್ನು ಹೊಂದಿದೆ. ಅಪ್-ಸೈಡ್-ಡೌನ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಸ್ಪ್ರಿಂಗ್ ಮತ್ತು ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಕೆಳಗಿನ ರೂಪಾಂತರಗಳಲ್ಲಿ, ಮುಂಭಾಗದಲ್ಲಿ ಡಿಸ್ಕ್ ಬ್ರೇಕಿಂಗ್ ಸೆಟಪ್ ಮತ್ತು ಹಿಂದಿನ ಭಾಗದಲ್ಲಿ ಡ್ರಮ್ ಬ್ರೇಕಿಂಗ್ ಲಭ್ಯವಿದೆ.
ಓದಿ: ಸೇನೆಗೆ ಆನೆ ಬಲದಂತಿರುವ Mi-17V5 ಹೆಲಿಕಾಪ್ಟರ್; ಇದರ ವೈಶಿಷ್ಟ್ಯತೆ ಹಲವು - IAF Mi17V5 helicopter