ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮೀಪ ವಕೀಲೆಗೆ ಚಾಕು ಇರಿಯಲಾಗಿದೆ. ವಿಮಲಾ (38) ಎಂಬ ವಕೀಲೆಗೆ ಜಯರಾಮರೆಡ್ಡಿ (65) ಎಂಬಾತ ಚಾಕು ಇರಿದಿದ್ದು, ಆರೋಪಿಯನ್ನು ಹಲಸೂರು ಗೇಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇರಿತಕ್ಕೊಳಗಾದ ವಿಮಲಾ ಹಾಗೂ ಆರೋಪಿ ಜಯರಾಮರೆಡ್ಡಿ ಇಬ್ಬರೂ 9 ವರ್ಷಗಳಿಂದ ಸ್ನೇಹಿತರು. ಜಮೀನೊಂದರ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಹಣವನ್ನೂ ಸಹ ಪಡೆದು ವಂಚಿಸಿದ್ದ ಆರೋಪದಡಿ ಈ ಹಿಂದೆ ಜಯರಾಮರೆಡ್ಡಿ ವಿರುದ್ಧ ಶೇಷಾದ್ರಿಪುರಂ ಠಾಣೆಗೆ ವಿಮಲಾ ದೂರು ನೀಡಿದ್ದರು. ಇಂದು ಪ್ರಕರಣದ ವಿಚಾರಣೆ ಇದ್ದುದರಿಂದ ಇಬ್ಬರೂ ಸಹ ಕೋರ್ಟ್ ಬಳಿ ಬಂದಿದ್ದರು. ಈ ಸಂದರ್ಭದಲ್ಲಿ ವಿಮಲಾರಿಗೆ ಆರೋಪಿ ಚಾಕು ಇರಿದಿದ್ದಾನೆ.
ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ವಿಮಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಹಲಸೂರುಗೇಟ್ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಿಟ್ ಆ್ಯಂಡ್ ರನ್ಗೆ ದ್ವಿಚಕ್ರ ವಾಹನ ಸವಾರ ಬಲಿ: ಆರೋಪಿಗಾಗಿ ಹುಡುಕಾಟ - Hit and run