ETV Bharat / state

ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ: ಬೈರತಿ ಸುರೇಶ್​ಗೆ ಶೋಭಾ ಕರಂದ್ಲಾಜೆ ಸವಾಲು

ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ ಬೈರತಿ ಸುರೇಶ್​ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

HOBHA KARANDLAJE CHALLENGES
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​ ‌ಮುಡಾಗೆ ಸಂಬಂಧಿಸಿದ ಸಾವಿರಾರು ಫೈಲ್ಸ್​ಗಳನ್ನು ತಂದು ಸುಟ್ಟು ಹಾಕಿದ್ದಾರೆ. ಅವರಿಗೆ ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆಗಳಿದ್ದರೆ ಆದಷ್ಟು ಬೇಗ ಬಿಡುಗಡೆಗೊಳಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೈರತಿ ಸುರೇಶ್​ ಬಗ್ಗೆ ನಾನು ಧ್ವನಿ ಎತ್ತಿದೆ. ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ‌. ಹಲವು ಸರ್ಕಾರಗಳು ಈ ರೀತಿ ಆರೋಪಿಸಿ ತನಿಖೆ ಮಾಡಿದರು. ಆದರೆ, ಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡೋದೂ ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣ ಅವರನ್ನು ಸರ್ಕಾರ ನೇಮಕ ಮಾಡುತ್ತಿದ್ದು, ಪೊನ್ನಣ್ಣನಿಗೆ ವಿದ್ಯುತ್ ಇಲಾಖೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ETV Bharat)

ಫೇಕ್ ಫೈಲ್ ಕ್ರಿಯೇಟ್ ಮಾಡಲು ಪೊನ್ನಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪೊನ್ನಣ್ಣ ಇರೋದು ಸಿಎಂ ಕಾನೂನು ಸಲಹೆಗಾರನಷ್ಟೇ. ಅದರಲ್ಲೂ ಭ್ರಷ್ಟಾಚಾರ ಮಾಡಲು ಹೊರಟಿದ್ದಿರಿ. ನಿಮ್ಮ ಬಳಿ ಇರುವ ದಾಖಲೆ ತಕ್ಷಣ ಹೊರಗೆ ಹಾಕಬೇಕು. ನಿಮಗೆ ಈಗ ಸಂಕಷ್ಟ ಶುರುವಾಗಿದೆ ಎಂದು ಕಿಡಿಕಾರಿದರು.

ಬೈರತಿ ಸುರೇಶ್​ ಮೈಸೂರಿನಿಂದ ಫೈಲ್ ತಂದಿದ್ದು ಸತ್ಯ, ಸುಟ್ಟು ಹಾಕಿದ್ದೂ ಸತ್ಯ. ಮುಡಾ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಗೆ ಕೇಂದ್ರದ ಸಂಸ್ಥೆಗಳು ಎಂಟ್ರಿ ಆಗಿವೆ‌. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಇದನ್ನೂ ಓದಿ: ಮುಡಾ ಪ್ರಕರಣ : ಲೋಕಾಯುಕ್ತರಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ - ಎಂಎಲ್​ಸಿ ಹೆಚ್ ವಿಶ್ವನಾಥ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.