ಚಾಮರಾಜನಗರ: ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ತೆಳ್ಳನೂರು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ತೆಳ್ಳನೂರು ಗ್ರಾಮದ ಸುಬ್ಬಮ್ಮ, ಬೇಗೂರಿನ ರತ್ಮಮ್ಮ ಎಂಬವರ ಮನೆ ಗೋಡೆ ಮಳೆಗೆ ನೆಲಕ್ಕುರುಳಿವೆ.
2ನೇ ಸಲ ಕೋಡಿ ಬಿದ್ದ ಕಮರಹಳ್ಳಿ ಕೆರೆ: ಮುಂಗಾರು ಆರ್ಭಟಕ್ಕೆ ಕೆಲ ತಿಂಗಳ ಹಿಂದೆ ಕೋಡಿ ಬಿದ್ದಿದ್ದ ಕಮರಹಳ್ಳಿ ಕೆರೆ, ಈಗ ಮತ್ತೊಮ್ಮೆ ಕೋಡಿ ಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಮರಹಳ್ಳಿ ಕೆರೆ ನಿರಂತರ ಮಳೆಗೆ ವರ್ಷಗಳ ಬಳಿಕ ಕಳೆದ ತಿಂಗಳು ಕೋಡಿ ಬಿದ್ದಿತ್ತು. ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸುತ್ತಮುತ್ತಲ ಪಂಪ್‌ಸೆಟ್‍ಗಳಲ್ಲಿ ನೀರು ಅಧಿಕವಾಗಿ ಬರತೊಡಗಿದೆ. ಇದು ರೈತರ ವ್ಯವಸಾಯಕ್ಕೆ ಪೂರಕವಾಗಿದೆ.
![Walls collapsed](https://etvbharatimages.akamaized.net/etvbharat/prod-images/15-10-2024/kn-cnr-rain-av-ka10038_15102024153728_1510f_1728986848_530.jpg)
ಇದನ್ನೂ ಓದಿ: ಮೈಸೂರು : ಮಳೆಗೆ ಮನೆ ಗೋಡೆ ಕುಸಿತ, ಕೂದಲೆಳೆ ಅಂತರದಲ್ಲಿ ಉಳಿಯಿತು 7 ಜನರ ಜೀವ