ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ನಾಳೆ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ನಡೆಯಲಿರುವ ಪಂದ್ಯಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಸ್ಪಿನ್ನರ್ ಕುಲದೀಪ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಕಳೆದ ಒಂದೂವರೆ ಎರಡು ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದೇನೆ. ಇದು ನನಗೆ ಬೇಕಾದ ಆತ್ಮವಿಶ್ವಾಸ ನೀಡುತ್ತದೆ. ಐಪಿಎಲ್‌ನ ಈ ಋತುವಿನಲ್ಲಿ 200ಕ್ಕಿಂತ ಹೆಚ್ಚು ಸ್ಕೋರ್ ಮಾಡುವುದು ಸಾಮಾನ್ಯವಾಗಿದೆ, ಜೊತೆಗೆ ತುಂಬಾ ಸವಾಲಿನ ಕಾರ್ಯ ಆಗಿದೆ'' ಎಂದು ಐಪಿಎಲ್‌ನಲ್ಲಿ ತಂಡಗಳು 200ಕ್ಕೂ ಹೆಚ್ಚು ರನ್ ಗಳಿಸಿದ ಬಗ್ಗೆ ಕೇಳಿರುವ ಪ್ರಶ್ನೆಗೆ ಕುಲದೀಪ್ ಯಾದವ್ ಉತ್ತರಿಸಿದ್ದಾರೆ.
''ನಾನು ಯಾವಾಗಲೂ ನನ್ನ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತೇನೆ. ನಾನು ಏನು ಮಾಡಬೇಕು ಎಂದು ನನಗೆ ತಿಳಿದಿರುವುದು ಬಹಳ ಮುಖ್ಯವಾದ ವಿಷಯವಾಗಿದೆ. ಮತ್ತು ಅದು ಹೆಚ್ಚು ಮುಖ್ಯ ಎಂದು ನಾನು ಭಾವಿಸುತ್ತೇನೆ. ಆದರೆ, ನಾನು ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ'' ಎಂದು ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಂಕ ಪಟ್ಟಿ ಎಂಟನೇ ಸ್ಥಾನ: ಎಂಟು ಪಂದ್ಯಗಳಲ್ಲಿ ಮೂರನ್ನು ಗೆದ್ದು ಆರು ಅಂಕಗಳೊಂದಿಗೆ ಐಪಿಎಲ್ 2024ರ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಂಟನೇ ಸ್ಥಾನದಲ್ಲಿ ನಿಂತಿದೆ. ಡೆಲ್ಲಿ ಕ್ಯಾಪಿಟಲ್ ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 67 ರನ್‌ಗಳಿಂದ ಸೋಲು ಅನುಭವಿಸಿದೆ. ಬುಧವಾರ, ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಲಿದೆ. ಕುಲದೀಪ್ ಅವರು ಆಡಿದ ಐದು ಪಂದ್ಯಗಳಲ್ಲಿ 15.20 ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್, ಅಭಿಷೇಕ್ ಪೊರೆಲ್, ರಿಕಿ ಭುಯಿ, ಯಶ್ ಧುಲ್, ಶಾಯ್ ಹೋಪ್, ಪೃಥ್ವಿ ಶಾ, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕುಶಾಗ್ರಾ, ಸ್ವಸ್ತಿಕ್ ಚಿಕಾರಾ, ಇಶಾಂತ್ ಶರ್ಮಾ, ಜ್ಯೆ ರಿಚರ್ಡ್ಸನ್, ರಸಿಖ್ ದಾರ್ ಸಲಾಮ್, ವಿಕ್ಕಿ ಓಸ್ಟ್ವಾಲ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ಖಲೀಲ್ ಅಹ್ಮದ್, ಸುಮಿತ್ ಕುಮಾರ್, ಅಕ್ಸರ್ ಪಟೇಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ರಿಷಬ್ ಪಂತ್ (ಸಿ), ಜೇಕ್ ಫ್ರೇಸರ್-ಮೆಕ್‌ಗುರ್ಕ್.