ಯಾದಗಿರಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಇಂದು ನಡೆಯಿತು. ಹಯ್ಯಾಳಪ್ಪ (11), ನಾಗರಾಜ್ (10) ಹಾಗೂ ಮನೋಜ್ (10) ಮೃತರು. ಈ ಪೈಕಿ ಇಬ್ಬರು ನಗನೂರ ಗ್ರಾಮ ಹಾಗು ಓರ್ವ ಖಾನಾಪುರ ಗ್ರಾಮದ ಬಾಲಕ ಎಂದು ಗೊತ್ತಾಗಿದೆ.
ಬಿಸಿಲ ತಾಪ ತಾಳಲಾರದೇ ಮಧ್ಯಾಹ್ನ ಗ್ರಾಮದ ಪಕ್ಕದ ಕೆರೆಗೆ ಮೂವರು ಈಜಲು ತೆರಳಿದ್ದರು. ಕೆರೆಗೆ ಹಾರಿದಾಗ ಕೆಸರಿನಲ್ಲಿ ಕಾಲು ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರದನ ಮುಗಿಲು ಮುಟ್ಟಿತ್ತು. ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಲಕರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಶಹಾಪುರ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ: ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರ ಜೀವ ಉಳಿಸಿ ಪ್ರಾಣಬಿಟ್ಟ ವ್ಯಕ್ತಿ - Man Drowned