ETV Bharat / state

ಕಾರಿನ ಗಾಜು ಒಡೆದು ಕದಿಯುತ್ತಿದ್ದ ಗ್ಯಾಂಗ್​ ಅರೆಸ್ಟ್​: ಶ್ರೀಮಂತರ ಏರಿಯಾಗಳೇ ಇವರ ಟಾರ್ಗೆಟ್​! - Thieves Arrested - THIEVES ARRESTED

ಕಾರುಗಳ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ​ ತಮಿಳುನಾಡು ಮೂಲದ ಖತರ್ನಾಕ್ ಗ್ಯಾಂಗ್ ಖಾಕಿ ಬಲೆಗೆ​ ಬಿದ್ದಿದೆ. ಶ್ರೀಮಂತ ಜನರು ವಾಸಿಸುತ್ತಿದ್ದ ಏರಿಯಾಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

thieves
ಕಾರಿನ ಗಾಜು ಒಡೆದು ಕದಿಯುತ್ತಿದ್ದ ಗ್ಯಾಂಗ್​ ಬಂಧನ (ETV Bharat)
author img

By ETV Bharat Karnataka Team

Published : Sep 1, 2024, 12:45 PM IST

ಬೆಂಗಳೂರು: ಕಾರುಗಳ ಗಾಜುಗಳನ್ನು ಒಡೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ರಾಮಜೀನಗರ ಗ್ಯಾಂಗ್ ಸದಸ್ಯರ ಸಹಿತ ನಾಲ್ವರು ಆರೋಪಿಗಳನ್ನು ಇಲ್ಲಿನ ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Thieves arrest
ಕಾರಿನ ಗಾಜು ಒಡೆದು ಕಳ್ಳತನ (ETV Bharat)

ಕೃತ್ಯ ಎಸಗುತ್ತಿದ್ದ ಮುರಳಿ (38), ಸೆಂಥಿಲ್ (50) ಮತ್ತು ಮೂರ್ತಿ (49) ಹಾಗೂ ಕದ್ದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಜಾನ್ (35) ಬಂಧಿತರು. ಆರೋಪಿಗಳಿಂದ 7 ಲ್ಯಾಪ್‌ಟಾಪ್‌ಗಳ ಸಹಿತ 5.85 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Thieves arrest
ಕಾರಿನ ಗಾಜು ಒಡೆದು ಕಳ್ಳತನ (ETV Bharat)

ತಮಿಳುನಾಡಿನ ತಿರುಚನಾಪಳ್ಳಿ ಮೂಲದ ಆರೋಪಿಗಳು ಬೇರೆ ಬೇರೆ ನಗರಗಳಲ್ಲಿ ಸ್ಥಿತಿವಂತರು ಹೆಚ್ಚಾಗಿ ನೆಲೆಸಿರುವ ಏರಿಯಾಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮನೆ ಬಳಿ ನಿಲ್ಲಿಸಿರುವ ಕಾರುಗಳ ಗಾಜಿನ ಮೂಲಕ ಒಳಗೆ ಏನೇನಿದೆ ಎಂದು ಗಮನಿಸಿ, ರಬ್ಬರ್ ಬ್ಯಾಂಡ್ ಹಾಗೂ ಗೋಲಿ ಸಹಾಯದಿಂದ ಗಾಜನ್ನು ಒಡೆಯುತ್ತಿದ್ದರು. ನಂತರ ಒಳಗಿರುವ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಆರೋಪಿ ಜಾನ್‌ಗೆ ಮಾರಾಟ ಮಾಡುತ್ತಿದ್ದರು.

Thieves arrest
ಕಾರಿನ ಗಾಜು ಒಡೆದು ಕಳ್ಳತನ (ETV Bharat)

ಬೆಂಗಳೂರಿನಲ್ಲಿ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು, ಮತ್ತೊಂದು ಕೃತ್ಯಕ್ಕೆ ಆರೋಪಿಗಳು ಸಜ್ಜಾಗಿದ್ದಾಗಲೇ ಬಂಧಿಸಿದ್ದಾರೆ. ಮಾರಕಾಸ್ತ್ರ, ಖಾರದ ಪುಡಿ ಸಹಿತ ಸಿದ್ಧವಾಗಿದ್ದ ಐವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳು ಬೆಂಗಳೂರಿನ 8 ಕಡೆಗಳಲ್ಲಿ ಕೃತ್ಯ ಎಸಗಿರುವುದು ಕಂಡು ಬಂದಿದೆ. ಸದ್ಯ ಆರೋಪಿತರಿಂದ 5.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ದರೋಡೆ ಯತ್ನ: 56 ಪ್ರಕರಣಗಳ ರೌಡಿಶೀಟರ್ ಕಾಲಿಗೆ ಗುಂಡೇಟು - Rowdy sheeter Shot

ETV Bharat Logo

Copyright © 2024 Ushodaya Enterprises Pvt. Ltd., All Rights Reserved.