ETV Bharat / state

ಎಲ್ಲೆಡೆ ಬಿರುಸಿನಿಂದ ಸಾಗಿದ ಮತದಾನ; ಈ ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು - Boycott of Voting - BOYCOTT OF VOTING

ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿದೆ. ಆದ್ರೆ ಚಿತ್ರದುರ್ಗದ ಮ್ಯಾಕ್ಲುರಹಳ್ಳಿ ಜನರು ಮತದಾನ ಬಹಿಷ್ಕರಿಸಿದ್ದಾರೆ. ಕೋಲಾರದ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮತದಾರರ ಮನವೊಲಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಶಸ್ವಿಯಾಗಿದ್ದಾರೆ.

VILLAGERS BOYCOTTED VOTING  LOK SABHA ELECTION 2024  KOLAR  CHITRADURGA
ಬಹಿಷ್ಕರಿಸಿದ ಗ್ರಾಮಸ್ಥರು
author img

By ETV Bharat Karnataka Team

Published : Apr 26, 2024, 12:40 PM IST

Updated : Apr 26, 2024, 3:32 PM IST

ಚಿತ್ರದುರ್ಗ/ಕೋಲಾರ: ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಭರ್ಜರಿ ಮತದಾನ ಸಾಗುತ್ತಿದೆ. ಅನೇಕರು ತಮ್ಮ ಕುಟುಂಬ ಸಮೇತರಾಗಿ ಆಯಾ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಆದ್ರೆ ಚಿತ್ರದುರ್ಗದ ಮ್ಯಾಕ್ಲುರಹಳ್ಳಿ ಮತ್ತು ಕೋಲಾರದ ಬೆಗ್ಲಿಬೆಣಜೇನಹಳ್ಳಿಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.

ಕುಡಿಯುವ ನೀರಿಗಾಗಿ ಮತದಾನ ಬಹಿಷ್ಕಾರ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮ್ಯಾಕ್ಲುರಹಳ್ಳಿಯಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮ್ಯಾಕ್ಲೂರಹಳ್ಳಿಯ ಎ.ಕೆ ಕಾಲೋನಿ, ಬೋವಿಹಟ್ಟಿಯಲ್ಲಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಯುವವರೆಗೆ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಮ್ಯಾಕ್ಲೂರಹಳ್ಳಿಯ ಮತಗಟ್ಟೆ ಸಂಖ್ಯೆ 122ರಲ್ಲಿ ಮತ ಚಲಾಯಿಸದೆ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದಾರೆ.

ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರ: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಗೊಲ್ಲಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿಲ್ಲ. ಸಮುದಾಯ ಭವನವಿಲ್ಲ, ಕಂದಾಯ ಇಲಾಖೆ ಸಾಗುವಳಿ ಚೀಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂದು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ 380 ಮತಗಳಿದ್ದು, ಇಡೀ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಸಮಸ್ಯೆಗಳು ಬಗೆಹರಿಸುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ‌ ನಡೆಸಿದರು. ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಹಾಕಿದ್ದು, ಮತಗಟ್ಟೆಗೆ ತೆರಳದೆ ಬೀದಿಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತಗಟ್ಟೆ ಬಳಿ ಮಹಿಳೆಗೆ ಹೃದಯ ಸ್ತಂಭನ, ಮತದಾನಕ್ಕೆ ಬಂದ ವೈದ್ಯ ಉಳಿಸಿದ್ರು ಪ್ರಾಣ - CARDIAC ARREST

ಹನೂರಿನ ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ: ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ, ತುಳಿಸಿಕರೆ, ತೇಕಣೆ, ಪಡಸಲನತ್ತ ಗ್ರಾಮಗಳಲ್ಲಿ ಮತದಾನದಿಂದ ಜನರು ದೂರ ಉಳಿದಿದ್ದಾರೆ. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರವಿದ್ದು, ಬಹಿಷ್ಕರಿಸಿದ್ದಾರೆ.

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದರೂ ಸಹ ಯಾರೂ ಇದುವರೆಗೂ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಚುನಾವಣೆ ಬಂದ ಬಳಿಕ ಮಾತ್ರ ಕೇವಲ ಭರವಸೆ ನೀಡಿ ಹೋಗುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಆಯಾ ಗ್ರಾಮಸ್ಥರು ಹೇಳಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಪಡಸಲನಾತ್ತ ಗ್ರಾಮದಲ್ಲಿ ಮತದಾರರನ್ನು ಮನವೂಲಿಸಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಕೆಲವು ಮತದಾರರು ಮಾತ್ರ ಮತದಾನ ಮಾಡಿ‌ ಇನ್ನುಳಿದವರು ಮತದಾನದಿಂದ ದೂರು ಉಳಿದಿದ್ದಾರೆ.

ಮತದಾರರ ಮನವೊಲಿಕೆ: ಕೋಲಾರ ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಬಾರ್​ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಮತದಾನ ಬಹಿಷ್ಕರಿಸಿದ್ದ ಜನರ ಮನವೊಲಿಸಲಾಗಿದೆ. ಮತದಾನ ಸಮಯ ಕಳೆದ್ರೂ ಸಹ ಮತಗಟ್ಟೆ ಸಂಖ್ಯೆ 249ಗೆ ಏಜೆಂಟರು ಹಾಗೂ ಮತದಾರರು ಯಾರೂ ಬಂದಿರಲಿಲ್ಲ. ಬಾರ್ ಸ್ಥಳಾಂತರ ಮಾಡುವ ಭರವಸೆ ನೀಡಿದ ನಂತರ ಮತದಾನ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇದಕ್ಕೆ ಅಧಿಕಾರಿಗಳು ಒಪ್ಪಿದ ಬಳಿಕ

ಓದಿ: ಜಿಲ್ಲಾಧಿಕಾರಿಯಿಂದ ಸೀರೆಯಲ್ಲಿ ಮತ ಜಾಗೃತಿ: ಮತದಾರರಿಗೆ ಹಾಡಿನ ಮೂಲಕ ವಿಶಿಷ್ಟ ಸ್ವಾಗತ - Special Voting Awareness

Last Updated : Apr 26, 2024, 3:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.