ETV Bharat / state

ತೀರ್ಥಹಳ್ಳಿ‌ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಬೆಂಗಳೂರಿನ ಲಾಡ್ಜ್​ನಲ್ಲಿ ಸಾವು

ತೀರ್ಥಹಳ್ಳಿ‌ ತಹಶೀಲ್ದಾರ್ ಅವರು ಬೆಂಗಳೂರಿನ ಲಾಡ್ಜ್​ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : Oct 17, 2024, 7:15 AM IST

ಶಿವಮೊಗ್ಗ: ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಅವರು ಬೆಂಗಳೂರಿನ ಲಾಡ್ಜ್​ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನ್ಯಾಯಾಲಯದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಜಕ್ಕಣ್ಣ ಗಾಂಧಿನಗರ ಬಳಿಯ ಲಾಡ್ಜ್​ವೊಂದರಲ್ಲಿ ತಂಗಿದ್ದರು.

ಬುಧವಾರ ಮಧ್ಯಾಹ್ನದಿಂದ ಕುಟುಂಬದವರು ಹಾಗೂ ಅಧಿಕಾರಿಗಳ ಫೋನ್​ ಕರೆಗೆ ಸಿಗದ ಕಾರಣ, ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದರು. ಮೊಬೈಲ್​ ಲೊಕೇಷನ್ ಚೆಕ್ ಮಾಡಿದಾಗ ಲಾಡ್ಜ್​​ನಲ್ಲಿ ಇರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಬಳಿಕ ಲಾಡ್ಜ್​ನ ರೂಂಗೆ ಹೋಗಿ ನೋಡಿದಾಗ ಜಕ್ಕಣ್ಣ ಗೌಡರ್ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಅವರ ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಗುರುವಾರ ಅವರ ಮೃತದೇಹವನ್ನು ಹುಟ್ಟೂರು ಗದಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಪಿಜಿಯ 4ನೇ‌ ಮಹಡಿಯಿಂದ ಜಿಗಿದು ತಮಿಳುನಾಡಿನ ಯುವಕ ಆತ್ಮಹತ್ಯೆ

ಕಳೆದ ಒಂದು ವರ್ಷದಿಂದ ಜಕ್ಕಣ್ಣ ಗೌಡರ್​​ ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಜನರ ಮೆಚ್ಚುಗೆ ಗಳಿಸಿದ್ದರು. ಸದ್ಯ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ವಾಲಿಬಾಲ್ ತರಬೇತಿ ನೀಡುತ್ತಿದ್ದ ವೇಳೆ ಕುಸಿದುಬಿದ್ದು ಶಿಕ್ಷಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.