ETV Bharat / state

ಬೆಂಗಳೂರು: ತಂದೆ-ತಾಯಿಯ ಜಗಳ ಬಿಡಿಸಲು ಹೋದ ಮಗನ ಹತ್ಯೆ - FATHER KILLS SON - FATHER KILLS SON

ತಂದೆ-ತಾಯಿಯ ನಡುವಿನ ಜಗಳ ಬಿಡಿಸಲು ಹೋದ ಮಗ ಕೊಲೆಯಾದ ಘಟನೆ ಬೆಂಗಳೂರಲ್ಲಿ ನಡೆದಿದೆ.

FATHER KILLS SON
ಮೃತ ಯುವಕ ಯಶವಂತ್ (ETV Bharat)
author img

By ETV Bharat Karnataka Team

Published : Jun 5, 2024, 4:47 PM IST

Updated : Jun 5, 2024, 5:05 PM IST

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ (ETV Bharat)

ಬೆಂಗಳೂರು: ತಂದೆ-ತಾಯಿಯ ಜಗಳವನ್ನು ಬಿಡಿಸಲು ಹೋದ ಮಗ ಕೊಲೆಯಾದ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಬುಧವಾರ ನಡೆದಿದೆ. ಸಾಫ್ಟ್​ವೇರ್ ಉದ್ಯೋಗಿ ಯಶವಂತ್ (23) ತನ್ನ ತಂದೆಯಿಂದಲೇ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿ. ಆರೋಪಿ ಬಸವರಾಜು ಎಂಬಾತನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಸವರಾಜು ಅವರ ತಾಯಿಗೆ ವಯಸ್ಸಾಗಿದ್ದು, ಹಾಸಿಗೆ ಹಿಡಿದಿದ್ದರು. ತಾಯಿಯ ವಿಚಾರ ಸೇರಿದಂತೆ ಕೆಲವು ವಿಚಾರಗಳಿಗಾಗಿ ಪತಿ ಪತ್ನಿಯ ನಡುವೆ ಆಗಾಗ್ಗೆ ಗಲಾಟೆಗಳಾಗುತ್ತಿದ್ದವು. ಇಂದು ಬೆಳಗ್ಗೆಯೂ ಸಹ ಗಲಾಟೆಯಾಗುತ್ತಿದ್ದಾಗ ಪತ್ನಿಯ ಮೇಲೆ ಬಸವರಾಜು ಹಲ್ಲೆಗೆ ಮುಂದಾಗಿದ್ದ. ಮಗ ಯಶವಂತ್ ಮಧ್ಯಪ್ರವೇಶಿಸಿ ತಂದೆಯನ್ನು ತಡೆದಿದ್ದಾನೆ. ಇದರಿಂದ ಕೋಪಗೊಂಡ ತಂದೆ ಹಾಗು ಮಗನ ನಡುವೆ ವಾಗ್ವಾದ ನಡೆದಿದೆ. ಬಸವರಾಜು ಅಡುಗೆ ಮನೆಯಲ್ಲಿದ್ದ ಚಾಕು ಹಿಡಿದು ಮಗನನ್ನು ಬೆದರಿಸಲು ಯತ್ನಿಸಿದ್ದಾನೆ. ನಂತರ ಮಗನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಯಶವಂತ್​ನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ‌.

"ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬಸವರಾಜುನನ್ನು ಬಂಧಿಸಲಾಗಿದೆ" ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ: ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ - Young Man Murder

Last Updated : Jun 5, 2024, 5:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.