ETV Bharat / state

ಹುಲಗಿಯಲ್ಲಿ ಉಧೋ ಉಧೋ ಉದ್ಘೋಷ ; ಮೂರು ಲಕ್ಷ ಭಕ್ತಸಾಗರದ ಮಧ್ಯೆ ಹುಲಿಗೆಮ್ಮ ದೇವಿ ರಥೋತ್ಸವ ಸಂಭ್ರಮ! - Huligemma Devi Maha Rathotsava - HULIGEMMA DEVI MAHA RATHOTSAVA

ಕೊಪ್ಪಳದಲ್ಲಿ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.

shree-huligemma-devi-maha-rathotsava
ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ (ETV Bharat)
author img

By ETV Bharat Karnataka Team

Published : May 31, 2024, 10:48 PM IST

ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ (ETV Bharat)

ಕೊಪ್ಪಳ : ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಅಪಾರ ಜನ ಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 30ರಿಂದ ಜೂನ್ 3ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಾತ್ರೆಯ ಪ್ರಮುಖಘಟ್ಟವಾದ ಮಹಾರಥೋತ್ಸವ ಇಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನೆರವೇರಿತು.

ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವ ಕಣ್ತುಂಬಿಕೊಂಡರು.

ಅವ್ಯವಸ್ಥೆ, ಜಿಲ್ಲಾಡಳಿತಕ್ಕೆ ಭಕ್ತರ ಹಿಡಿಶಾಪ : ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರುತ್ತಾರೆ ಎಂದು ಗೊತ್ತಿದ್ದರೂ, ಜಿಲ್ಲಾಡಳಿತ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಬರದಿಂದ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಬಣಗುಡುತ್ತಿದೆ. ದೇವಿಯ ದರ್ಶನಕ್ಕೆ ಬಂದ ಭಕ್ತರ ಪುಣ್ಯಸ್ನಾನಕ್ಕೆ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕಿತ್ತು ಎಂಬುದು ಭಕ್ತರ ಆಗ್ರಹವಾಗಿತ್ತು. ಸೂಕ್ತ ವಸತಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಭಕ್ತರು ವಾಸ್ತವ್ಯ ಮಾಡಿದ್ದು ಕಂಡು ಬಂತು. ಕೋಟ್ಯಂತರ ರೂಪಾಯಿ ಭಕ್ತಿಕಾಣಿಕೆ ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದು ಬಹುತೇಕ ಭಕ್ತರ ಪ್ರಶ್ನೆಯಾಗಿತ್ತು.

ಇದನ್ನೂ ಓದಿ : ಉಜ್ಜಯಿನಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ಅದ್ಧೂರಿ - Marula Siddheshwar Swami Fair

ETV Bharat Logo

Copyright © 2024 Ushodaya Enterprises Pvt. Ltd., All Rights Reserved.