ETV Bharat / state

ರಾಯಚೂರು: ಏರುತ್ತಿರುವ ತಾಪಮಾನ, ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸವಾರರಿಗೆ ಶೆಲ್ಟರ್ ವ್ಯವಸ್ಥೆ - sunlight - SUNLIGHT

ವಾಹನ ಸವಾರರಿಗಾಗಿ ಟ್ರಾಫಿಕ್​ ಸಿಗ್ನಲ್​ಗಳ ಬಳಿ ಜಿಲ್ಲಾಡಳಿತ ಶೆಲ್ಟರ್​ಗಳ ವ್ಯವಸ್ಥೆ ಮಾಡಿದೆ.

ಶೆಲ್ಟರ್ ವ್ಯವಸ್ಥೆ
ಶೆಲ್ಟರ್ ವ್ಯವಸ್ಥೆ
author img

By ETV Bharat Karnataka Team

Published : Apr 9, 2024, 6:10 PM IST

ರಾಯಚೂರು : ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದೆ, ಬಿಸಿಲೂರು ಎಂದೇ ಖ್ಯಾತಿ ಪಡೆದಿರುವ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿ ಜನರನ್ನು ಬಸವಳಿಯುವಂತೆ ಮಾಡುತ್ತಿದೆ. ಹೀಗಾಗಿ ನಗರದ ಟ್ರಾಫಿಕ್ ಸಿಗ್ನಲ್ ಬಳಿ ವಾಹನ ಸವಾರರ ಅನುಕೂಲಕ್ಕೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ಬಸವೇಶ್ವರ ವೃತ್ತದ ಹತ್ತಿರ ಟ್ರಾಫಿಕ್ ಸಿಗ್ನಲ್ ಇರುವುದ್ದರಿಂದ ಬಿಸಿಲಿನಲ್ಲಿ ವಾಹನ ಸವಾರರು ನಿಲ್ಲುತ್ತಾರೆ. ಈ ಸಮಯದಲ್ಲಿ ವಾಹನ ಸವಾರರು ನಿಲ್ಲಲ್ಲು ಕಷ್ಟವಾಗುತ್ತಿದೆ. ಇದರಿಂದ ಜಿಲ್ಲಾಡಳಿತವು ಸವಾರರಿಗೆ ನೆರಳಿನ ವ್ಯವಸ್ಥೆ ಒದಗಿಸುವ ತೀರ್ಮಾನಕ್ಕೆ ಬಂದು, ಶೆಲ್ಟರ್ ವ್ಯವಸ್ಥೆ ಮಾಡಿದೆ. ಸದ್ಯ ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಿಗ್ನಲ್ ಇರುವಾಗ ಕೊಂಚ ನೆರಳಿನ ರಿಲ್ಯಾಕ್ಸ್ ಸಿಗುತ್ತಿದೆ.

ಕಳೆದ ಬಾರಿಗೆ ಹೋಲಿಸಿದರೆ, ಈ ಸಲ 43 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ. ಜನರಲ್ಲಿ ಮನವಿ ಮಾಡುವುದು ಏನೆಂದರೆ ಬೆಳಗ್ಗೆ 6ರಿಂದ 11 ಗಂಟೆ ವರಗೆ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಬಳಿಕ ಸಂಜೆ ವೇಳೆ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಬೇಕು. ಹೀಟ್​ ಸ್ಟೋಕ್​ ಈ ಸಂದರ್ಭದಲ್ಲಿ ಹೆಚ್ಚಾಗಿ ಆಗುವ ಸಂಭವವಿದೆ. ತಲೆಗೆ ಟೋಪಿ, ಹೆಚ್ಚಾಗಿ ನೀರು ಕುಡಿಯುವುದು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತು ಜಿಲ್ಲಾಡಳಿತದಿಂದ ವಾಹನ ಸವಾರರಿಗೆ ನೆರಳಿ ವ್ಯವಸ್ಥೆ ಒದಗಿಸುವ ಹಿನ್ನೆಲೆಯಲ್ಲಿ ಶೆಲ್ಟರ್ ನಿಲುಗಡೆ ಮಾಡಿರುವುದು ಒಳ್ಳೆಯ ಕಾರ್ಯ ಎಂದು ವೈದ್ಯರಾದ ಡಾ.ನಾಗರಾಜ ಬಾಲ್ಕಿ ಹೇಳಿದ್ದಾರೆ.

ಸದ್ಯ ರಣ ಬಿಸಿಲಿನ ತಾಪಕ್ಕೆ ಜನರು ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಗಡೆ ಬರಲು ಸಾಧ್ಯವಾಗದ ಸ್ಥಿತಿ ಇದೆ. ಆದರೂ ಅನಿವಾರ್ಯ ಇರುವವರು ಹೊರಗೆ ಬರಲೇಬೇಕಾಗುತ್ತದೆ. ಈಗಾಗಲೇ ಓಡಾಡುವ ಜನರು ತಲೆಗೆ ಬಟ್ಟೆ ಹಾಕಿಕೊಂಡು, ಮುಖ ಕವರ್​ ಮಾಡಿಕೊಳ್ಳಬೇಕಾಗ ಅಗತ್ಯವಿದೆ. ಅಷ್ಟೇ ಅಲ್ಲ ಸೂರ್ಯನ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಜನರು ಛತ್ರಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅಲ್ಲದೇ, ದೇಹ ತಣಿಸಲು ಸಹ ತಂಪಾದ ಹಣ್ಣುಗಳು, ಪಾನಿಯಗಳನ್ನು ಸೇವಿಸಲು ಮೊರೆ ಹೋಗುತ್ತಿದ್ದಾರೆ. ಜನ ಬೀಡ ಪ್ರದೇಶದಲ್ಲಿ ವಿವಿಧ ಸಂಘಟನೆಗಳು ನೀರಿನ ಅರವಟಿಗೆ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಬೀದಿ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವವರು ತಮ್ಮ ಬದುಕಿನ ಬಂಡಿ ಸಾಗಿಸಲು ಬಿಸಿಲಿನಲ್ಲೇ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ. ವಿಪರೀತವಾದ ಬಿಸಿಲಿನಿಂದ ಬಿಸಿಯಾದ ಗಾಳಿ ಬಡೆಯುವ ಹಿನ್ನೆಲೆಯಿಂದಾಗಿ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವ ಸಾಧ್ಯತೆ ಇರುವುದ್ದರಿಂದ ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸಹ ಸಾರ್ವಜನಿಕರಿಗೆ ಸೂಚಿಸಿದ್ದು, ಟ್ರಾಪಿಕ್ ಸಿಗ್ನಲ್ ಬಳಿ ಶೆಲ್ಟರ್ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ ನಡೆಗೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಿಸಿಲೋ ಬಿಸಿಲು: ಮನೆಯಲ್ಲೇ ತಯಾರಿಸಿ ಈ ತಂಪು ಪಾನೀಯ ಕುಡಿಯಿರಿ; ಆರೋಗ್ಯ ಕಾಪಾಡಿಕೊಳ್ಳಿ - Summer Drinks

ETV Bharat Logo

Copyright © 2024 Ushodaya Enterprises Pvt. Ltd., All Rights Reserved.