ETV Bharat / state

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣದಲ್ಲಿ ಸಿದ್ದತೆ : ಈ ಬಾರಿ 'ಇವ ನಮ್ಮವ - ಇವ ನಮ್ಮವ' ಶೀರ್ಷಿಕೆ - Multicultural National Drama

ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಿದ್ಧತೆ ನಡೆದಿದೆ.

ಮೈಸೂರು
ಮೈಸೂರು
author img

By ETV Bharat Karnataka Team

Published : Mar 5, 2024, 5:15 PM IST

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ

ಮೈಸೂರು : ನಾಳೆಯಿಂದ ಮೈಸೂರು ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಲಿದೆ. ರಂಗ ಹಬ್ಬಕ್ಕೆ ರಂಗಾಯಣ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈ ಬಾರಿ ವಿಶ್ವಗುರು ಬಸವಣ್ಣನವರ 'ಇವ ನಮ್ಮವ ಇವ ನಮ್ಮವ' ಎಂಬ ವಚನದ ಸಾಲನ್ನು ಈ ಬಾರಿಯ ಬಹುರೂಪಿಯ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ನಾಳೆ ಮಾರ್ಚ್ 06 ರಿಂದ ಮಾರ್ಚ್ 11 ರವರೆಗೆ 06 ದಿನಗಳ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.

ಯಾವಾಗಲೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಶಿವರಾತ್ರಿಯ ಸಂದರ್ಭದಲ್ಲಿ ತಡವಾಗಿ ಬಹುರೂಪಿ ನಡೆಯುತ್ತಿದೆ. ಇದರ ಜೊತೆಗೆ ರಂಗಾಯಣದ ನಿರ್ದೇಶಕರು ಇಲ್ಲದೇ ಬಹುರೂಪಿ ನಡೆಯುತ್ತಿದೆ.

ಈ ನಾಟಕೋತ್ಸವದಲ್ಲಿ ವಿವಿಧ ಬಗೆಯ ಬೇರೆ ಬೇರೆ ರಾಜ್ಯದ ನಾಟಕಗಳು ನಡೆಯುತ್ತವೆ‌. ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕೀರ್ಣ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ, ದೇಶಿಯ ಆಹಾರ ಮೇಳ, ಚಿತ್ರಕಲೆ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ ನಡೆಯಲಿದೆ. ಈ ನಾಟಕೋತ್ಸವದಲ್ಲಿ ಉತ್ತರ ಪ್ರದೇಶ, ಮುಂಬೈ, ಕೋಲ್ಕತ್ತಾ, ಮಣಿಪುರ, ಕೇರಳ, ಮಹಾರಾಷ್ಟ್ರದ 06 ರಾಜ್ಯದ 06 ನಾಟಕಗಳು, ಕನ್ನಡದ 10, ತುಳು ಭಾಷೆಯ 1 ಸೇರಿದಂತೆ ಒಟ್ಟು 17 ನಾಟಕಗಳು, ಭೂಮಿ ಗೀತಾ, ವನರಂಗ, ಕಲಾಮಂದಿರ, ಕಿರುರಂಗ ಮಂದಿರದಲ್ಲಿ ನಡೆಯಲಿದೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಆನ್​ಲೈನ್​ ಮತ್ತು ಆಫ್‌ಲೈನ್​ಗಳಲ್ಲಿ ಟಿಕೆಟ್​ಗಳನ್ನು ಖರೀದಿಸಬಹುದಾಗಿದೆ. ಪ್ರತಿ ನಾಟಕಕ್ಕೆ 100 ರೂಪಾಯಿ ಟಿಕೆಟ್ ಬೆಲೆ ಇರಲಿದೆ. ಪ್ರತಿ ನಾಟಕಕ್ಕೆ ಶೇ. 40ರಷ್ಟು ಟಿಕೆಟ್​ನ್ನು ಆನ್​​ಲೈನ್​​ನಲ್ಲಿ, ಶೇ. 40 ರಷ್ಟು ಟಿಕೆಟ್ ಅನ್ನು ರಂಗಾಯಣದಲ್ಲಿ, ಉಳಿದ 20 ರಷ್ಟನ್ನು ನಾಟಕ ನಡೆಯುವ ದಿನ ಖರೀದಿಸಬಹುದಾಗಿದೆ.

ಇವ ನಮ್ಮವ ಇವ ನಮ್ಮವ ಗಾಯನ

ರಂಗಾಯಣದ ಉಪ ನಿರ್ದೇಶಕಿ ಹೇಳಿದ್ದೇನು? : 'ಇವ ನಮ್ಮವ ಇವ ನಮ್ಮವ' ಎಂಬ ಶೀರ್ಷಿಕೆಯಡಿ ಸರ್ವರನ್ನ ಒಳಗೊಂಡು ಸಮ ಸಮಾಜದ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಯಾವ ರೀತಿ ವಚನಕಾರರು ಮುಂದಾದರೋ, ಅದೇ ರೀತಿ ಸಾಹಿತ್ಯ ಜ್ಞಾನವಿರುವ ನಮ್ಮ ಜಾನಪದ ತಂಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಕರಕುಶಲ ಮೇಳ ಇರಬಹುದು, ಪುಸ್ತಕ ಮೇಳ ಇರಬಹುದು, ಒಟ್ಟಾರೆ ಬಹುರೂಪಿಯ ಎಲ್ಲವನ್ನೂ ಆಶಯಕ್ಕೆ ಪೂರ್ವಕವಾಗಿ ರೂಪಿಸುವ ಪ್ರಯತ್ನ ಮಾಡಿದ್ದೇವೆ.

ಈ ವರ್ಷದ ಬಹುರೂಪೀಯ ವಿಶೇಷ ಎಂದರೆ ಪ್ರತಿ ವರ್ಷದಂತೆ ವಸ್ತು ಪ್ರದರ್ಶನ ಜೊತೆಗೆ ಎರಡು ಅಥವಾ ನಾಲ್ಕು ಪ್ರಾತ್ಯಕ್ಷಿಕೆ ಬರುತ್ತಿದ್ದವು. 12ನೇ ಶತಮಾನದಲ್ಲಿ ಕಾಯಕ ಸಿದ್ದಾಂತಕ್ಕೆ ನೈತಿಕ ಮೌಲ್ಯವನ್ನು ತಂದು ಕೊಟ್ಟಿದ್ದು ಚಳವಳಿಗಾರರು. ಅದಕ್ಕೆ ನಾವು ಅವರನ್ನು ಪ್ರತಿ ಬಿಂಬಿಸಬೇಕೆಂದು ನಮ್ಮ ರಂಗಾಯಣದಲ್ಲಿ ಈ ಬಾರಿ 10 ರಿಂದ 11 ಕಾಯಕವನ್ನು ತೋರಿಸುವ ಒಂದು ಪ್ರಾತ್ಯಕ್ಷಿಕೆ ಆಯೋಜಿಸಿರುವುದು ಈ ಬಾರಿಯ ವಿಶೇಷ. ಹಾಗೆಯೇ ಬಸವಣ್ಣ ಅವರ ವಚನಗಳಲ್ಲಿ ಇರುವ ಸಾಮಾಜಿಕ ಕಳಕಳಿಯ ಆಧಾರಿತ ವಚನಗಳನ್ನು, ನಮ್ಮ ಮೈಸೂರಿನ ಚಿತ್ರರಂಗದ ಹಿರಿಯ ಶಿವಲಿಂಗಪ್ಪ ಸೀರೀಸ್ ಪೇಂಟಿಂಗ್ ಮಾಡಿದ್ದಾರೆ‌ ಎಂದರು.

ಆ ಎಲ್ಲ ಪೇಂಟಿಂಗ್​ಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಮೇಲೆ ರಿಯಲಿಸ್ಟಿಕ್ ಪೇಂಟಿಂಗ್​ಗಳು ಇವೆ. ಮೈಸೂರಿನ ಪಾರಂಪರಿಕ ಶೈಲಿಯ ಪೇಂಟಿಂಗ್ ಇವೆ. ಹೀಗೆಯೇ ಹತ್ತಾರು ಪೇಂಟಿಂಗ್​ಗಳನ್ನು ಮಾರ್ಚ್ 6 ರಿಂದ 10 ರವರೆಗೆ 'ಇವ ನಮ್ಮವ ಇವ ನಮ್ಮವ' ಎಂಬ ಬಹುರೂಪಿಯಲ್ಲಿ ಎಲ್ಲರೂ ಕಾಣಬಹುದು. ಒಟ್ಟು ಯಕ್ಷಗಾನ ಸೇರಿ 19 ನಾಟಕಗಳು ಇವೆ. ಒಟ್ಟು 6 ದಿನಗಳ ಕಾಲ ಈ ನಾಟಕಗಳು ನಡೆಯುತ್ತವೆ ಎಂದು ತಿಳಿಸಿದರು.

ಜೊತೆಗೆ ಎಲ್ಲರಿಗೂ ಗೊತ್ತಿರುವ ಹಾಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇದೆ. ಆದ್ದರಿಂದ ಅಂದಿನ ಈ ಎಲ್ಲ ಕಾರ್ಯಕ್ರಮಗಳು ಮಹಿಳಾ ಪ್ರಧಾನ ಕಾರ್ಯಕ್ರಮಗಳಾಗಿವೆ. ಮಹಿಳಾ ಪರ ಆಶಯಗಳನ್ನ ಹೊಂದಿದ ನಾಟಕಗಳಾಗಿವೆ. ಜೊತೆಗೆ ಶಿವರಾತ್ರಿಯೂ ಸಹ ಇದೆ. ಮಹಿಳಾ ದಿನಾಚರಣೆಗೆ ಕೇಂದ್ರಿಕರಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಹೇಳಿದ್ದೇನು? : 'ಈ ಬಾರಿಯ ಬಹುರೂಪಿಯ ರಾಷ್ಟ್ರೀಯ ಮಹೋತ್ಸವದಲ್ಲಿ ಪ್ರತಿವರ್ಷದಂತೆಯೇ ಎರಡು ದಿನಗಳ ವಿಚಾರ ಸಂಕೀರ್ಣ ಇದೆ. ವಾಸ್ತವವಾಗಿ ಈ ಬಾರಿಯ ಬಹುರೂಪಿ ಯ 'ಇವ ನಮ್ಮವ ಇವ ನಮ್ಮವ' ಎನ್ನುವುದು ಬಹುತ್ವ ಸಂಸ್ಕೃತಿಯನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿರುವ ಭಾರತೀಯ ವೈವಿಧ್ಯತೆಯ ಬಿಂಬಿಸುವುದಾಗಿದೆ. ಆ ದಿಕ್ಕಿನಲ್ಲಿ ಈ ಸಾರಿಯೂ ನಾಡಿನಾದ್ಯಂತ ವಿಚಾರವಂತ, ಚಿಂತಕರು ಮತ್ತು ಜ್ಞಾನಿಗಳು ಬರುತ್ತಾ ಇದ್ದಾರೆ.

ಎರಡು ದಿನಗಳವರೆಗೆ ನಡೆಯುವ ವಿಚಾರ ಸಂಕೀರ್ಣದಲ್ಲಿ ವಚನ ಕಾಲದ, ಶರಣರ ಕಾಲದ ಆಶಯಗಳು ಏನಿತ್ತು?. ಕಾಯಕ ತತ್ವಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ವೃತ್ತಿಯಿಂದ ಯಾರೂ ಕೀಳಲ್ಲ ಎಂಬ ದೃಷ್ಟಿಕೋನ. ಆ ಆಶಯದ ಮೇಲೆ ಅವರು ಯಾರಿಗೆ ಮಹತ್ವ ಕೊಟ್ಟಿದ್ದಾರೆ?. ಶೋಷಿತ ಸಮುದಾಯಗಳು ಮತ್ತು ಮಹಿಳೆಯರಿಗೆ ವಿಶೇಷವಾಗಿ ಪ್ರಾಧಾನ್ಯತೆ ಕೊಟ್ಟು, ಆ ವಿಚಾರಗಳನ್ನು ಒಳಗೊಂಡಂತೆ ಮಹಿಳಾ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು ಮತ್ತು ಕೆಳ ವರ್ಗಗಳ ಸಮಸ್ಯೆಗಳು ಏನಿತ್ತು? ಎಂಬುದನ್ನು ಒಳಗೊಂಡಂತೆ ಆ ಸಮಸ್ಯೆಗಳನ್ನು ಕುರಿತು ಚರ್ಚೆ ಮಾಡುವಂತೆ ಎರಡು ದಿನಗಳ ವಿಚಾರ ಸಂಕೀರ್ಣ ಇದೆ ಎಂದಿದ್ದಾರೆ.

ಎಲ್ಲಾ ಬಗೆಯಲ್ಲಿಯೂ ನಮಗೆ ಸಮಾನತೆ ಬಿಂಬಿಸುವ ಮಹಿಳೆಯರು, ಪುರುಷರು, ಚಿಂತಕರು, ಸಾಹಿತಿಗಳು ಅಲ್ಲಿ ಭಾಗವಹಿಸುತ್ತಾ ಇದ್ದಾರೆ. ನಾಳೆಗೆ ಚಪ್ಪರದ ದಿನ ಅಂತ ಹೇಳ್ತೀವಿ. ಜಾನಪದ ಮೊದಲಿಗೆ ಆರಂಭವಾಗುತ್ತೆ. ನಾಡಿನ ಬಹುದೊಡ್ಡ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅದನ್ನ ಉದ್ಘಾಟಿಸುತ್ತಾರೆ. ಅವರ ಜೊತೆ ಮತ್ತೊಬ್ಬರು ಮುಖ್ಯ ಅತಿಥಿಯಾಗಿ ಜಯಲಕ್ಷ್ಮಿ ಸೀತಾಪುರ ಇರುತ್ತಾರೆ.

ನಾಡಿದ್ದು ಬಹುರೂಪಿ ನಾಟಕೋತ್ಸವ ಉದ್ಘಾಟನೆಯನ್ನ ಕನ್ನಡದ ಸಮಕಾಲೀನ ಮಹತ್ವದ ಕವಿ, ಚಿತ್ರ ಸಾಹಿತಿ, ನಾಟಕಕಾರರು ಆಗಿರುವಂತಹ ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಕಾಳಜಿಯುಳ್ಳ ಜಯಂತ್ ಕಾಯ್ಕಿಣಿ ಅವರು ಮಾಡುತ್ತಿದ್ದಾರೆ ಎಂದರು.

ನಮ್ಮ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹಾದೇವಪ್ಪನವರು, ಸಂಸದ ಪ್ರತಾಪ್ ಸಿಂಹ ಅವರು ಭಾಗವಹಿಸಲಿದ್ದಾರೆ. 7ನೇ ತಾರೀಖು ವಾಸ್ತವವಾಗಿ ಬಹುರೂಪಿ ನಾಟಕದ ಅನಾವರಣ ಸಂಜೆಗೆ ಆರಂಭವಾಗಲಿದೆ. ಬಹುರೂಪಿ ಪ್ರೇಮಿಗಳು, ರಂಗಾಯಣ ಪ್ರೇಮಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ರಂಗು, ಚಲನ ಚಿತ್ರೋತ್ಸವಕ್ಕೂ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.