ಹುಬ್ಬಳ್ಳಿ: ಕರ್ನಾಟಕ ರಾಜ್ಯ ಈಗ ಸಂಪೂರ್ಣ ಗೂಂಡಾ ರಾಜ್ಯವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು.
ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇತ್ತೀಚಿಗೆ ನೇಹಾ ಹಿರೇಮಠ ಕೊಲೆಯಾದಾಗ ರಾಜ್ಯ ತಲ್ಲಣಗೊಂಡಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲೇ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲ ಅನ್ನೋ ಚರ್ಚೆ ನಡೆದಿತ್ತು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಕೊಲೆ, ಸುಲಿಗೆ, ದರೋಡೆ ನಡೀತಿದೆ. ಇದನ್ನು ಸರ್ಕಾರಕ್ಕೆ ಕಂಟ್ರೋಲ್ ಮಾಡೋಕೆ ಆಗುತ್ತಿಲ್ಲ. ಸಚಿವರು ನೇಹಾ ಹತ್ಯೆಯಾದಾಗ ಬೇಜಾವ್ದಾರಿಯಾಗಿ ಮಾತನಾಡಿದ್ದರು. ಆದರೆ ಈಗ ಅಂಜಲಿ ಮರ್ಡರ್ ಕೇಸ್ ಆಗಿದೆ ಎಂದರು.
ನಾನು ಅವರ ಅಮ್ಮನ ಜೊತೆ ಮಾತಾಡಿದೆ. ಮೊದಲೇ ಅವರಿಗೆ ಬೆದರಿಕೆ ಇತ್ತು. ಅವರ ಅಮ್ಮ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಪೊಲೀಸರು ಕುಚೇಷ್ಠೆ ಮಾಡಿ ಕಳುಹಿಸಿದ್ದರು. ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವ್ಯವಧಾನದಿಂದ ಹೇಳೋ ಮಾತೇ ಇಲ್ಲ. ಜನರ ನೆಮ್ಮದಿ ಕೆಡಿಸೋ ಕೆಲಸವನ್ನು ಸರ್ಕಾರ ಮಾಡಿದೆ. ಆರೋಪಿ ಗಿರೀಶ್ ಬಂಧನವಾಗಿದ್ದಾನೆ. ಆದ್ರೆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಸ್ಟೇಷನ್ ಮುಚ್ಚಿಬಿಡಿ: ಅಂಜಲಿ ಅಂಬಿಗೇರ ಹತ್ಯೆಯಾಗಿರೋದು ಕಾಡಿನಲ್ಲಲ್ಲ. ಜನನಿಬಿಡ ಪ್ರದೇಶದಲ್ಲಿ. ಅಂತಹ ಕೊಲೆ ಬಗ್ಗೆ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ. ಇದು ಅಸಮರ್ಥ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಅಂಜಲಿ ಮನೆಯಲ್ಲಿ ಮಾತನಾಡಿದ ಅವರು, ನೇಹಾ ಹಿರೇಮಠ ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹುದೇ ಹತ್ಯೆಯಾಗಿದೆ ಅಂದ್ರೆ ಸರ್ಕಾರ ಸತ್ತಿದೆಯೋ ಬದುಕಿದೆಯೋ?. ಎರಡು ಹತ್ಯೆಗೆ ಸರ್ಕಾರ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಎಫ್ಐಆರ್ ಮಾಡಲ್ಲ ಅಂದ್ರೆ ಪೊಲೀಸ್ ಸ್ಟೇಷನ್ ಯಾಕೆ, ಮುಚ್ಚಿಬಿಡಿ. ಇದು ರಣಹೇಡಿ ಸರ್ಕಾರ. ಇದು ಕೊಲೆ ಪಾತಕರನ್ನು ರಕ್ಷಣೆ ಮಾಡೋ ಸರ್ಕಾರ. ಅಂಜಲಿ ಮನೆಯವರಿಗೆ ಸರ್ಕಾರಿ ನೌಕರಿ ಕೊಡಬೇಕು. 50 ಲಕ್ಷ ಪರಿಹಾರ ಕೊಡಬೇಕು. ಸ್ವಂತ ಮನೆ ಕೊಡಬೇಕು. ಅಕಸ್ಮಾತ್ ಕೊಡದೇ ಇದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested