ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಯು ಕೃತ್ಯದ ಬಳಿಕ ಬಿಎಂಟಿಸಿ ಬಸ್‌ನಲ್ಲಿ ತೆರಳಿರುವ ವಿಡಿಯೋ ಲಭ್ಯವಾಗಿದೆ. ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆ ಮುಂಭಾಗದ ನಿಲ್ದಾಣದಿಂದ ಬಸ್ ಹತ್ತಿರುವ ಆರೋಪಿಯ ದೃಶ್ಯಗಳು ಬಸ್ನಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾರ್ಚ್ 1ರಂದು ಆರೋಪಿ ಪ್ರಯಾಣಿಸಿರುವ ಬಿಎಂಟಿಸಿ ವೋಲ್ವೋ ಬಸ್‌ನ ಕ್ಯಾಮೆರಾದ ಸಮಯದ ಪ್ರಕಾರ ಬೆಳಗ್ಗೆ 11:42ರ ಸುಮಾರಿಗೆ ಆರೋಪಿಯ ದೃಶ್ಯಗಳು ಸೆರೆಯಾಗಿವೆ. ಬಸ್ ಹತ್ತುತ್ತಿದ್ದಂತೆಯೇ ಅಲರ್ಟ್ ಆಗಿರುವ ಶಂಕಿತ ಆರೋಪಿ ಸಿಸಿಟಿವಿಯ ಕಣ್ತಪ್ಪಿಸಿ ಕುಳಿತುಕೊಂಡಿರುವುದು ಸೆರೆಯಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತುಮಕೂರಲ್ಲಿ ಶಂಕಿತನ ಕುರಿತು ರಾತ್ರಿಯಿಡೀ ಮಾಹಿತಿ ಕಲೆಹಾಕಿದ ಪೊಲೀಸ್ ತಂಡ
ಬಸ್ ಹತ್ತುತ್ತಿದ್ದಂತೆ ಒಳ ಬರುವ ಶಂಕಿತ, ಬಸ್‌ನ ಮಧ್ಯ ಅಥವಾ ಹಿಂದಿನ ಆಸನಗಳಲ್ಲಿ ಕುಳಿತರೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಬಹುದು ಎಂದು ಮುಂಭಾಗದ ಆಸನದತ್ತ ತೆರಳಿದ್ದಾನೆ. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್ಐಎಯಿಂದ ಪರಿಶೀಲನೆ