ಮಂಗಳೂರು: ನಾನು ಯಾವುದೇ ರೇಸ್ನಲ್ಲಿ ಇಲ್ಲ. ನಾನು ಮುಖ್ಯಮಂತ್ರಿ ಕುರ್ಚಿ ರೇಸ್ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ ಬಳಿಕ ಕಾಂಗ್ರೆಸ್ನಲ್ಲಿ ಸಿಎಂ ಪಟ್ಟಕ್ಕಾಗಿ ರೇಸ್ ಶುರುವಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
ನಮ್ಮ ನಾಯಕರು ಉತ್ತರಗಳನ್ನು ಕೊಡ್ತಿದ್ದಾರೆ. ಏನೂ ಮಾಡಕ್ಕಾಗಲ್ಲ. ಅವೆಲ್ಲಾ ತೀರ್ಮಾನ ಆಗೋದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ. ಸಿದ್ದರಾಮಯ್ಯ ಅವರ ಈ ಪ್ರಕರಣ ಏನಾಗುತ್ತದೆ ನೋಡೋಣ. ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ತೀರ್ಪು ಬರೋತ್ತದೋ ಇಲ್ಲವೋ ಗೊತ್ತಿಲ್ಲ. ಕಾನೂನು ಹೋರಾಟ ನಡೆಯುವ ವೇಳೆ ಏನೇ ಮಾತನಾಡಿದರೂ ನ್ಯಾಯಾಂಗ ನಿಂದನೆ ಆಗುತ್ತದೆ ಎಂದರು.
ನಮ್ಮಲ್ಲಿ 135 ಜನ ಶಾಸಕರಿದ್ದಾರೆ. ಇಂಗ್ಲಿಷ್ನಲ್ಲಿ ಒನ್ ಅಮಾಂಗ್ ಈಕ್ವಲ್ಸ್ ಅಂತಾರೆ. ಹೀಗಾಗಿ ಅವರವರ ಅನಿಸಿಕೆ ಅವರವರು ಹೇಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಅವಕಾಶವಿದೆ. ಅದನ್ನೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್ ಹಗರಣದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿ, ಕೋವಿಡ್ ವೇಳೆ ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯದಲ್ಲಿ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್ ಅವ್ಯವಸ್ಥೆ ಹೇಗಿತ್ತು ಅನ್ನುವುದನ್ನು ಜನ ನೋಡಿದ್ದಾರೆ. ಕೊರೊನಾ ಸಂದರ್ಭ ಅವರು ಒಳ್ಳೆಯ ಹೋಟೆಲ್ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ದನ್ನು ನೋಡಿದ್ದೇವೆ. ಅದರ ಬಗ್ಗೆ ಅವರು ಮಾತನಾಡದೇ ಇರೋದು ಒಳ್ಳೆಯದು. ವರದಿ ಏನು ಬಂದಿದೆ ಅದರಲ್ಲಿ ಏನು ಸತ್ಯ ಇದೆ, ಅದು ಹೊರಗಡೆ ಬರಲಿ. ತಪ್ಪಾಗಿದ್ರೆ ಅವರು ಶಿಕ್ಷೆ ಅನುಭವಿಸಲು ಮುಂದಾಗಲಿ ಎಂದರು.
ಇದನ್ನೂ ಓದಿ: ಆರ್. ವಿ ದೇಶಪಾಂಡೆ ಸಿಎಂ ಆದ್ರೆ ಮೊದಲು ಖುಷಿ ಪಡುವವನು ನಾನು : ಸಚಿವ ಮಂಕಾಳ್ ವೈದ್ಯ - Minister Mankal Vaidya