ಹುಬ್ಬಳ್ಳಿ : ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿದ್ದು, ಬಿಜೆಪಿಯ ಯಾವುದೇ ನಾಯಕರ ಹಸ್ತಕ್ಷೇಪ ಇಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಹೇಶ್ ಟೆಂಗಿನಕಾಯಿ ಅವರು ಮಾಧ್ಯಮಗಳೊಂದಿಗೆ ಕಾಂಗ್ರೆಸ್ ನಾಯಕರಿಗೆ ಆದಾಗ ತೆರಿಗೆ ಇಲಾಖೆ ನೋಟಿಸ್ ಜಾರಿ ವಿಚಾರವಾಗಿ ಮಾತನಾಡಿದರು. ಐಟಿ ದಾಳಿಯಲ್ಲಿ ಯಾವುದೇ ರೀತಿಯ ಬಿಜೆಪಿ ನಾಯಕರ ಹಸ್ತಕ್ಷೇಪ ಇಲ್ಲ. ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಮೇಲೆಯೂ ಸಹ ಐಟಿ ದಾಳಿ ಆಗಿದೆ. ಅವಾಗ ಅದರಲ್ಲಿ ಯಾರ ಕೈವಾಡ ಇತ್ತು?. ಐಟಿ ಅಧಿಕಾರಿಗಳು ಯಾವುದೇ ಪಕ್ಷ ಅಂತ ಕೆಲಸ ಮಾಡುವುದಿಲ್ಲ. ಅವರಿಗೆ ಸಿಕ್ಕ ಮಾಹಿತಿ ಪ್ರಕಾರ ಏನಾದರೂ ವ್ಯವಹಾರದಲ್ಲಿ ವ್ಯತ್ಯಾಸವಾದಾಗ ಐಟಿ ದಾಳಿ ಮಾಡುತ್ತಾರೆ. ಹಲವು ಕಡೆ ದಾಳಿ ಮಾಡಿ ಕೋಟ್ಯಂತರ ಹಣ ಪತ್ತೆ ಮಾಡಿದ್ದಾರೆ. ಬೇರೆ ಯಾರೋ ಬಂದು ಹಣವನ್ನು ವಶಪಡಿಸಿಕೊಂಡಿಲ್ಲ. ಅದು ಐಟಿ ತಪ್ಪಾ? ಕಾಂಗ್ರೆಸ್ ನವರು ಸೋಲಿನ ಭೀತಿಯಿಂದ ಈ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಂದ ಯಾವುದೇ ರೀತಿಯಾಗಿ ಅನ್ಯಾಯ ಆಗಿಲ್ಲ. ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ತಪ್ಪು ಗ್ರಹಿಕೆಯಾಗಿದೆ. ಒಂದು ವೇಳೆ ಅಗತ್ಯವಿದ್ದರೆ ದಿಂಗಾಲೇಶ್ವರ ಶ್ರೀಗಳೊಂದಿಗೆ ಮಾತನಾಡುವೆ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.
ಇದನ್ನೂ ಓದಿ : ಪ್ರಹ್ಲಾದ್ ಜೋಶಿ ವಿರುದ್ಧ ಗುಡುಗು: ದಿಂಗಾಲೇಶ್ವರ ಶ್ರೀಗಳ ಜೊತೆ ಬಿಎಸ್ವೈ ಮಾತುಕತೆ - Dingaleshwar swamiji