ETV Bharat / state

ಚಿಕ್ಕಮಗಳೂರು: 30 ಮಂಗಗಳನ್ನು ಕೊಂದು ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು - Monkeys Killed - MONKEYS KILLED

ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧವಿಟ್ಟು ಮಂಗಗಳನ್ನು ಕೊಂದು ಹಾಕಿರುವ ಅಮಾನವೀಯ ಘಟನೆ ಎನ್​.ಆರ್.ಪುರದಲ್ಲಿ ನಡೆದಿದೆ.

ಮಂಗಗಳನ್ನು ಕೊಂದು ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು
ಮಂಗಗಳನ್ನು ಕೊಂದು ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು (ETV Bharat)
author img

By ETV Bharat Karnataka Team

Published : Jun 7, 2024, 7:32 PM IST

ಚಿಕ್ಕಮಗಳೂರು: ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧವಿಟ್ಟು ಬಳಿಕ 30 ಮಂಗಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಎನ್​.ಆರ್.ಪುರ ತಾಲೂಕಿನ ದ್ಯಾವಣ ಬಳಿ ನಡೆದಿದೆ. ಬಾಳೆಹಣ್ಣು ತಿಂದು ಮಂಗಗಳು ಪ್ರಜ್ಞೆ ತಪ್ಪಿದ ಬಳಿಕ ಅವುಗಳನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು, ಕಳೇಬರವನ್ನು ರಸ್ತೆಗೆಸೆದು ಹೋಗಿದ್ದಾರೆ. 16 ಗಂಡು, 14 ಹೆಣ್ಣು ಹಾಗೂ 4 ಮರಿಗಳನ್ನು ಹತ್ಯೆ ಮಾಡಲಾಗಿದೆ. ಮೂವತ್ತು ಮಂಗಗಳ ತಲೆಯಲ್ಲೂ ಒಂದೇ ರೀತಿಯ ಗಾಯವಾಗಿ ರಕ್ತ ಸುರಿದು ಸಾವನ್ನಪ್ಪಿರುವುದು ಕಂಡುಬಂದಿದೆ.

ಸ್ಥಳಕ್ಕೆ ಡಿ.ಎಫ್.ಓ, ಆರ್.ಎಫ್.ಒ, ಪಿಎಸ್​ಐ, ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ ಅಧಿಕಾರಿಗಳು ಹಾಗೂ ಆಶಾ ಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಗಳ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್.ಆರ್.ಪುರ ಅರಣ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಪಘಾತವೆಸಗಿ ಪರಾರಿಯಾಗುವ ವೇಳೆ ಮತ್ತೆ ಬೈಕ್​ಗೆ ಡಿಕ್ಕಿ ಹೊಡೆದ ಕಾರು ಚಾಲಕ: ಇಬ್ಬರ ಸಾವು, ಮೂವರಿಗೆ ಗಾಯ - Accident in Hoskote

ETV Bharat Logo

Copyright © 2025 Ushodaya Enterprises Pvt. Ltd., All Rights Reserved.