ಮಣಿಪಾಲ:ತಮ್ಮದೇ ಬಸ್ನಡಿಗೆ ಸಿಲುಕಿ ಮಾಲೀಕ ಸಾವು - Manipal Bus Owner
ತನ್ನದೇ ಬಸ್ನಡಿ ಸಿಲುಕಿ ಮಾಲೀಕ ಸಾವನ್ನಪ್ಪಿದ ಘಟನೆ ಮಣಿಪಾಲ ಸಮೀಪ ನಡೆದಿದೆ.
![ಮಣಿಪಾಲ:ತಮ್ಮದೇ ಬಸ್ನಡಿಗೆ ಸಿಲುಕಿ ಮಾಲೀಕ ಸಾವು manipal-bus-owner-dies-after-being-hit-by-vehicle](https://etvbharatimages.akamaized.net/etvbharat/prod-images/14-03-2024/1200-675-20984908-thumbnail-16x9-news.jpg?imwidth=3840)
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Mar 14, 2024, 7:21 PM IST
ಉಡುಪಿ: ತಮ್ಮದೇ ಬಸ್‌ನ ಕೆಳಗೆ ಸಿಲುಕಿ ಮಾಲೀಕ ಸಾವನ್ನಪ್ಪಿದ ಘಟನೆ ಇಲ್ಲಿನ ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ವೊಂದರಲ್ಲಿ ಬುಧವಾರ ಸಂಭವಿಸಿದೆ.
ಮಾಂಡವಿ ಬಸ್‌ನ ಮಾಲೀಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ಇವರು ತಮ್ಮ ಬಸ್ ಅನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದು, ಅದರ ಪರಿಶೀಲನೆಗೆ ಬಂದಿದ್ದರು. ಈ ವೇಳೆ, ಬಸ್‌ನ ಎದುರು ನಿಂತಿದ್ದಾಗ ಚಾಲಕ ವಾಹನವನ್ನು ಚಲಾಯಿಸಿದ ಪರಿಣಾಮ ಅವರು ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ತತಕ್ಷಣ ದಯಾನಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಂಡಕ್ಟರ್ ಬಸ್ ಓಡಿಸಿದ ಆರೋಪ: ವಾಹನ ಪಲ್ಟಿ, ಶಿಕ್ಷಕರು ಸೇರಿದಂತೆ ಪ್ರಯಾಣಿಕರು ಪಾರು