ETV Bharat / state

ಪ್ರಾಧಿಕಾರದ ಸಭೆ ಕೋರ್ಟ್‌ ಆದೇಶ ಉಲ್ಲಂಘನೆ : ಸಂಸದ ಯದುವೀರ್‌ ಒಡೆಯರ್‌ - MP Yaduveer wadiyar

ಸಂಸದ ಯದುವೀರ್ ಒಡೆಯರ್ ಅವರು ಸಿಎಂ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ಬಗ್ಗೆ ಮಾತನಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆಗೆ ಕೋರ್ಟ್​ ತಡೆಯಾಜ್ಞೆ ಇದೆ. ಇದರ ನಡುವೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿರುವುದು ತಡೆಯಾಜ್ಞೆಯ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

m-p-yaduveer-wadiyar
ಸಂಸದ ಯದುವೀರ್‌ ಒಡೆಯರ್‌ (ETV Bharat)
author img

By ETV Bharat Karnataka Team

Published : Sep 3, 2024, 3:41 PM IST

Updated : Sep 3, 2024, 4:35 PM IST

ಸಂಸದ ಯದುವೀರ್‌ ಒಡೆಯರ್‌ (ETV Bharat)

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆಗೆ ಕೋರ್ಟ್‌ ತಡೆಯಾಜ್ಞೆ ಇದ್ದು, ಸೆಪ್ಟೆಂಬರ್‌ 5ರ ವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕೆಂಬ ಆದೇಶವಿದೆ. ಇದರ ನಡುವೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿರುವುದು ತಡೆಯಾಜ್ಞೆಯ ಉಲ್ಲಂಘನೆಯಾಗಿದೆ. ಇದರ ವಿರುದ್ಧ ತಾಯಿ (ಪ್ರಮೋದ ದೇವಿ ಒಡೆಯರ್‌) ಕಾನೂನು ಹೋರಾಟ ನಡೆಸುತ್ತಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಯದುವೀರ್‌ ಒಡೆಯರ್‌ ಅವರು, ಸಿಎಂ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸುತ್ತಿರುವುದು ಸರಿಯಲ್ಲ. ಪ್ರಾಧಿಕಾರದ ಸಭೆಗೆ ಕೋರ್ಟ್‌ ತಡೆಯಾಜ್ಞೆ ಇದ್ದರೂ ಸಿಎಂ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ನಮಗೆ ಮತ್ತು ನಮ್ಮ ತಾಯಿ ಅವರಿಗೆ ಆಹ್ವಾನ ಇದ್ದರೂ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದರು.

ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮ‍ಧ್ಯಪ್ರವೇಶ ಮಾಡಬಾರದು: ಸರ್ಕಾರ ತಡೆಯಾಜ್ಞೆ ತೆರವಾಗಿದೆ ಎಂಬ ಹೇಳಿಕೆ ನೀಡಿ ಸಭೆ ನಡೆಸುತ್ತಿರುವುದು ಕೋರ್ಟ್‌ ಆದೇಶದ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪ್ರಾಧಿಕಾರದ ರಚನೆಯನ್ನು ವಿರೋಧಿಸಿ ನಾವು ನ್ಯಾಯಾಲಯದಲ್ಲಿ ಚಾಲೆಂಜ್‌ ಮಾಡುತ್ತೇವೆ. ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮ‍ಧ್ಯಪ್ರವೇಶ ಮಾಡಬಾರದು ಎಂದು ಹೇಳಿದರು.

ಪ್ರಾಧಿಕಾರದ ರಚನೆಯಿಂದ ಮೂಲ ಧಾರ್ಮಿಕ ನಂಬಿಕೆಯ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತದೆ. ನಾವು ಧಾರ್ಮಿಕ ಹಕ್ಕುಗಳನ್ನ ಯಾರಿಗೂ ಬಿಟ್ಟು ಕೊಡುವುದಿಲ್ಲ. ಇದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಜನಪ್ರತಿನಿಧಿಯಾಗಿ ಮುಂದುವರೆಯುವುದರ ಜತೆಗೆ ನಮ್ಮ ಧರ್ಮದ ನಂಬಿಕೆಗಳನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ದೇವಾಲಯದ ಹುಂಡಿ ಹಣ ದೇವಾಲಯಗಳಿಗೆ ಬಳಕೆಯಾಗಬೇಕು. ಆದರೆ ಈ ಮಾತು ಹಿಂದೂ ದೇವಾಲಯಗಳಿಗೆ ಅನ್ವಯಿಸುವುದಿಲ್ಲ ಎಂಬ ವಿಚಾರದಲ್ಲಿ ಸಂಸದ ಯದುವೀರ್‌ ಒಡೆಯರ್‌ ಬೇಸರ ವ್ಯಕ್ತಪಡಿಸಿದರು.

ಪ್ರಾಧಿಕಾರದ ರಚನೆಗೆ ನಮ್ಮ ವಿರೋಧವಿದೆ : ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ನಾವು ವಿರೋಧಿಸುತ್ತಿಲ್ಲ. ಆದರೆ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ನಮ್ಮ ವಿರೋಧವಿದೆ ಎಂದು ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ : ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಮುಲಾಜಿಲ್ಲದೆ ಕ್ರಮ: ಸಿಎಂ ಎಚ್ಚರಿಕೆ - CM VISITS CHAMUNDI HILL

Last Updated : Sep 3, 2024, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.