ಬೆಂಗಳೂರು: 2024ನೇ ಸಾಲಿನ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಧೇಯಕವನ್ನು ಮಂಡಿಸಿ ಪರ್ಯಾಲೋಚಿಸಬೇಕೆಂದು ಕೋರಿದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು. ಈ ವಿಧೇಯಕವು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸ್ಕೀಮ್ಗಳ ವಿನಿಯೋಗಕ್ಕಾಗಿ ಮಂಡಳಿ ರಚಿಸುವ ಉದ್ದೇಶ ಒಳಗೊಂಡಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ : 25 ಲಕ್ಷ ರೂ. ಬೆಲೆ ಮೀರಿರುವ ವಿದ್ಯುತ್ ಚ್ಛಕ್ತಿಯಿಂದ ಓಡುವ ಮೋಟಾರು ಕಾರುಗಳು, ಜೀಪುಗಳು, ಓಮ್ನಿ ಬಸ್ಸುಗಳು ಮತ್ತು ಖಾಸಗಿ ಸೇವಾ ವಾಹನಗಳ ಮೇಲೆ ಆಜೀವ ತೆರಿಗೆ ವಿಸಲು ಅವಕಾಶ ಕಲ್ಪಿಸುವ 2024 ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿ ಪರ್ಯಾಲೋಚಿಸಬೇಕು ಹಾಗೂ ತಿದ್ದುಪಡಿಯೊಂದಿಗೆ ಅಂಗೀಕರಿಸಬೇಕೆಂದು ಕೋರಿದರು.
ಕೇಂದ್ರ ಮೋಟಾರು ವಾಹನಗಳು 1989ಕ್ಕೆ ಭಾರತ ಸರ್ಕಾರವು ಮಾಡಿದ ತಿದ್ದುಪಡಿಗಳನ್ನು ಜಾರಿಗೆ ತರಲು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕ ಎಂದು ಪರಿಗಣಿಸಿ ಈ ವಿಧೇಯಕ ಮಂಡಿಸಲಾಗಿದೆ ಎಂದರು.ಬಳಿಕ ಸಭಾಧ್ಯಕ್ಷ ಯು ಟಿ ಖಾದರ್ ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕಾರ ಪಡೆಯಿತು.
ಇದನ್ನೂಓದಿ: ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ: ಪರಿಶೀಲಿಸಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ