ಮಂಗಳೂರು: ಪೊಡವಿಗೊಡೆಯ ಉಡುಪಿಯ ಕೃಷ್ಣನಿಗೆ ಕೃಷ್ಣಾಷ್ಟಮಿಗೆ ನೂರಾರು ಬಗೆಯ ಭಕ್ಷ್ಯಗಳನ್ನು ನೈವೇದ್ಯವನ್ನು ಇಟ್ಟು ಆರಾಧಿಸುತ್ತಾರೆ. ಇಷ್ಟು ಬಗೆಯ ತಿಂಡಿಗಳನ್ನು ಮನೆಯಲ್ಲಿ ಮಾಡಿ ಬಡಿಸುವುದು ವಿರಳ. ಆದರೆ, ಮಂಗಳೂರಿನಲ್ಲೊಬ್ಬ ಕೃಷ್ಣಭಕ್ತೆಯೊಬ್ಬರು ಈ ಬಾರಿ 116 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸಿ ಕೃಷ್ಣ ಪ್ರೀತಿ ಮೆರೆದಿದ್ದಾರೆ.
ಮಂಗಳೂರಿನ ರಥಬೀದಿಯಲ್ಲಿರುವ ಚಂದ್ರಮತಿ ಎಸ್. ರಾವ್‌ರವರೇ ಶ್ರೀಕೃಷ್ಣನಿಗೆ ಇಷ್ಟೊಂದು ಬಗೆಯ ನೈವೇದ್ಯ ಬಡಿಸಿದವರು. 66 ವರ್ಷದ ಇವರು ಪ್ರತಿವರ್ಷವೂ ನೂರಾರು ಬಗೆಯ ನೈವೇದ್ಯಗಳನ್ನು ಕೃಷ್ಣನಿಗೆ ಬಡಿಸುತ್ತಾರೆ. ಅದರಂತೆ ಈ ಬಾರಿ ವೈವಿದ್ಯಮಯ ಉಂಡೆ, ಚಕ್ಕುಲಿ, ಕರ್ಜಿಕಾಯಿ, ಚಿರೋಟಿ, ಪೂರಿ, ಜಾಮೂನ್, ಹಲ್ವಾ, ಬಾದುಷಾ, ಬರ್ಫಿ, ಕಜ್ಜಾಯ, ಪಂಚಕಜ್ಜಾಯ, ಚೂಡಾ, ಚಿಪ್ಸ್ ಎಂದು 116 ಬಗೆಯ ನೈವೇದ್ಯಗಳನ್ನು ಬಡಿಸಿದ್ದಾರೆ. ವಾರಗಳಿಂದಲೇ ತಯಾರಿ ಆರಂಭಿಸುವ ಇವರು, ಮಡಿಯಲ್ಲಿದ್ದು, ಶುದ್ಧಾಚರಣೆಯಿಂದಲೇ ಈ ನೈವೇದ್ಯಗಳನ್ನು ತಯಾರಿಸುತ್ತಾರೆ.
![ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ](https://etvbharatimages.akamaized.net/etvbharat/prod-images/28-08-2024/22313528_man.jpg)
ಈ ಬಗ್ಗೆ ಮಾತನಾಡಿದ ಚಂದ್ರಮತಿ ಎಸ್ ಅವರು 'ಕೃಷ್ಣನೆಂದರೆ ನನಗೆ ಬಹಳ ಪ್ರೀತಿ. ಹಾಗಾಗಿಯೇ ಪ್ರತೀ ವರ್ಷವೂ ಅಷ್ಟಮಿಗೆ ನಾನು ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಬಡಿಸುತ್ತೇನೆ. ಇಷ್ಟೇ ಐಟಂ ಮಾಡಬೇಕೆಂದು ನಾನು ಮಾಡುವುದಲ್ಲ. ಎಷ್ಟು ನನ್ನಲ್ಲಿ ಸಾಧ್ಯವೋ ಅಷ್ಟು ಭಕ್ಷ್ಯಗಳನ್ನು ಮಾಡುತ್ತೇನೆ. ಇದನ್ನು ನಾನು ಮಾಡುವುದಲ್ಲ. ಆ ಶ್ರೀಕೃಷ್ಣನೇ ನನ್ನಿಂದ ಮಾಡಿಸುವುದು' ಎನ್ನುತ್ತಾರೆ.
![ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ](https://etvbharatimages.akamaized.net/etvbharat/prod-images/28-08-2024/22313528_mng56.jpg)
ಅಷ್ಟಮಿಯ ದಿನ ರಾತ್ರಿ ಕೃಷ್ಣನಿಗೆ ಈ ನೈವೇದ್ಯ ಬಡಿಸುತ್ತಾರೆ. ಹೆಚ್ಚಿನ ಭಕ್ಷ್ಯಗಳನ್ನು ಸ್ವಲ್ಪವೇ ಮಾಡಲಾಗುತ್ತದೆ. ಆದರೆ ಬಹಳಷ್ಟು ಮಂದಿಗೆ ಅವರು ಅಷ್ಟಮಿಯ ಪ್ರಸಾದ ಹಂಚುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸುಮಾರು ಏಳೆಂಟು ಬಗೆಯ ಭಕ್ಷ್ಯಗಳನ್ನು ಹೆಚ್ಚಿಗೆ ಮಾಡಿ ಅದನ್ನು ಹಂಚುತ್ತಾರೆ. ಈ ವಯಸ್ಸಿನಲ್ಲೂ ಇಷ್ಟೊಂದು ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಬಡಿಸುವ ಚಂದ್ರಮತಿಯವರ ಕೃಷ್ಣಪ್ರೀತಿಗೆ ಮೆಚ್ಚಲೇ ಬೇಕಾಗಿದೆ.
![ಬಾಲಕೃಷ್ಣನಿಗೆ 116 ಬಗೆಯ ನೈವೇದ್ಯ ಬಡಿಸಿದ ಕೃಷ್ಣ ಭಕ್ತೆ](https://etvbharatimages.akamaized.net/etvbharat/prod-images/28-08-2024/22313528_mng2.jpg)
ಶ್ರೀ ಕೃಷ್ಣ ಜನ್ಮಾಷ್ಟಮಿ ನೈವೇದ್ಯಗಳು
1. ಅವಲಕ್ಕಿ ಉಂಡೆ
2. ಮಿಠಾಯಿ ಉಂಡೆ
3. ತಿರುಪತಿ ಉಂಡೆ
4. ಬೇಸನ್ ಉಂಡೆ
5. ಗೋದಿ ಹಿಟ್ಟಿನ ಚುರುಮುಂಡೆ
6. ತಂಬಿಟ್ಟು ಉಂಡೆ
7. ಎಳ್ಳುಂಡೆ
8. ಕಡಲೆಹಿಟ್ಟಿನ ಬೇಸನ್ ಉಂಡೆ
9. ಗುಂಡಿಟ್ಟ್ ಉಂಡೆ
10. ಮುತ್ತಿನಚೂರು ಉಂಡೆ
11. ಕೊಬ್ಬರಿ ಉಂಡೆ
12. ರವೆ ಉಂಡೆ
13. ರವೆ ಬೇಸನ್ ಉಂಡೆ
14. ಡ್ರೈಫ್ರುಟ್ಸ್ ಉಂಡೆ
15. ನೆಲಕಡ್ಲೆ ಬೀಜದ ಉಂಡೆ
16. ಚಿರೋಟಿ ರವೆ ಉಂಡೆ
17. ಹೆಸರು ಬೇಳೆ ಉಂಡೆ
18. ಪುಟಾಣಿ ತಂಬಿಟ್ಟು ಉಂಡೆ
19. ರಾಗಿ ಹಿಟ್ಟಿನ ಉಂಡೆ
20. ಅರಳು ಉಂಡೆ
21. ಅಷ್ಟಮಿ ಉಂಡೆ
22. ಶೇವು ಉಂಡೆ
23. ನವರತ್ನ ಉಂಡೆ
24. ಕರಿ ಎಳ್ಳು ಗಸಗಸೆ ಉಂಡೆ
25. ಖರ್ಜುರದ ಉಂಡೆ
26. ಗೋಕಾಕ ವಿಶೇಷ ಲಡಗಿ ಉಂಡೆ
27. ಗೇರುಬೀಜದ ಉಂಡೆ
28. ಬುಂದಿ ಕಾಳಿನ ತುಪ್ಪದ ಉಂಡೆ
29. ಸುಕರಂಡೆ
30. ಬಾದಾಮಿ ಉಂಡೆ
31. ಬಿಸ್ಕತ್ ಉಂಡೆ
32. ಚರಮುರಿ ಉಂಡೆ
33. ಗುಲ್ಪವಾಟೆ ಉಂಡೆ
34. ಮನೋಹರ್ ಉಂಡೆ
35. ಮೋಹನಲಾಡು
36. ಗೋವಿಂದ ಲಡ್ಡು
37. ಮಂಡಿಗೆ
38. ಸಕ್ಕರೆ ರೊಟ್ಟಿ
39. ಜಗನಾಥ ಪೂರಿ ಕಾಜ
40. ಕರಜಿ ಕಾಯಿ
41. ಬಾದಾಮ್ ಪೂರಿ
42. ಚಿರೋಟಿ
43. ಶಂಕರಪಾಳಿ
44. ಬಾದುಷಾ
45. ಮಂಗಳೂರ ಸಾಟ
46. ಬಿಸ್ಕತ್ ತುಕುಡಿ
47. ಗುಲಾಬ್ ಜಾಮೂನ್
48. ನೇಂದ್ರ ಬಾಳೆ ಹಲ್ವಾ
49. ಕ್ಯಾರೆಟ್ ಹಲ್ವಾ
50. ಕೇಸರಿಬಾತ್
51. ಧಾರವಾಡ ಪೇಡಾ
52. ಕೇಸರಿ ಮಿಲ್ಕ್ ಪೇಡಾ
53. ರವಾ ಬರ್ಫಿ
54. ನವರತ್ನ ಬರ್ಫಿ
55. ಬಾದಾಮಿ ಬರ್ಫಿ
56. ಪಂಚರತ್ನ ಬರ್ಫಿ
57. ಸಕ್ಕರೆ ಕಡಲೆ ಬೇಳೆ ಕಜ್ಜಾಯ
58. ಬೆಲ್ಲದ ಪಾಕದ ಬೇಳೆ ಕಜ್ಜಾಯ
59. ಅವಲಕ್ಕಿ ಪಂಚಕಜ್ಜಾಯ
60. ಹುರಿದ ಹೆಸರುಕಾಳು ಕಜ್ಜಾಯ
61. ಅವಲಕ್ಕಿ ಮನೋಹರ
62. ಪುಟಾಣಿ ಪಂಚಕಜ್ಜಾಯ
63. ಅರಳುಡಿ ಪಂಚಕಜ್ಜಾಯ
64. ಅವಲಕ್ಕಿ ಅರಳು(ಪಂಚಕಜ್ಜಾಯ ಗಣಹೋಮ )
65. ಡ್ರೈಫ್ರುಟ್ಸ್ ಅವಲಕ್ಕಿ ಕಜ್ಜಾಯ
66. ನಿಪ್ಪಟು
67. ಪುದಿನ ಮಸಾಲಾ ನಿಪ್ಪಟ್ಟು
68. ಅಕ್ಕಿವಡೆ
69. ಮೇತಿ ಖಾರಿ ಬಿಸ್ಕತ್
70. ಕೋಡುಬಳೆ
71. ನವರತ್ನ ಚೂಡಾ
72. ಅವಲಕ್ಕಿ ಚೂಡಾ
73. ಪಾಪಡಿ
74. ಭಾವನಗರಿ ಘಾಟಿಯ
75. ಉಪ್ಪು ಸೀಡೆ
76. ಬೆಲ್ಲದ ಸೀಡೆ
77. ರಿಬ್ಬನ್ ಪಕೋಡ
78. ಖಾರ ಬೂoದಿ ಚೂಡಾ
79. ಸೇವೂ
80. ತುಕುಡಿ( ಶಂಕರಪಾಳಿ )
81. ನೆಲ್ಲಿಕಾಯಿ ಮುರಬ
82. ನೇಂದ್ರ ಬಾಳೆ ಚಿಪ್ಸ್
83. ಮೇತಿ ಮಟ್ಟರಿ
84. ಶುಂಠಿ ಪಾಕ
85. ಪುಟಾಣಿ ಕರದಂಟು
86. ಕಡ್ಲೆ ಉಸ್ಲಿ
87. ಕೆಸುವಿನ ಆಳ್ವಾತಿ
88. ಅಕ್ಕಿ ಬೇಳೆ ಚಕ್ಕುಲಿ
89. ತ್ರಿ ಮದುರ
90. ನವನೀತಾ
91. ಬಾದಾಮಿ ಹಾಲು
92. ಹಯಗ್ರೀವ
93. ಸಕ್ಕರೆ ಬಾಳೆಹಣ್ಣು
94. ಕೊಬ್ಬರಿ ಮಿಠಾಯಿ
95. ಬೆಣ್ಣೆ ಚಕ್ಕುಲಿ
96. ಶ್ರೀಖಂಡ
97. ಮೊಸರವಲಕ್ಕಿ
98. ಸಿಹಿ ಮೊಸರವಲಕ್ಕಿ
99. ಮೈಸೂರ್ ಪಾಕ್
100. ಚಂದ್ರಕಲಾ
101. ಸೂರ್ಯಕಲಾ
102. ಸ್ವೀಟ್ ಸಮೋಸ
103. ಗೇರು ಬೀಜದ ಉಪಕರಿ
104. ಮಸಾಲಾ ಗೋಡುoಬಿ
105. ಬೆಲ್ಲದ ಶುಂಠಿ ಪಾನಕ
106. ಕರಿದ ಮಸಾಲಾ ಕಡಲೆ
107. ಮೇತಿ ಖಾರ ಮಸಾಲಾ ಕಾಜ
108. ಪಂಚಾಮೃತ
109. ಹೋಳಿಗೆ
110. ರವೆ ಕಡುಬು
111. ಶುಂಠಿ ಚಟ್ನಿ
112. ಹೆಸರುಬೇಳೆ ಉಸ್ಲಿ
113. ಶಾಬಕ್ಕಿ ಪಾಯಸ
114. ಸುಧಾಮ್ ಅವಲಕ್ಕಿ ಕಜ್ಜಾಯ
115. ಕೇಸರಿಬಾತ್ ಬಾದಾಮಿ ಲಸ್ಸಿ
116. ಪಚಕರ್ಪುರ ಕೇಸರಿ ಹಾಲು
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗುಂಡಿ ಅಗೆದಷ್ಟು ರಾಶಿ ರಾಶಿ ಪುರಾತನ ನಾಗರಕಲ್ಲು ಪತ್ತೆ! - Ancient cobra stone found
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಲೀಲೋತ್ಸವ ಸಂಪನ್ನ; ಭಕ್ತ ಸಾಗರದ ನಡುವೆ ಸಾಗಿ ಬಂದ ಕೃಷ್ಣನ ರಥೋತ್ಸವ - vitla pindi celebration