ETV Bharat / state

ವೀಕ್ ಡೇನಲ್ಲಿ ಕೆಎಎಸ್ ಪರೀಕ್ಷೆಗೆ ವಿರೋಧ: ರಾಜಭವನದ ಕದ ತಟ್ಟಿದ ಬಿಜೆಪಿ - KAS Exam - KAS EXAM

ಮಂಗಳವಾರ ನಡೆಯಲಿರುವ ಕೆಎಎಸ್ ಪರೀಕ್ಷೆ ಮುಂದೂಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಮಾಡಿತು.

ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ
ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ (ETV Bharat)
author img

By ETV Bharat Karnataka Team

Published : Aug 26, 2024, 6:48 AM IST

ಬೆಂಗಳೂರು: ಮಂಗಳವಾರ ಕೆಪಿಎಸ್‌ಸಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಕೆಲ ಕೆಎಎಸ್ ಪರೀಕ್ಷಾ ಅಭ್ಯರ್ಥಿಗಳ ಪರವಾಗಿ ನಿಂತು ರಾಜಭವನದ ಕದ ತಟ್ಟಿದೆ. ವಾರಾಂತ್ಯದ ಬದಲು ವಾರದ ದಿನದಲ್ಲಿ ಪರೀಕ್ಷೆ ನಡೆಸುವುದರಿಂದ ಆಗಲಿರುವ ಸಮಸ್ಯೆಗಳ ಮನವರಿಕೆ ಮಾಡಿದ್ದು, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.

ಕೆಲ ಪರೀಕ್ಷಾ ಅಭ್ಯರ್ಥಿಗಳನ್ನ ಒಳಗೊಂಡಂತೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಧೀರಜ್ ಮುನಿರಾಜು ಅವರ ಬಿಜೆಪಿ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿತು, ಭಾನುವಾರ ನಡೆಯಬೇಕಿದ್ದ ಕೆಎಎಸ್ ಪರೀಕ್ಷೆಯನ್ನ ಮಂಗಳವಾರಕ್ಕೆ ಮುಂದೂಡಿದ್ದ ಸರ್ಕಾರದ ನಿರ್ಧಾರದ ಕುರಿತು ಮಾಹಿತಿ ನೀಡಿ ಈ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಆದರೆ, ಕೇವಲ ಎರಡು ದಿನ ಮುಂದೂಡಿ ವೀಕ್ ಡೇಸಲ್ಲಿ ಪರೀಕ್ಷೆ ಇಡಲಾಗಿದೆ. ಇತರ ಪರೀಕ್ಷೆಗಳೂ ಮಂಗಳವಾರ ಇರುವುದರಿಂದ ಬೇರೆ ದಿನ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.

ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಕೆಪಿಎಸ್‌ಸಿ ನ್ಯೂನತೆ ಬಗ್ಗೆ ಸವಿಸ್ತಾರವಾಗಿ ಎಲ್ಲರೂ ತಿಳಿಸಿದ್ದಾರೆ. ಫ್ರೀಡಮ್ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಬಂಧನ ಮಾಡಿದ್ದಾರೆ. ಕೋಚಿಂಗ್ ಸೆಂಟರ್‌ನಲ್ಲಿ ಪ್ರತಿಭಟನೆ ಮಾಡ್ತಿದ್ದವರನ್ನೂ ಬಂಧಿಸಿದ್ದಾರೆ. ಬಂಧಿತರನ್ನ ಬಿಡಿಸಿದ್ದೇವೆ. ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅಭ್ಯರ್ಥಿಗಳನ್ನ ಬಿಡಿಸಿದ್ದೇವೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಭಾನುವಾರ ಅಥವಾ ಸರ್ಕಾರಿ ರಜೆ ದಿನ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದೇವೆ. ಉತ್ತಮವಾಗಿ ಪರೀಕ್ಷೆ ಬರೆಯಲು ರಜೆ ದಿನ ಮಾಡಬೇಕು ಅಂತ‌ ಮನವಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಕೆಎಎಸ್ ಪರೀಕ್ಷೆ ಮಾರ್ಗಸೂಚಿ: ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಇತರ ಆಭರಣ ನಿಷೇಧ - KAS Exam Guidelines

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಳೆದ ಹತ್ತು ದಿನಗಳಿಂದ ಕೆಪಿಎಸ್‌ಸಿ ಪರೀಕ್ಷೆ ಮುಂದೂಡುವಂತೆ ಸರ್ಕಾರ ಹಾಗೂ ಕೆಪಿಎಸ್‌ಸಿಗೆ ಮನವಿ ಮಾಡಿದ್ದಾರೆ, ವೀಕ್ ಡೇಸಲ್ಲಿ ಪರೀಕ್ಷೆ ನಡೆಸುತ್ತಿದ್ದೀರಿ. ಅನೇಕ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಸೆಂಟರ್ ಕೂಡ ಬದಲಾಗಿದೆ. ಸಾಕಷ್ಟು ಕೆಪಿಎಸ್‌ಸಿ ಪರೀಕ್ಷೆ ಬರೆಯೋರು ಬೇರೆ ಕಡೆ ಕೆಲಸ‌ ಮಾಡ್ತಿರ್ತಾರೆ. ವಿಶೇಷ ಚೇತನ ಅಭ್ಯರ್ಥಿಗಳು ಸ್ಕ್ರೈಬ್ ಗಳ ಅವಲಂಭಿತರಾಗಿದ್ದು, ಅವರೆಲ್ಲರೂ ವಿದ್ಯಾರ್ಥಿಗಳಾಗಿದ್ದಾರೆ. ಸ್ರ್ಕೈಬ್‌ಗಳಿಗೂ ರಜೆ ಹಾಕಿ ಬರಲು ಸಮಸ್ಯೆ ಆಗಲಿದೆ ಹಾಗಾಗಿ ಪರೀಕ್ಷೆ ಮುಂದೆ ಹಾಕಲು ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರ ಅಥವಾ ಕೆಪಿಎಸ್‌ಸಿ ಸ್ಪಂದಿಸಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ವಿಜಯನಗರ ಸ್ಟೇಷನ್‌ನಲ್ಲಿ ಡಿಟೆನ್ಷನ್ ಮಾಡೋ ಕೆಲಸ ಮಾಡಿದ್ದಾರೆ. ಯುವಮೋರ್ಚಾ ಅಧ್ಯಕ್ಷ ಹಾಗೂ ಇಡೀ ತಂಡ ವಿಜಯನಗರ ಸ್ಟೇಷನ್‌ಗೆ ಬಂದು ಯಾಕೆ ಪ್ರತಿಭಟನಾ ನಿರತರನ್ನ ಬಂಧನ ಮಾಡಿದ್ದೀರಿ? ರಿಲೀಸ್ ಮಾಡಿ ಅಂತ ಬಿಡಿಸಿಕೊಂಡು ಬಂದಿದ್ದಾರೆ. ಇದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದು, ಇದೊಂದು ಗಂಭೀರ ವಿಚಾರ ಅಂತ ಪರಿಗಣಿಸಿದ್ದಾರೆ. ಕೆಪಿಎಸ್‌ಸಿ ಛೇರ್ಮನ್ ಜೊತೆ ಮಾತಾಡಿದ್ದಾರೆ. ಅಭ್ಯರ್ಥಿಗಳ ಜೊತೆ ಮಾತಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಕೆಪಿಎಸ್‌ಸಿಯವರು ಪರೀಕ್ಷೆ ಕ್ಯಾಲೆಂಡರ್ ನೋಡದೇ ಡೇಟ್ ಹಾಕಿದ್ದಾರೆ. ಈಗಾಗಲೇ ಅನೇಕ‌ ಬಾರಿ ಪರೀಕ್ಷೆ ಮುಂದೂಡಿದೆ. ಪರೀಕ್ಷೆ ನಿಗದಿ ಮಾಡುವ ಮುನ್ನ ಹೇಗೆ ಮಾಡಬೇಕು ಅನ್ನೋ ಪ್ರಕ್ರಿಯೆ ಮಾಡಿಲ್ಲ. ಕಡೆದಾಗಿ ಮುಂದೂಡೋದಾಗಿ ಹೇಳಿತ್ತು. ಶನಿವಾರ ಅಥವಾ ಭಾನುವಾರ ಪರೀಕ್ಷೆ ನಡೆಯುತ್ತದೆ. ಆದರೆ ವೀಕ್ ಡೇ ನಲ್ಲಿ ಪರೀಕ್ಷೆ ಡೇಟ್ ಇಟ್ಟಿದ್ದಾರೆ. ರಜೆ ಇಲ್ಲದ ದಿನ ಪರೀಕ್ಷೆ ಇಟ್ಟು ಪರೀಕ್ಷೆ ಬರೆಯುವಂತೆ ಆಗ್ರಹ ಮಾಡಿದ್ದಾರೆ. ಸಿಎಂ ಹಾಗೂ ಬೋರ್ಡ್ ಅಧ್ಯಕ್ಷರಿಗೆ ಮನವಿ ಮಾಡ್ತೀನಿ. ಇನ್ನೂ ಎರಡು ದಿನ ಅವಕಾಶ ಇದೆ. ಬೇರೆ ಊರಿನಿಂದ ಬಂದು ಪರೀಕ್ಷೆ ಬರೆಯಬೇಕು. ಕೇವಲ‌ ನಾಲ್ಕು ದಿನಗಳ‌ ಕಾಲ‌ ಪರೀಕ್ಷೆ ಮುಂದೂಡಿ. ಇಷ್ಟು ವರ್ಷಗಳ ಕಾಲ ಕಾಯ್ದು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವಂತೆ ತೇಜಸ್ವಿ ಸೂರ್ಯ ಮನವಿ ಮಾಡಿದರು.

ಇದನ್ನೂ ಓದಿ: ನಿಗದಿತ ದಿನಾಂಕದಂದೇ ಕೆಎಎಸ್ ಪರೀಕ್ಷೆ: ಮುಖ್ಯಮಂತ್ರಿ ಅಪರ ಕಾರ್ಯದರ್ಶಿಯಿಂದ ಸ್ಪಷ್ಟನೆ - KAS Exam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.