ETV Bharat / state

ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಕಡಿಮೆ ಮಾಡಲು ಸಾಫ್ಟ್‌ವೇರ್ ಆವಿಷ್ಕರಿಸಿದ್ದ ಎಂಜನಿಯರ್ ವಿರುದ್ಧದ ಪ್ರಕರಣ ರದ್ದು - Tatkal Ticket Booking App - TATKAL TICKET BOOKING APP

ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಫ್ಟವೇರ್ ಆವಿಷ್ಕರಿಸಿದ್ದ ಎಂಜಿನಿಯರ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Sep 7, 2024, 7:43 AM IST

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ಸಮಯವನ್ನು 47 ಸೆಕೆಂಡ್‌ಗೆ ಇಳಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದ ಐಐಟಿ ಪದವೀಧರನ ವಿರುದ್ಧ ರೈಲ್ವೆ ಇಲಾಖೆ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಔರಂಗಾಬಾದ್‌ನ ಗೌರವ್‌ ಢಾಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ರೈಲ್ವೆ ಕಾಯ್ದೆ ಸೆಕ್ಷನ್‌ 143ರ ಅನ್ವಯ ಅಕ್ರಮವಾಗಿ ರೈಲ್ವೆ ಟಿಕೆಟ್‌ ಖರೀದಿ ಮತ್ತು ವಿತರಣೆ ಆರೋಪದಡಿ ಹೊರಿಸಿದ್ದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಅಲ್ಲದೆ, ಅರ್ಜಿದಾರರು ಟಿಕೆಟ್‌ ಖರೀದಿಸಿಲ್ಲ ಅಥವಾ ಟಿಕೆಟ್‌ ಪೂರೈಕೆ ಮಾಡಿಲ್ಲ. ಅವರು ಐಆರ್‌ಸಿಟಿಸಿಯ ವೆಬ್‌ಸೈಟ್‌ ಅನ್ನು ಎಕ್ಸ್‌ಟೆಂಡ್‌ ಮಾಡಿದ್ದಾರೆ. ಅದರಲ್ಲಿ ಸಂಭಾವ್ಯ ಪ್ರಯಾಣಿಕರು ತತ್ಕಾಲ್‌ನಲ್ಲಿ ಟಿಕೆಟ್‌ ಬುಕ್‌ ಮಾಡಲು ತಗಲುತ್ತಿದ್ದ ಸಮಯ 7 ನಿಮಿಷದಿಂದ 40 ಸೆಕೆಂಡ್‌ಗೆ ಇಳಿಕೆಯಾಗಲಿದೆ. ಇದು ಖಂಡಿತವಾಗಿಯೂ ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಐಐಟಿ ಪದವೀಧರರೂ ಆಗಿರುವ ಅರ್ಜಿದಾರರು ಸ್ಟಾರ್ಟಪ್​​ವೊಂದರ ಸಂಸ್ಥಾಪಕರು. ಅವರು ರೈಲ್ವೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ಸಮಯ ಕನಿಷ್ಠ 5ರಿಂದ 7 ನಿಮಿಷ ಹಿಡಿಯುತ್ತಿದ್ದರಿಂದ ಅದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಬೇಕೆಂಬ ಅಲೋಚನೆಯೊಂದಿಗೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದರು. ಅದರಲ್ಲಿ ಕೇವಲ 47 ಸೆಕೆಂಡ್‌ಗಳಲ್ಲಿ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿತ್ತು.

ಅರ್ಜಿದಾರರು 2020ರ ಆರಂಭದಲ್ಲಿ ಉಚಿತವಾಗಿಯೇ ಟಿಕೆಟ್‌ ಬುಕ್‌ ಮಾಡಿಕೊಡುತ್ತಿದ್ದರು. ನಂತರ ಅವರು ಹೆಚ್ಚಿನ ಟಿಕೆಟ್‌ ಬುಕಿಂಗ್‌ಗೆ 30 ರೂ. ಶುಲ್ಕ ವಿಧಿಸುತ್ತಿದ್ದರು. ಹಾಗಾಗಿ, ರೈಲ್ವೆ ಇಲಾಖೆ ಅವರ ವಿರುದ್ಧ 2020ರ ಸೆ.29ರಂದು ಮೊದಲಿಗೆ ನೋಟಿಸ್‌ ನೀಡಿತ್ತು. ನಂತರ ರೈಲ್ವೆ ಕಾಯ್ದೆ ಸೆಕ್ಷನ್‌ 143ರ ಅನ್ವಯ ಅಕ್ರಮವಾಗಿ ರೈಲ್ವೆ ಟಿಕೆಟ್‌ ಖರೀದಿ ಮತ್ತು ವಿತರಣೆ ಆರೋಪದಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿತ್ತು. ರೈಲ್ವೆ ಪೊಲೀಸರು ತನಿಖೆ ನಡೆಸಿ ಮೂರು ವರ್ಷದ ನಂತರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಹಾಗಾಗಿ, ಅವರು ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: ಜೈವಿಕ ತಂತ್ರಜ್ಞಾನ ನೀತಿ 2024 - 2029 ಅನಾವರಣ: ಹೊಸ ಜೈವಿಕ ನೀತಿಯಲ್ಲಿನ ಅಂಶಗಳೇನು? - Biotechnology Policy

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಟಿಕೆಟ್‌ ಖರೀದಿ ಮಾಡಿಲ್ಲ ಅಥವಾ ಹಂಚಿಕೆ ಮಾಡಿಲ್ಲ. ಹಾಗಾಗಿ, ಅವರ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಇದಕ್ಕೆ ಆಕ್ಷೇಪವೆತ್ತಿದ್ದ ರೈಲ್ವೆ ಪರ ವಕೀಲರು, ವಿಚಾರಣಾ ನ್ಯಾಯಾಲಯ ಇದೀಗ ಕಾಗ್ನಿಜೆನ್ಸ್‌ ತೆಗೆದುಕೊಂಡಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ. ಈ ಹಂತದಲ್ಲಿ ಪ್ರಕರಣ ರದ್ದು ಗೊಳಿಸಬಾರದು. ಅಲ್ಲದೆ, ರೈಲ್ವೆ ರಕ್ಷಣಾ ಪಡೆಯ ಪೊಲೀಸರು ಅರ್ಜಿದಾರರನ್ನು ವಿಚಾರಣೆಗೊಳಪಡಿಸಿದಾಗ ಅವರು ಒಮ್ಮೆ ಟಿಕೆಟ್‌ ಬುಕಿಂಗ್‌ಗೆ 30 ರೂ.ಗಳಂತೆ ನಂತೆ 12,49,710 ರೂ. ಲಾಭ ಮಾಡಿಕೊಂಡಿದ್ದಾರೆ. ಹಾಗಾಗಿ, ಪ್ರಕರಣ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಆರೋಪ; ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ವಿಚಾರಣೆ ಎದುರಿಸಲು ಹೈಕೋರ್ಟ್ ನಿರ್ದೇಶನ - child pornography watching

ETV Bharat Logo

Copyright © 2025 Ushodaya Enterprises Pvt. Ltd., All Rights Reserved.