ETV Bharat / state

ಹಾಸನ ಪೆನ್​ಡ್ರೈವ್ ಹಂಚಿಕೆ ಪ್ರಕರಣ: ನವೀನ್ ಗೌಡ, ಚೇತನ್ ಗೌಡ 3 ದಿನ ಎಸ್​ಐಟಿ ವಶಕ್ಕೆ - Hassan MP Sex Scam - HASSAN MP SEX SCAM

ಹಾಸನ ಪೆನ್​ಡ್ರೈವ್ ಹಂಚಿಕೆ ಆರೋಪದಲ್ಲಿ ವಿಶೇಷ ತನಿಖಾ ತಂಡ ಬಂಧಿಸಿರುವ ಇಬ್ಬರು ಆರೋಪಿಗಳನ್ನು ಕೋರ್ಟ್​​ ಮೂರು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ.

PEN DRIVE SHARING CASE
ಎಸ್​ಐಟಿ ವಶದಲ್ಲಿರುವ ಆರೋಪಿಗಳು (ETV Bharat)
author img

By ETV Bharat Karnataka Team

Published : May 30, 2024, 7:02 AM IST

ಹಾಸನ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್​ಡ್ರೈವ್ ಹಂಚಿಕೆ ಆರೋಪದ ಮೇಲೆ ಮಂಗಳವಾರ ಬೆಂಗಳೂರಿನಲ್ಲಿ ಇಬ್ಬರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿತ್ತು. ಈ ಇಬ್ಬರು ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್ ಗೌಡ ಎಂಬವರನ್ನು ಮೂರು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಕೋರ್ಟ್​ ಆದೇಶಿಸಿದೆ.

ಎಸ್​ಐಟಿ ಪೊಲೀಸರು ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಆರೋಪಿಗಳನ್ನು ಹಾಸನದ 2ನೇ ಅಧಿಕ ಹಿರಿಯ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್​, 3 ದಿನಗಳ ಕಾಲ (ಜೂನ್​ 1ರವರೆಗೆ) ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಿತು.

ಇದನ್ನೂ ಓದಿ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ; ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲು ಎಸ್ಐಟಿ ಕಾರ್ಯತಂತ್ರ - Prajwal Revanna

ಇಂದು ಸ್ಥಳ ಮಹಜರು?: ಜೂನ್ 1ರ ಶನಿವಾರ ಸಂಜೆ 4:30ರ ವೇಳೆಗೆ ಮತ್ತೆ ಕೋರ್ಟ್​ಗೆ ಹಾಜರುಪಡಿಸಲು ತಿಳಿಸಲಾಗಿದೆ. ಇಂದು (ಗುರುವಾರ) ಇಬ್ಬರೂ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಪೆನ್​ಡ್ರೈವ್ ಹಂಚಿಕೆ ಪ್ರಕರಣದ ಕುರಿತಂತೆ ಆರೋಪಿಗಳಿಂದ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ; ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್​ - Prajwal seeks for anticipatory bail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.