ETV Bharat / state

ಸರ್ಕಾರ ವಿಫಲ ಆಗಿದ್ದರಿಂದ ಈ ಬಾಂಬ್ ಬ್ಲಾಸ್ಟ್ ಆಗಿದೆ: ಗೋವಾ ಸಿಎಂ ಪ್ರಮೋದ್ ಸಾವಂತ್​

author img

By ETV Bharat Karnataka Team

Published : Mar 7, 2024, 10:03 PM IST

ಬಿಜೆಪಿ ಸರ್ಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಚೆನ್ನಾಗಿತ್ತು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್​ ಅವರು ತಿಳಿಸಿದ್ದಾರೆ.

ಗೋವಾ ಸಿಎಂ ಪ್ರಮೋದ್ ಸಾವಾಂತ್
ಗೋವಾ ಸಿಎಂ ಪ್ರಮೋದ್ ಸಾವಾಂತ್

ದಾವಣಗೆರೆ : ಕರ್ನಾಟಕದಲ್ಲಿ ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಅಂದಿನಿಂದ ಭ್ರಷ್ಟಾಚಾರ, ಕಮ್ಯೂನಿಸಂ ಆರಂಭ ಆಯಿತು. ಇದೀಗ ಬಾಂಬ್ ಕೂಡ ಬ್ಲಾಸ್ಟ್ ಆಗಿದೆ. ಬಿಜೆಪಿ ಸರ್ಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಚೆನ್ನಾಗಿತ್ತು. ಇದೀಗ ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ವಿಫಲ ಆಗಿದ್ದರಿಂದ ಈ ಬಾಂಬ್ ಬ್ಲಾಸ್ಟ್​ ಆಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ವಾಗ್ದಾಳಿ ನಡೆಸಿದರು.

ಧಾರವಾಡದ ಕ್ಲಸ್ಟರ್ ಪ್ರಮುಖರ ಸಭೆ ಬಳಿಕ ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಭ್ರಷ್ಟ ಸರ್ಕಾರ ಆಗಿದೆ‌. ಆದ್ದರಿಂದ ಬೇಗ ಈ ಗವರ್ನಮೆಂಟ್​ ಹೋಗ್ಬೇಕಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬರಬೇಕಾಗಿದೆ. ಅಂತೋದ್ಯಯ, ಸರ್ವೋದಯ, ಗ್ರಾಮದ್ಯೋಗಕ್ಕಾಗಿ ಕೆಲಸ ಮಾಡಲಿರುವ ಸರ್ಕಾರ ಬರಬೇಕಾಗಿದೆ. ಭ್ರಷ್ಟಾಚಾರ ಮಾಡುವುದು ಬಿಟ್ರೆ ಮತ್ತೇನೂ ಕೆಲಸ ಇಲ್ಲ ಇವರಿಗೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಗೋವಾ ಸಿಎಂ ವಾಗ್ದಾಳಿ ನಡೆಸಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟದ ಬಗ್ಗೆ ಬಿಜೆಪಿ ಕಡೆ ಕಾಂಗ್ರೆಸ್ ನಾಯಕ ಬೆರಳು ಮಾಡಿ ತೋರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜನರನ್ನು ಜಾತಿ ಧರ್ಮಗಳ ಆಧಾರದ ಮೇಲೆ ಡಿವೈಡ್ ಮಾಡಿ ಮತಗಳನ್ನು ಪಡೆಯುವುದು ಇವರಿಗೆ ಹವ್ಯಾಸ ಆಗಿದೆ. ಆದರೆ ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ ಆಗಿದೆ. ಬರೇ ಕೋಮುವಾದದ ಬಗ್ಗೆ ಈ ಕಾಂಗ್ರೆಸ್ ಪಕ್ಷದವರು ಮಾತನಾಡುವವರಿದ್ದಾರೆ ಎಂದರು.

ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕುವೆ, ನಿಮ್ಮ ಯುಪಿಎ ಸರ್ಕಾರ ಹತ್ತು ವರ್ಷದಲ್ಲಿ ಏನ್ ಮಾಡಿದೆ. ನಮ್ಮ ಸರ್ಕಾರ ಏನ್ ಮಾಡಿದೆ ಎಂದು ಚರ್ಚೆ ಮಾಡೋಣ ಬನ್ನಿ ಎಂದಿದ್ದಾರೆ. ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಿಎಫ್ಐ ಅವರ ಕೆಲ ಚಟುವಟಿಕೆಗಳು ಇಲ್ಲಿ ಹೆಚ್ಚಾಗುತ್ತಿದೆ. ಈ ದೇಶದಲ್ಲಿದ್ದು, ಪಾಕಿಸ್ತಾನದ ಪರ ಘೋಷಣೆಗಳು ಕೇಳಿಬರುತ್ತಿದೆ. ಇದು ದೇಶದ್ರೋಹ ಎಂದರು.

ಇದನ್ನೂ ಓದಿ : 'ರಾಮೇಶ್ವರಂ ಕೆಫೆ ಬಾಂಬ್​​ ಬ್ಲಾಸ್ಟ್​ ಶಂಕಿತ ಆರೋಪಿ ಬಸ್​ನಲ್ಲಿ ಓಡಾಡಿರುವ ಮಾಹಿತಿ ಲಭ್ಯ': ಜಿ. ಪರಮೇಶ್ವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.