ETV Bharat / state

ಹಗರಣದ ಹಣ ಸಿಎಂ ಜುಬ್ಬಾದ ಜೇಬಿಗೆ ಹೋಯಿತಾ?: ಪರಿಷತ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಜಟಾಪಟಿ..! - Clash between BJP and Congress

ವಾಲ್ಮೀಕಿ ನಿಗಮದ ಹಗರಣದ ಕುರಿತ ಬಿಜೆಪಿ ಹಾಗೂ ಕಾಂಗ್ರೆಸ್​ ಶಾಸಕರ ನಡುವಿನ ಹೇಳಿಕೆಗಳು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

Clash between BJP and Congress in Council Session
ಪರಿಷತ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಜಟಾಪಟಿ (ETV Bharat)
author img

By ETV Bharat Karnataka Team

Published : Jul 18, 2024, 6:02 PM IST

Updated : Jul 18, 2024, 7:53 PM IST

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಲೂಟಿಯಾದ ಹಣ ಸಿಎಂ ಜುಬ್ಬಾದ ಜೇಬಿಗೆ ಹೋಗಿದೆಯಾ? ತೆರಿಗೆ ಸಂಗ್ರಹದ ಪ್ರತಿಯೊಂದು ಪೈಸೆಗೂ ಮುಖ್ಯಮಂತ್ರಿಗಳೇ ಜವಾಬ್ದಾರರು. ಅವರೇ ಕಸ್ಟೋಡಿಯನ್ ಆಫ್ ಗವರ್ನ್​ಮೆಂಟ್ ಎನ್ನುವ ಬಿಜೆಪಿ ಹೇಳಿಕೆಯು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಪರಿಷತ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಜಟಾಪಟಿ (ETV Bharat)

ಕಡತದಿಂದ ಸಿಎಂ ಜುಬ್ಬಾದ ಜೇಬು ಪದ ತೆಗೆಯಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದರೆ ಪ್ರತಿಪಕ್ಷಗಳು ಸಮರ್ಥಿಸಿಕೊಂಡವು. ನಂತರ ಕಡತ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿ ಸಭಾಪತಿಗಳು ಪರಿಸ್ಥಿತಿ ತಿಳಿಗೊಳಿಸಿದರು.

ವಿಧಾನ ಪರಿಷತ್​ನ ಮಧ್ಯಾಹ್ನದ ಕಲಾಪ ಆರಂಭಗೊಳ್ಳುತ್ತಿದ್ದಂತೆ, ನಿಯಮ 68ರ ಅಡಿ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಮುಂದುವರೆದ ಚರ್ಚೆಯ ಬಗ್ಗೆ ಮಾತನಾಡಿದ ಬಿಜೆಪಿ ಸದಸ್ಯ ನವೀನ್, "ವಾಲ್ಮೀಕಿ ನಿಗಮದಲ್ಲಿನ ಹಗರಣ ಪ್ರಕರಣವನ್ನು ಈ ಸರ್ಕಾರ ಸಿಬಿಐಗೆ ಕೊಟ್ಟಿಲ್ಲ, ಬ್ಯಾಂಕ್ ದೂರಿಗೆ ಸಿಬಿಐ ಬಂದಿದೆ. ಹಣ ವರ್ಗಾವಣೆಗೆ ಇಡಿ ಬಂದಿದೆ. ಇವರು ಸಿಬಿಐಗೆ ಕೊಡುವ ಮನಸ್ಸು ಮಾಡಿಲ್ಲ. ಯಾಕೆಂದರೆ ಅಕ್ರಮದ ಆ ಹಣ ಸಿದ್ದರಾಮಯ್ಯ ಜುಬ್ಬಾದ ಜೇಬಿಗೆ ಹೋಗಿದೆ" ಎಂದರು. ಇದಕ್ಕೆ ಕಿಡಿಕಾರಿದ ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯ ಹೆಸರು ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಡತದಿಂದ ಸಿಎಂ ಪದ ತೆಗೆಯುವಂತೆ ಆಗ್ರಹಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ನವೀನ್, "ಸಿಎಂ ಕಸ್ಟೋಡಿಯನ್ ಆಫ್ ಗವರ್ನ್​ಮೆಂಟ್ ಎಂದು ಹೇಳುತ್ತಿದ್ದೇನೆ. ತೆರಿಗೆಯ ಪ್ರತಿಯೊಂದು ಪೈಸೆಯೂ ಸಿಎಂಗೆ ಹೋಗಲಿದೆ. ಇದರಲ್ಲೇನು ತಪ್ಪಿದೆ?" ಎಂದರು. ಇದಕ್ಕೆ ಸಹಮತಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಾಂಗ್ರೆಸ್ ಆಕ್ಷೇಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. "ಸಿಎಂ ಕಸ್ಟೋಡಿಯನ್ ಆಫ್ ಗವರ್ನಮೆಂಟ್ ಎಂದರೆ ತಪ್ಪೇನು? ನಿಮ್ಮದೇನು ಸಮಸ್ಯೆ?" ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಿ ಟಿ ರವಿ, "ಸಿಎಂ ಜೇಬಿಗೆ ಹೋಗಿದೆ ಎನ್ನುವುದು ನಮ್ಮ ಆರೋಪ, ಸಿಎಂ ಜೇಬು ಅಲ್ಲದೇ ಇದ್ದರೆ, ಯಾರ ಜೇಬಿಗೆ ಹೋಗಿದೆ ಎಂದು ನೀವೇ ಹೇಳಿ" ಎಂದು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ನಂತರ ಸಭಾಪತಿ ಹೊರಟ್ಟಿ ಕಡತ ತರಿಸಿ ನೋಡಿ ನಿರ್ಧಾರ ಮಾಡುವುದಾಗಿ ಪ್ರಕಟಿಸಿ‌ ವಿಷಯಾಂತರಕ್ಕೆ ತೆರೆ ಎಳೆದರು.

ನಂತರ ಮಾತು ಮುಂದುವರೆಸಿದ ನವೀನ್, "ತೆರಿಗೆಯ ಪ್ರತಿಯೊಂದು ಪೈಸೆಗೂ ಸಿಎಂ ಜವಾಬ್ದಾರರೇ, 187 ಕೋಟಿ ರೂ. ಯಾರೇ ದುರ್ಬಳಕೆ ಮಾಡಲಿ ಅದಕ್ಕೆ ಸಿಎಂ ಜವಾಬ್ದಾರರೇ. ಹಿಂದೆ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾಗ ಸಿಎಂ ಕಸ್ಟೋಡಿಯನ್ ವೇರ್ ಈಸ್ ಮನಿ ಎನ್ನುತ್ತಿದ್ದರು. ಈಗ ನಾವು ಅದನ್ನೇ ಕೇಳುತ್ತಿದ್ದೇವೆ. ಹಗರಣದ ಹಿಂದೆ ಯಾರೆಲ್ಲಾ ಇದ್ದಾರೋ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಗರಣ ನಡೆದ ಸಮಯವೂ ಮುಖ್ಯ, ಮಾರ್ಚ್ ಕೊನೆ ವಾರದಲ್ಲಿ ಹಣ ಡ್ರಾ ಆಗಿದೆ. ಆಗ ಲೋಕಸಭಾ ಚುನಾವಣೆ ನಡೆಯುತ್ತಿತ್ತು. ಯಾಕೆ ಈ ಹಣ ಬಳಕೆಯಾಗಿದೆ ಎನ್ನುವ ವರದಿಗಳು ಪ್ರಸಾರಗೊಳ್ಳುತ್ತಿವೆ. ಹಾಗಾಗಿ ಬೇರೆಯವರಿಗೆ ತನಿಖೆಗೆ ಕೊಡದೆ ಎಸ್ಐಟಿ ಮಾಡಿದ್ದಾರೆ. ಇದರಲ್ಲಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇನ್​ಸೈಡ್ ವಿಧಾನಸೌಧ, ಔಟ್​ಸೈಡ್ ವಿಧಾನಸೌಧದ ಗ್ಯಾಂಗ್ ಎಲ್ಲರನ್ನೂ ಹಿಡಿಯಬೇಕು" ಎಂದು ಒತ್ತಾಯಿಸಿದರು.

ಹಗರಣ ಮುಚ್ಚಿಹಾಕಲು ಸಿಎಂ ಯತ್ನ: ನಿಲುವಳಿ ಬೆಂಬಲಿಸಿ ಮಾತನಾಡಿದ ಬಿಜೆಪಿ ಸದಸ್ಯ ಡಿಎಸ್ ಅರುಣ್, "ವಾಲ್ಮೀಕಿ ನಿಗಮ ಹಗರಣ ಪ್ರಕರಣ ಮುಚ್ಚಿಹಾಕುವ ಯತ್ನವನ್ನು ಸಿಎಂ ಮಾಡುತ್ತಿದ್ದಾರೆ. ಸಚಿವ ಸಂಪುಟವೂ ಇದರಲ್ಲಿ ಭಾಗಿಯಾಗಿದೆ" ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಬಿಜೆಪಿ, ಕಾಂಗ್ರೆಸ್ ಕಾಲದ ಹಗರಣ ವಿಚಾರಗಳ ಪರಸ್ಪರ ಪ್ರಸ್ತಾಪಿಸಿದ ಸದಸ್ಯರು ವಾಗ್ದಾಳಿ ನಡೆಸಿದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸಚಿವರು ಗೈರು, ಸರ್ಕಾರಕ್ಕೆ ಸಭಾಪತಿ ಚಾಟಿ: ಮಧ್ಯಾಹ್ನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಚಿವರ ಗೈರು ವಿಷಯ ಪ್ರಸ್ತಾಪಿಸಿದ ಜೆಡಿಎಸ್ ನಾಯಕ ಬೋಜೇಗೌಡ, "ಬೆಳಗಿನ ರೀತಿಯೇ ಯಥಾಸ್ಥಿತಿ ಕಾಪಾಡಿದ್ದಾರೆ" ಎಂದು ಟೀಕಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಭಾಪತಿ ಬಸವರಾಜ ಹೊರಟ್ಟಿ, "44 ವರ್ಷದಿಂದ ಮೇಲ್ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಭಾನಾಯಕರು ಒಮ್ಮೆ ಹೇಳಿದ್ದನ್ನು ಕೇಳಬೇಕು. ಪಟ್ಟಿಯಲ್ಲಿ ಇದ್ದ ಸಚಿವರನ್ನು ಕರೆಯಬೇಕು, ಇಲ್ಲ ಕಾರಣ ಕೊಡಬೇಕು. ಸದನ 10 ನಿಮಿಷ ಮುಂದೂಡುತ್ತೇನೆ. ಸಚಿವರನ್ನು ಕರೆಸಿ" ಎಂದರು. "ಸಭಾನಾಯಕರು ತಿಳಿದುಕೊಳ್ಳಬೇಕು, ಚೀಫ್ ವಿಪ್ ಏನು ಮಾಡುತ್ತಿದ್ದಾರೆ? ಎಂದರು. ನಂತರ "ಕೂಡಲೇ ಕರೆಸಲಾಗುತ್ತದೆ ಮುಂದೂಡಿಕೆ ಬೇಡ" ಎಂದರು.

ಸರ್ಕಾರದ ವಿರುದ್ಧದ ನಿಲುವಳಿಯಲ್ಲಿ‌ ಚರ್ಚೆಗೆ ಅವಕಾಶ ಕೋರಿದ ಕಾಂಗ್ರೆಸ್: "ಸರ್ಕಾರದ ವಿರುದ್ಧ ಬಿಜೆಪಿ- ಜೆಡಿಎಸ್ ಮಂಡಿಸಿದ ನಿಲುವಳಿ ಸೂಚನೆಯಡಿ ನಮಗೂ‌ ಮಾತನಾಡಲು ಅವಕಾಶ ನೀಡಿ, ಬರೀ ವಿರೋಧ ಪಕ್ಷದವರಿಗೆ ಅವಕಾಶ ನೀಡಿದ್ದೀರಿ. ನಮ್ಮ ಕಡೆಯೂ ಕೆಲವರಿಗೆ ಅವಕಾಶ ಕೊಡಿ" ಎಂದು ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು, "ನಿಲುವಳಿ ಮೇಲೆ ಅವರೆಲ್ಲಾ ಸರ್ಕಾರದ ನಿರ್ಧಾರ ವಿರೋಧಿಸಿ ಮಾತನಾಡುತ್ತಿದ್ದಾರೆ, ಸರ್ಕಾರದ ನಿಲುವು ವಿರೋಧಿಸಿ ಮಾತನಾಡುವುದಾದರೆ ಮಾತನಾಡಿ ಅವಕಾಶವಿದೆ" ಎಂದರು. "ಸರ್ಕಾರವನ್ನು ಸಮರ್ಥಿಸಿ ಮಾತನಾಡುತ್ತೇವೆ. ವಿಷಯ ಸದನದ ಆಸ್ತಿ ಎನ್ನುವುದು ಸರಿಯಾದರೂ, ಚರ್ಚೆಗೆ ಸದಸ್ಯರು ಉತ್ತರ ಕೊಡುವಂತಿಲ್ಲ. ಸಚಿವರು ಕೊಡಬೇಕು, ಅವರು ಮಾತನಾಡುತ್ತಾರೆ" ಎಂದು ಆಡಳಿತ ಪಕ್ಷದ ಸದಸ್ಯರು‌ ಚರ್ಚೆಯ ಮೇಲೆ ಮಾತನಾಡಲು ಸಮ್ಮತಿ ನಿರಾಕರಿಸಿದರು.

ಇದನ್ನೂ ಓದಿ: ವೈಯಕ್ತಿಕ ಟೀಕೆ; ಸಚಿವ ದಿನೇಶ್ ಗುಂಡೂರಾವ್ - ಡಾ. ಸಿ.ಎನ್. ಅಶ್ವತ್ಥನಾರಾಯಣ ನಡುವೆ ಜಟಾಪಟಿ - Assembly Session

Last Updated : Jul 18, 2024, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.