ETV Bharat / state

ನೇಹಾ, ಅಂಜಲಿ‌ ನಿವಾಸಕ್ಕೆ ಸಿಐಡಿ‌ ಡಿಜಿಪಿ ಭೇಟಿ, ಮಾಹಿತಿ‌ ಸಂಗ್ರಹ: ನ್ಯಾಯ ಕೊಡಿಸುವಂತೆ ಎರಡು ಕುಟುಂಬಗಳ ಮನವಿ - NEHA MURDER CASE - NEHA MURDER CASE

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಸಿಐಡಿ ಡಿಜಿಪಿ ಡಾ‌. ಎಂ.ಎ. ಸಲೀಂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ನೇಹಾ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಸಿಐಡಿ ಡಿಜಿಪಿ
ನೇಹಾ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಸಿಐಡಿ ಡಿಜಿಪಿ (ETV Bharat)
author img

By ETV Bharat Karnataka Team

Published : May 28, 2024, 4:36 PM IST

Updated : May 28, 2024, 8:13 PM IST

ನೇಹಾ, ಅಂಜಲಿ‌ ನಿವಾಸಕ್ಕೆ ಸಿಐಡಿ‌ ಡಿಜಿಪಿ ಭೇಟಿ (ETV Bharat)

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ನೇಹಾ ನಿವಾಸಕ್ಕೆ ಸಿಐಡಿ ಡಿಜಿಪಿ ಡಾ‌. ಎಂ.ಎ. ಸಲೀಂ ಅವರು ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ನಿರಂಜನ ಹಿರೇಮಠ ಮಾತನಾಡಿ, ಆರೋಪಿಗೆ ಶಿಕ್ಷೆ ಆದಾಗಲೇ ನನಗೆ ಸಮಾಧಾನ. ಖುದ್ದು ಸಿಐಡಿ ಡಿಜಿಪಿ ಅವರೇ ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಬಹುತೇಕ ತನಿಖೆ ಪೂರ್ಣಗೊಂಡಿರೋದಾಗಿ ಡಿಜಿಪಿ ಹೇಳಿದ್ದಾರೆ. ಕೆಲವೊಂದು ಮಾಹಿತಿ ಪಡೆಯಲು ಇಂದು ಮನೆಗೆ ಬಂದಿದ್ದರು. ಇದಾದ ನಂತರ ಚಾರ್ಜ್​ಶೀಟ್ ಸಲ್ಲಿಸುವುದಾಗಿ ಹೇಳಿದ್ದಾರೆ. ನನ್ನ ಮಗಳ ಕೊಲೆಯೊಂದಿಗೆ ಇಂತಹ ಷಡ್ಯಂತ್ರ ಅಂತ್ಯವಾಗಬೇಕು. ಸಿಐಡಿ‌ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ಮಾಡಿಬೇಕು ಅಂತ ಮನವಿ ಮಾಡಿದ್ದೇನೆ ಎಂದರು.

ನಮ್ಮ ಹೋರಾಟಕ್ಕೆ ನ್ಯಾಯ ಕೊಡಿಸಲಿ. ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ. ನ್ಯಾಯ ಕೊಡಿಸುವ ಭರವಸೆಯನ್ನು ಅವರು ನಮಗೆ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಮಾದರಿ ಕೇಸ್ ಆಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಮಗಳ ಕೊಲೆ ಪ್ರಕರಣದಲ್ಲಿ ಬುಡ ಸಮೇತ ತನಿಖೆ ಮಾಡಿ ಎಂದು ನಾನು ಹೇಳಿದ್ದೇನೆ. ನನ್ನ ಮಗಳ ಕೊಲೆ ಪೂರ್ವ ನಿಯೋಜಿತ ಕೃತ್ಯ. ಇಂತಹ ಕೊಲೆಗಳು ಇಲ್ಲಿಗೆ ಅಂತ್ಯ ಆಗಲಿ. ನನ್ನ ಮಗಳ ಕೊಲೆಯಲ್ಲಿ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಆ ಬಗ್ಗೆಯೂ ತನಿಖೆ ಮಾಡಲಿ ಎಂದು ಹೇಳಿದರು.

ಚಾರ್ಜ್ ಶೀಟ್ ಸಲ್ಲಿಕೆ ನಂತರ ನಾನು ಹೇಳಿದ್ದು ಏನು, ಅವರು ಮಾಡಿದ್ದು ಏನು ಎಂಬುದು ಗೊತ್ತಾಗುತ್ತದೆ. ಆನಂತರ ಈ ಬಗ್ಗೆ ಮುಂದೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಅಂಜಲಿ‌ ನಿವಾಸಕ್ಕೂ ಭೇಟಿ, ಮಾಹಿತಿ ಸಂಗ್ರಹ: ಸೋಮವಾರ ಸಂಜೆ ಸಿಐಡಿ, ಡಿಜಿಪಿ ಡಾ. ಎಂ.ಎ. ಸಲೀಂ ಅವರು ಅಂಜಲಿ ಅಂಬಿಗೇರ ಅವರ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಮೇ 15 ರಂದು ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ್​ ಅಲಿಯಾಸ್ ಗಿರೀಶ್ ಸಾವಂತ್ ಎಂಬ ಆರೋಪಿ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಈ ಸಂಬಂಧ ಅಂಜಲಿ ಸಹೋದರಿಯರು ಹಾಗೂ ಅಜ್ಜಿ ಗಂಗಮ್ಮಳ ಜೊತೆಗೆ ಸಮಗ್ರ ಮಾಹಿತಿಯನ್ನು ಪಡೆಯುವ ಸಲುವಾಗಿ ಸಿಐಡಿ ಡಿಜಿಪಿ ಭೇಟಿ ಮಾಡಿದ್ದರು.

ಅಂಜಲಿ ಸಹೋದರಿ ಯಶೋಧಾ ಮಾತನಾಡಿ, ಸಿಐಡಿ ಡಿಜಿಪಿ ಅವರು ಕೊಲೆ ಆರೋಪಿ ಗಿರೀಶ್ ಸಾವಂತ್ ಕುರಿತಾಗಿ ಕೇಳಿದರು. ಆರೋಪಿಗೆ ಶಿಕ್ಷೆಯಾಗುವುದಾಗಿ ಅವರು ಭರವಸೆ ನೀಡಿದ್ದಾರೆ. ಆರೋಪಿಗೆ ಸರಿಯಾದ ಶಿಕ್ಷೆ ಕೊಡಿಸಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಇದನ್ನೂ ಓದಿ: ತುಮಕೂರು : ಕೌಟುಂಬಿಕ ಕಲಹ, ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ ಪತಿ! - MAN BRUTALLY KILLED WIFE

Last Updated : May 28, 2024, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.