ETV Bharat / state

ಕೆಫೆ ಬಾಂಬ್ ಸ್ಫೋಟ ಪ್ರಕರಣ: ಈಗಾಗಲೇ ಶಂಕಿತರನ್ನು ಎನ್​ಐಎ ಪತ್ತೆ ಹಚ್ಚಿದೆ - ಗೃಹ ಸಚಿವ ಪರಮೇಶ್ವರ್ - G Parameshwara

ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಶಂಕಿತರನ್ನು ಎನ್​ಐಎ ಪತ್ತೆ ಮಾಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

Minister G Parameshwar
ಗೃಹ ಸಚಿವ ಜಿ.ಪರಮೇಶ್ವರ್
author img

By ETV Bharat Karnataka Team

Published : Apr 9, 2024, 1:55 PM IST

ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

ತುಮಕೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡದಿಂದ ತನಿಖೆ ನಡೆಯುತ್ತಿದೆ. ತನಿಖೆ ಬಗ್ಗೆ ಅನೇಕ ವಿಚಾರವನ್ನು ನಮಗೆ ತಿಳಿಸಿಲ್ಲ. ಈ ಪ್ರಕರಣದ ಶಂಕಿತರನ್ನು ಎನ್​ಐಎ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆಗೆ ಒಳಪಡಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಆರೋಪಿಗಳಿಗೆ ಯಾರೆಲ್ಲ ಸಂಪರ್ಕದಲ್ಲಿದ್ದರೂ, ಅವರನ್ನೆಲ್ಲ ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಬಗ್ಗೆ ಅನೇಕ ವಿಚಾರವನ್ನು ನಮಗೆ ತಿಳಿಸಿಲ್ಲ ಎಂದು ಉತ್ತರಿಸಿದರು.

ಇದೇ ವೇಳೆ, ಲೋಕಸಭೆ ಚುನಾವಣೆ ಕುರಿತು ಮಾತನಾಡಿ, ಮುದ್ದಹನುಮೇಗೌಡ ಸೋಲು, ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ ಸೇರಿದ್ದು, ಮಾಜಿ ಸಚಿವ ಮಾಧುಸ್ವಾಮಿ‌ ಕಾಂಗ್ರೆಸ್​ಗೆ ಬಂದ್ರೆ ನಾನೇ ಸ್ವಾಗತ ಮಾಡುತ್ತೇನೆ. ಮುದ್ದಹನುಮೇಗೌಡರು ಭೇಟಿ ಮಾಡಿದ್ದಾರೆ. ಸಂದರ್ಭ ಬಂದಾಗ‌ ಮತ್ತೆ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಹತ್ತು ವರ್ಷ ಕಾಲ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರವು ತಮಗೆನೂ ಉಪಯೋಗ ಆಗಿದೆ ಎಂಬ ಯೋಚನೆಯಲ್ಲಿ ಪ್ರತಿಯೊಬ್ಬ ನಾಗರಿಕ ಮುಳುಗಿದ್ದಾನೆ. ಮುಂಬರುವ ಲೋಕಸಭಾ ಚುನಾವಣೆಯ ಫಲಿತಾಂಶ ನಮ್ಮ ಪರವಾಗಿ ಇರಲಿದೆ. 300 ಸ್ಥಾನಗಳು ಎನ್​ಡಿಎ ಒಕ್ಕೂಟಕ್ಕೆ ಬರಲ್ಲ ಎಂದರು. ಏಪ್ರಿಲ್ 14ರಂದು ಕೆ.ಬಿ‌.ಕ್ರಾಸ್​ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ನಾಯಕರು ಭಾಗವಹಿಸಲಿದ್ದಾರೆ. ನಮ್ಮ 'ಇಂಡಿಯಾ' ಒಕ್ಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಚುನಾವಣೆ ಬಳಿಕ ಘೋಷಣೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning

ETV Bharat Logo

Copyright © 2024 Ushodaya Enterprises Pvt. Ltd., All Rights Reserved.