ETV Bharat / state

ಜೋಯಿಡಾದಲ್ಲಿ ನಾಡಬಾಂಬ್ ಸ್ಫೋಟ: ತನಿಖೆ ಚುರುಕು - Bomb Blast In Joida - BOMB BLAST IN JOIDA

ಪತ್ರಕರ್ತರು ಚಲಿಸುತ್ತಿದ್ದ ಕಾರಿನ ಟೈಯರ್​ಗೆ ನಾಡಬಾಂಬ್ ಸಿಲುಕಿ ಸ್ಫೋಟಗೊಂಡಿರುವ ಘಟನೆ ಕಾರವಾರದ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದಲ್ಲಿ ನಾಡಬಾಂಬ್ ಸ್ಪೋಟ
ಜೋಯಿಡಾದಲ್ಲಿ ನಾಡಬಾಂಬ್ ಸ್ಪೋಟ (ETV Bharat)
author img

By ETV Bharat Karnataka Team

Published : Jul 3, 2024, 8:13 AM IST

ಕಾರವಾರ: ಜೋಯಿಡಾ ತಾಲೂಕಿನ ಹುಡಸಾ ಅರಣ್ಯ ಇಲಾಖೆಯ ಚೆಕ್​ಪೋಸ್ಟ್ ಸಮೀಪ ನಾಡಬಾಂಬ್ ರೀತಿಯ ಬಾಂಬ್ ಕಾರಿನಡಿ ಸಿಲುಕಿ ಸ್ಪೋಟಗೊಂಡಿದೆ. ಮಂಗಳವಾರ ಬೆಳಿಗ್ಗೆ ಘಟನೆ ನಡೆಯಿತು.

ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ಟ, ಟಿ.ಕೆ.ದೇಸಾಯಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈಯರ್​ಗೆ ನಾಡಬಾಂಬ್ ಸಿಲುಕಿ ಸ್ಪೋಟಗೊಂಡಿದೆ.

ಕಾರ್ ಆಗಿದ್ದುದರಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಬೈಕ್ ಅಥವಾ ನಡೆದುಕೊಂಡು ಹೋಗುವಾಗ ಸ್ಪೋಟಗೊಂಡಿದ್ದರೆ ಜೀವಕ್ಕೆ ಹಾನಿ ಉಂಟಾಗುವ ಸಂಭವ ಇತ್ತು ಎನ್ನಲಾಗಿದೆ.

ನಾಡಬಾಂಬ್​ ಸ್ಫೋಟ
ಜೋಯಿಡಾದಲ್ಲಿ ನಾಡಬಾಂಬ್​ ಸ್ಫೋಟ: ಪೊಲೀಸರಿಂದ ತನಿಖೆ (ETV Bharat)

ಈ ನಾಡಬಾಂಬ್ ಅನ್ನು ಪ್ರಾಣಿಗಳನ್ನು ಸಾಯಿಸಲು ಅದರಲ್ಲೂ ಮುಖ್ಯವಾಗಿ ಹಂದಿಗಾಗಿ ಬಳಸುತ್ತಾರೆ. ನಾಡಬಾಂಬ್ ತೆಗೆದುಕೊಂಡು ಹೋಗುವಾಗ ಬಿದ್ದಿದೆಯೇ ಅಥವಾ ಉದ್ದೇಶಪೂರಕವಾಗಿ ಇಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

ತಾಲೂಕಿನಲ್ಲಿ ನಾಡಬಾಂಬ್ ಬಳಕೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಮತ್ತು ಪೋಲಿಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು. ನಾಡಬಾಂಬ್ ತಯಾರಿಸುವವರು ಮತ್ತು ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಅಮಾಯಕ ಪ್ರಾಣಿಗಳ ಮತ್ತು ಜನರ ಜೀವ ರಕ್ಷಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಾರಣಿಗರೇ ಗಮನಿಸಿ: ಒಂದೇ ವೆಬ್​ ಸೈಟ್​ನಲ್ಲಿ ರಾಜ್ಯದ ಎಲ್ಲ ಟ್ರೆಕ್ಕಿಂಗ್​ ಟಿಕೆಟ್ ಬುಕ್ಕಿಂಗ್​ - ಸಚಿವ ಈಶ್ವರ ಖಂಡ್ರೆ - Trekking Ticket Booking

ETV Bharat Logo

Copyright © 2024 Ushodaya Enterprises Pvt. Ltd., All Rights Reserved.