ETV Bharat / state

ಹಗಲು ಫುಡ್ ಡೆಲಿವರಿ, ರಾತ್ರಿ ಬೈಕ್‌ ಚೋರಿ: ಇದುವರೆಗೂ ಕದ್ದ ಬೈಕ್​ಗಳು 84! - Bike Thief Arrested - BIKE THIEF ARRESTED

ಬೈಕ್‌ ಕಳ್ಳನನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, 84 ಬೈಕ್‌ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ವಶಪಡಿಸಿಕೊಂಡ ಬೈಕ್​
ವಶಪಡಿಸಿಕೊಂಡ ಬೈಕ್​
author img

By ETV Bharat Karnataka Team

Published : Apr 16, 2024, 6:39 PM IST

ಬೆಂಗಳೂರು: ಹಗಲು ಹೊತ್ತಲ್ಲಿ ಫುಡ್ ಡೆಲಿವರಿಯಾಗಿ ಕೆಲಸ ಮಾಡಿ ರಾತ್ರಿ ವೇಳೆ ಬೈಕ್ ಕದಿಯುತ್ತಿದ್ದ ಖದೀಮನನ್ನು ಬಂಧಿಸಿರುವ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕದ್ದಿದ್ದ 84 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ.

ಜೆ.ಪಿ.ನಗರದ ಜರಗನಹಳ್ಳಿಯ ನಿವಾಸಿ ದೀಪು ಬಂಧಿತ ಆರೋಪಿ. ಈತನಿಂದ 3 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಯುಸಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಈತ, 19ನೇ ವಯಸ್ಸಿನಲ್ಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಕಳೆದ ಹತ್ತು ದಿನಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.

ನಂತರ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಫುಡ್ ಡೆಲಿವರಿ ನೆಪದಲ್ಲಿ ಮನೆ ಮುಂದೆ ನಿಲ್ಲಿಸಿರುವ ಬೈಕ್​​ಗಳನ್ನು ಗಮನಿಸಿ ರಾತ್ರಿ ವೇಳೆ ಬಂದು ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದ. ಇತ್ತೀಚೆಗೆ ಬೈಯ್ಯಪ್ಪನಹಳ್ಳಿಯ ಜಿ.ಎಂ.ಪಾಳ್ಯದಲ್ಲಿ ದ್ವಿಚಕ್ರ ವಾಹನ ಕದ್ದು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಬೈಕ್​
ವಶಪಡಿಸಿಕೊಂಡ ಬೈಕ್​

84 ಬೈಕ್‌ ಕಳವು!: ತಾಯಿಯೊಂದಿಗೆ ವಾಸವಾಗಿರುವ ದೀಪಕ್, ಸುಲಭವಾಗಿ ಹಣ ಸಂಪಾದಿಸಲು ಕಳ್ಳತನ ಮಾಡುವುದನ್ನೇ ಚಟವಾಗಿ ಬೆಳೆಸಿಕೊಂಡಿದ್ದ. 2019ರಲ್ಲೇ ಈತನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದರು. ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಮತ್ತೆ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ. ಬ್ಯಾಡರಹಳ್ಳಿ, ಕೋಣನಕುಂಟೆ, ಪುಟ್ಟೇನಹಳ್ಳಿ ಹಾಗೂ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದುವರೆಗೂ ಸುಮಾರು 84 ಬೈಕ್ ಕಳ್ಳತನ ಮಾಡಿದ್ದಾನೆ. ವಾಹನ ಕಳ್ಳತನದ ಜೊತೆಗೆ ಮನೆಗಳ್ಳತನಕ್ಕೂ ಸಂಚು ರೂಪಿಸಿದ್ದ‌‌. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾರಲ್ಲಿ ಹಣ ಪತ್ತೆ ಪ್ರಕರಣ: ವಾಹನ ಮಾಲೀಕರ ವಿರುದ್ಧ ಎಫ್ಐಆರ್, IT ತನಿಖೆ ಚುರುಕು - Money Seize Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.