ETV Bharat / state

ಫ್ರೀಡಂ ಪಾರ್ಕ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ: ಇಲ್ಲಿದೆ ಉಚಿತ ಡ್ರಾಪ್, ಪಿಕ್​ಅಪ್ ಸೌಲಭ್ಯ - Advanced Parking Facility

ಫ್ರೀಡಂ ಪಾರ್ಕ್​​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಹುಮಹಡಿ ಪಾರ್ಕಿಂಗ್ ಲಾಟ್ ಜೂನ್ 20ರಂದು ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ.

Bangalore Advance Parking
ಬೆಂಗಳೂರು ಅಡ್ವಾನ್ಸ್ ಪಾರ್ಕಿಂಗ್ ವ್ಯವಸ್ಥೆ (ETV Bharat)
author img

By ETV Bharat Karnataka Team

Published : Jun 13, 2024, 8:46 AM IST

Updated : Jun 13, 2024, 9:14 AM IST

ಬೆಂಗಳೂರು ಅಡ್ವಾನ್ಸ್ ಪಾರ್ಕಿಂಗ್ ವ್ಯವಸ್ಥೆ (ETV Bharat)

ಬೆಂಗಳೂರು: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರ್ಕಾರಿ ವಲಯದಲ್ಲಿ ಅಡ್ವಾನ್ಸ್ ಪಾರ್ಕಿಂಗ್ ಟೆಕ್ನಾಲಜಿ ಅಳವಡಿಸಿಕೊಂಡಿರುವ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಂಡಿದೆ. ಫ್ರೀಡಂ ಪಾರ್ಕ್​​ನಲ್ಲಿ ತಲೆ ಎತ್ತಿರುವ ಬ್ರ್ಯಾಂಡ್ ಬೆಂಗಳೂರಿನ ಮೊದಲ ಪ್ರಾಜೆಕ್ಟ್ ಆದ ಬಹುಮಹಡಿ ಪಾರ್ಕಿಂಗ್ ಲಾಟ್ ಜೂನ್ 20ರಂದು ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳಲಿದೆ. ವಿಶೇಷ ಎಂದರೆ ಇಲ್ಲಿ ವಾಹನ ಪಾರ್ಕ್ ಮಾಡಿದರೆ ನಿಗದಿತ ಸ್ಥಳಕ್ಕೆ ಉಚಿತ ಡ್ರಾಪ್ ಮತ್ತು ಪಿಕ್​ಅಪ್ ವ್ಯವಸ್ಥೆಯೂ ಇರಲಿದೆ. ಈ ಪಾರ್ಕಿಂಗ್ ತಾಣದ ವಿಶೇಷದ ಕುರಿತ ವರದಿ ಇಲ್ಲಿದೆ.

ಮೆಜೆಸ್ಟಿಕ್​ನಿಂದ ಕೂಗಳತೆ ದೂರದಲ್ಲಿರುವ ಫ್ರೀಡಂ ಪಾರ್ಕ್​​ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲಾಗಿದೆ. ಮೂರು ಮಹಡಿಗಳನ್ನು ಹೊಂದಿರುವ ಈ ಪಾರ್ಕಿಂಗ್ ಲಾಟ್ ಅತ್ಯಾಧುನಿಕ ಸುಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯ ನಿರ್ವಹಿಸಲಿದೆ. ಪಾರ್ಕಿಂಗ್ ಸಂಕೀರ್ಣ ಪ್ರವೇಶಿಸಲು ಕಾರುಗಳಿಗೆ ಎರಡು ಲೇನ್ ಮತ್ತು ಬೈಕ್​​ಗಳಿಗೆ ಎರಡು ಲೇನ್​​ಗಳನ್ನು ನಿರ್ಮಿಸಲಾಗಿದೆ. ಈ ಲೇನ್​​ಗಳು ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸಲಿದೆ.

ಪ್ರವೇಶ ದ್ವಾರದ ಬಳಿ ವಾಹನದ ನಂಬರ್ ಪ್ಲೇಟ್ ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದಂತೆ ಪ್ರವೇಶಕ್ಕೆ ಅನುಮತಿಸುವ ಚೀಟಿಯನ್ನು ಚಾಲಕರೇ ಬಟನ್ ಒತ್ತುವ ಮೂಲಕ ಪಡೆಯದುಕೊಳ್ಳಬಹುದು. ಇಲ್ಲಿಯೂ ಕ್ಯಾಮರಾ ಇದ್ದು ಚಾಲಕರ ಮುಖದ ಚಿತ್ರವನ್ನು ದಾಖಲಿಸಿಕೊಳ್ಳಲಿದೆ. ನಂತರ ನಿರ್ಗಮಿಸುವ ವೇಳೆಯಲ್ಲಿಯೂ ಚಾಲಕರ ವಿಡಿಯೋ ಸೆರೆ ಹಿಡಿಯಲಿದೆ. ಹಾಗಾಗಿ ವಾಹನವನ್ನು ಯಾರು ತಂದರು ಮತ್ತು ಯಾರು ತೆಗೆದುಕೊಂಡು ಹೋದರು ಎನ್ನುವ ದಾಖಲೆ ಇರಲಿದೆ. ಇನ್ನೂ ನಿರ್ಗಮನ ದ್ವಾರದ ಬಳಿ ಆಟೋಮ್ಯಾಟಿಕ್​ ಆಗಿ ಫಾಸ್ಟ್ ಟ್ಯಾಗ್​​ನಿಂದ ಹಣ ಕಡಿತವಾಗಲಿದೆ. ಇಲ್ಲವೇ ಯುಪಿಐ, ಡಿಜಿಟಲ್ ಮೂಲಕ ಹಣ ಪಾವತಿ ಮಾಡಬಹುದು. ನಗದು ಪಾವತಿಗೂ ಅವಕಾಶವಿದೆ.

ಈ ಪಾರ್ಕಿಂಗ್ ಲಾಟ್​ನಲ್ಲಿ 600 ಕಾರುಗಳು ಹಾಗೂ 750 ಬೈಕ್​​ಗಳನ್ನು ನಿಲ್ಲಿಸುವಷ್ಟು ಸ್ಥಳಾವಕಾಶವಿದೆ. ಪ್ರತೀ ವಾಹನದ ಪಾರ್ಕಿಂಗ್ ಮಾಡಲು ಹಳದಿ ಬಣ್ಣದ ಗೆರೆಗಳನ್ನು ಹಾಕಲಾಗಿದ್ದು, ಅದಕ್ಕೆ ಸೆನ್ಸಾರ್ ಲೈಟ್​ಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ಜಾಗದಲ್ಲಿ ವಾಹನ ಇದ್ದರೆ ಆ ಜಾಗದ ಮೇಲಿನ ಲೈಟ್ ಕೆಂಪು ಬಣ್ಣಕ್ಕೆ ತಿರುಗಲಿದ್ದು, ಖಾಲಿಯಾಗುತ್ತಿದ್ದಂತೆ ಹಸಿರು ಬಣ್ಣಕ್ಕೆ ಬದಲಾಗಲಿದೆ. ದೂರದಿಂದಲೇ ಎಲ್ಲಿ ಜಾಗ ಖಾಲಿ ಇದೆ ಎನ್ನುವುದನ್ನು ಸುಲಭವಾಗಿ ಗುರಿತಿಸಿ ಅಲ್ಲಿಗೆ ವಾಹನ ಕೊಂಡೊಯ್ದು ನಿಲ್ಲಿಸಬಹುದಾಗಿದೆ. ಇನ್ನೂ ಮಹಿಳೆಯರಿಗೆ ಪ್ರತ್ಯೇಕವಾಗಿ ಪಿಂಕ್ ಪಾರ್ಕಿಂಗ್ ವ್ಯವಸ್ಥೆ, ವಿಶೇಷ ಚೇತನರಿಗೆ ಮೀಸಲು ಪಾರ್ಕಿಂಗ್ ಸ್ಥಳವಿದೆ. ಅಲ್ಲಿ ಮಹಿಳೆಯರು ಮತ್ತು ವಿಶೇಷ ಚೇತನರು ಮಾತ್ರ ವಾಹನ ಪಾರ್ಕ್ ಮಾಡಬಹುದಾಗಿದೆ. ಪಾರ್ಕಿಂಗ್ ಏರಿಯಾದ ಗೋಡೆಗಳನ್ನು ವಿಧಾನಸೌಧ ಸೇರಿ ನಾಡಿನ ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯನ್ನು ಅನಾವರಣಗೊಳಿಸುವಂತ ಬಣ್ಣಗಳಿಂದ ವಿನ್ಯಾಸಗೊಳಿಸಲಾಗಿದೆ.

ಸೌಲಭ್ಯಗಳು: ಪ್ರತೀ ಮಹಡಿಯೂ ಸಂಪೂರ್ಣ ತುರ್ತು ಅಗ್ನಿಶಾಮಕ ವ್ಯವಸ್ಥೆ ಹೊಂದಿದೆ. ಮಹಿಳೆಯರ ಅನುಕೂಲಕ್ಕೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಪ್ರತೀ ಮಹಡಿಯಲ್ಲಿ ನಾಲ್ಕು ಕಡೆ ತುರ್ತು ಬಟನ್ ಅಳವಡಿಸಿದ್ದು, ಆತಂಕ ಅಥವಾ ತುರ್ತು ಸಂದರ್ಭದಲ್ಲಿ ಈ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಕೂಡಲೇ ಸಂಕೀರ್ಣ ನಿರ್ವಹಣೆ ಮಾಡುವ ಸಿಬ್ಬಂದಿ ಧಾವಿಸಿ ನೆರವಾಗಲಿದ್ದಾರೆ. ಪ್ರತೀ ಮಹಡಿಯಲ್ಲಿಯೂ ಆರ್.ಒ ಸಂಸ್ಕರಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ವೈಫೈ ವ್ಯವಸ್ಥೆ ಇದ್ದು, ಕಾಫಿ ಕಾರಿಡಾರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್‌ ಸ್ಪಾ, ಶೌಚಾಲಯ, ಇವಿ ಚಾರ್ಜಿಂಗ್‌, ವೀಲ್‌ ಚೇರ್‌, ಎಸ್‌ಒಎಸ್‌, ಆ್ಯಂಬುಲೆನ್ಸ್‌ ಸೇವೆ ಲಭ್ಯವಿರಲಿದೆ ಎಂದು ಪಾರ್ಕಿಂಗ್ ಸೌಲಭ್ಯ ಮತ್ತು ವ್ಯವಸ್ಥೆಗಳ ಕುರಿತು ರೈಟ್ ಪಾರ್ಕಿಂಗ್ ಸೂಪರ್​ವೈಸರ್ ಸುನೀಲ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಪಾರ್ಕಿಂಗ್‌ ಲಾಟ್‌ಗೆ ಉಚಿತ ಪಿಕ್‌ಅಪ್‌, ಡ್ರಾಪ್‌ ಸೌಲಭ್ಯ: ಈ ಪಾರ್ಕಿಂಗ್ ತಾಣದ ಮತ್ತೊಂದು ವಿಶೇಷ ಎಂದರೆ ಉಚಿತ ಡ್ರಾಪ್ ಅಂಡ್ ಪಿಕ್ ಅಪ್ ವ್ಯವಸ್ಥೆ. ಪಾರ್ಕಿಂಗ್ ಲಾಟ್ ಸುತ್ತ ಮುತ್ತಲಿರುವ ವಿಧಾನಸೌಧ, ಹೈಕೋರ್ಟ್, ಮೆಜೆಸ್ಟಿಕ್, ಚಿಕ್ಕಪೇಟೆ ಭಾಗಕ್ಕೆ ತೆರಳುವ ಜನರು ಇಲ್ಲಿ ವಾಹನ ಪಾರ್ಕ್ ಮಾಡಿದರೆ ಅವರನ್ನು ಡ್ರಾಪ್ ಮಾಡಲು ಮತ್ತು ಪಿಕ್ ಅಪ್ ಮಾಡಲು ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮೂರು ಮಾರ್ಗಗಳನ್ನು ಸಿದ್ಧಪಡಿಸಿದ್ದು, ಟೆಂಪೋ ಟ್ರಾವೆಲರ್ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಾರ್ಗ ನಗರ ನ್ಯಾಯಾಲಯ,ಕೆ .ಆರ್.ವೃತ್ತ, ವಿಧಾನಸೌಧ, ಎಂ.ಎಸ್. ಬಿಲ್ಡಿಂಗ್ ಮತ್ತು ಹೈಕೋರ್ಟ್ ಆಗಿದ್ದು, ಎರಡನೇ ಮಾರ್ಗ ಪೋಥಿಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್ ಹಾಗೂ ಮೂರನೇ ಮಾರ್ಗ ಮೂಲಕ ಉಪ್ಪಾರಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಉಚಿತ ಡ್ರಾಪ್ ಅಂಡ್ ಪಿಕ್ ಅಪ್ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಉಸ್ತುವಾರ - ತವರು ಜಿಲ್ಲೆ ಮಾತ್ರವಲ್ಲ, ಸ್ವ-ಕ್ಷೇತ್ರಗಳಲ್ಲೇ ಹಿನ್ನಡೆ: ಸಚಿವರುಗಳಿಗೆ ಹೊಣೆಗಾರಿಕೆ ಕುಣಿಕೆ! - Setback for Ministers

ಬಿಬಿಎಂಪಿಯು 79.81 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಬಹುಮಹಡಿ ಪಾರ್ಕಿಂಗ್‌ ಸಂಕೀರ್ಣ ಕೆಲ ವರ್ಷಗಳಿಂದ ಖಾಲಿ ಇತ್ತು. ಪಾರ್ಕಿಂಗ್‌ ಸಂಕೀರ್ಣದ ನಿರ್ವಹಣೆಯನ್ನು ಗುತ್ತಿಗೆಗೆ ನೀಡಲು ಬಿಬಿಎಂಪಿಯು 7 ಬಾರಿ ಟೆಂಡರ್‌ ಕರೆದರೂ, ಯಾರೊಬ್ಬರೂ ಆಸಕ್ತಿ ತೋರಿಸಿರಲಿಲ್ಲ. ಕೆಲವೊಂದು ಷರತ್ತುಗಳನ್ನು ಸಡಿಲಗೊಳಿಸಿ 8ನೇ ಬಾರಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಅಂತಿಮವಾಗಿ ಪ್ರಿನ್ಸ್‌ ರಾಯಲ್‌ ಪಾರ್ಕಿಂಗ್‌ ಸಲ್ಯೂಷನ್‌ ಬಿಸಿನೆಸ್‌ ಪ್ರೈ.ಲಿ ಮತ್ತು ಒಮ್ನಿಟೆಕ್‌ ಎಂಬ ಸಂಸ್ಥೆಗಳು ಜಂಟಿಯಾಗಿ ಗುತ್ತಿಗೆ ಪಡೆದಿವೆ. ರೈಟ್ ಪಾರ್ಕಿಂಗ್ ಹೆಸರಿನಲ್ಲಿ ಮಹುಮಹಡಿ ಪಾರ್ಕಿಂಗ್ ಸಂಕೀರ್ಣದ ನಿರ್ವಹಣೆ ಮಾಡಲಿದೆ. ಈ ಗುತ್ತಿಗೆ ಸಂಸ್ಥೆಗಳಿಗೆ 10 ವರ್ಷಗಳ ಅವಧಿಗೆ ಸಂಕೀರ್ಣವನ್ನು ಬಿಬಿಎಂಪಿಯು ಗುತ್ತಿಗೆಗೆ ನೀಡಿದ್ದು, ಇದರಿಂದ ಪಾಲಿಕೆಗೆ ವಾರ್ಷಿಕ 1.50 ಕೋಟಿ ರೂ. ವರಮಾನ ಬರಲಿದೆ.

ಪಾರ್ಕಿಂಗ್ ದರ: ಮೊದಲ 1 ಗಂಟೆವರೆಗೂ ದ್ವಿಚಕ್ರ ವಾಹನಕ್ಕೆ 15 ರೂ. ಇದ್ದರೆ, ಕಾರುಗಳಿಗೆ 25 ರೂ. ಇರಲಿದೆ. 1-2 ಗಂಟೆವರೆಗೆ ಬೈಕ್​ಗಳಿಗೆ 25 ರೂ., ಕಾರುಗಳಿಗೆ 40 ರೂ. ಇರಲಿದೆ. 2-4 ಗಂಟೆಗೆ ಬೈಕ್​ಗೆ 40 ರೂ., ಕಾರುಗಳಿಗೆ 65 ರೂ., 4-6 ಗಂಟೆಗೆ ಬೈಕ್​ಗಳಿಗೆ 55 ರೂ., ಕಾರುಗಳಿಗೆ 90 ರೂ. ಇರಲಿದೆ. 6-10 ಗಂಟೆವರೆಗೆ ಬೈಕ್​ಗಳಿಗೆ 85 ರೂ., ಕಾರುಗಳಿಗೆ 110 ರೂ. ಇರಲಿದೆ. 10-12 ಗಂಟೆಗೆ ಬೈಕ್​ಗೆ 100 ರೂ., ಕಾರುಗಳಿಗೆ 165 ರೂಪಾಯಿ ದರ ನಿಗದಿ ಮಾಡಲಾಗಿದೆ. ಮಾಸಿಕ ಪಾಸ್ ಸೌಲಭ್ಯವೂ ಇದ್ದು, ದರ ಅಂತಿಮವಾಗಬೇಕಿದೆ.

ಪಾರ್ಕಿಂಗ್ ಸಮಸ್ಯೆಗೆ ಪರಿಹಾರ: ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ, ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ನಗರ ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್‌ ವೃತ್ತ, ಕಂದಾಯ ಭವನ, ಚಿಕ್ಕಪೇಟೆ, ಕಬ್ಬನ್‌ಪಾರ್ಕ್​​ಗೆ ತೆರಳುವವರಿಗೆ ವಾಹನಗಳನ್ನು ಪಾರ್ಕ್ ಮಾಡಲು ಸಮಸ್ಯೆಯಾಗುತ್ತಿತ್ತು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗಬೇಕಾಗಿತ್ತು. ಪಾರ್ಕ ಮಾಡಲು ಸ್ಥಳ ಹುಡುಕುವುದೇ ದೊಡ್ಡ ತಲೆನೋವಾಗಿತ್ತು. ಆದ್ರೀಗ ಇಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ. ಫ್ರೀಡಂ ಪಾರ್ಕ್ ಸುತ್ತಮುತ್ತ ಬಹುತೇಕ ಸರ್ಕಾರಿ ಕಚೇರಿ, ಕಾಲೇಜುಗಳಿವೆ. ವಾರಾಂತ್ಯ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಧರಣಿ, ಪ್ರತಿಭಟನೆಗೆ ಆಗಮಿಸುವವರು ಕೂಡ ಇಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಹಾಗಾಗಿ ಈ ಭಾಗದ ಸುತ್ತಮತ್ತ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಬೀಳಲಿದೆ ಎನ್ನುವ ನಿರೀಕ್ಷೆ ಇದೆ.

Last Updated : Jun 13, 2024, 9:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.