ETV Bharat / state

ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯದಿಂದ ಪ್ರೌಢಶಿಕ್ಷಕರನ್ನು ಹೊರಗಿಟ್ಟಿರುವ ಕ್ರಮಕ್ಕೆ ಆಕ್ರೋಶ, ಸಭಾತ್ಯಾಗ - ದ್ವಿತೀಯ ಪಿಯುಸಿ ಪರೀಕ್ಷೆ

ಪ್ರೌಢಶಾಲಾ ಶಿಕ್ಷಕರನ್ನ‌ ಪರೀಕ್ಷಾ‌ ಮೇಲ್ವಿಚಾರಕರನ್ನು ಹೊರಗಿಟ್ಟಿರುವುದು ಸರಿಯಲ್ಲ. ಶಿಕ್ಷಕರನ್ನು ಸರ್ಕಾರವು ಸಂಶಯದಿಂದ ನೋಡುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ವಿಧಾನಪರಿಷತ್​ನಲ್ಲಿ ಬಾವಿಗಿಳಿದು ಧರಣಿ ನಡೆಸಿದರು.

Minister Madhubangarappa spoke. ​
ವಿಧಾನಪರಿಷತ್ ಶೂನ್ಯವೇಳೆಯಲ್ಲಿ ಸಚಿವ ಮಧುಬಂಗಾರಪ್ಪ ಮಾತನಾಡಿದರು.
author img

By ETV Bharat Karnataka Team

Published : Feb 23, 2024, 9:15 PM IST

ವಿಧಾನಪರಿಷತ್ ಸದನ

ಬೆಂಗಳೂರು: ಪ್ರಸ್ತಕ ಸಾಲಿನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೂರು ಬಾರಿ ನಡೆಸುವ ಸಂಬಂಧ ಪರೀಕ್ಷಾ ಮೇಲ್ವಿಚಾರಕಾಗಿ ಪ್ರೌಢಶಾಲಾ ಶಿಕ್ಷಕರನ್ನು ಹೊರಗಿಟ್ಟಿರುವ ಸಂಬಂಧ ವಿಧಾನಪರಿಷತ್ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದ ಶಿಕ್ಷಣ ಸಚಿವ ಮಧುಬಂಗಾರಪ್ಪ ನೀಡಿದ ಉತ್ತರ ಖಂಡಿಸಿ ವಿರೋಧ ಪಕ್ಷದ ಕೆಲ ಸದಸ್ಯರು ಸದನದ ಬಾವಿಗಿಳಿದು ಧರಣಿ‌ ನಡೆಸಿದರು.

ವಿಪಕ್ಷ ಸದಸ್ಯ ಮರಿತಿಬ್ಬೇಗೌಡ, ನಾರಾಯಣಸ್ವಾಮಿ ಸಂಕನೂರು ಅವರು ಮಾತನಾಡಿ, ಸಾಮೂಹಿಕವಾಗಿ ಪ್ರೌಢಶಾಲಾ ಶಿಕ್ಷಕರನ್ನು ಪರೀಕ್ಷಾ ಕಾರ್ಯದಿಂದ ಇದೇ ಮೊದಲ ಬಾರಿಗೆ ಏಕಾಏಕಿ ತೆಗೆದುಹಾಕಿ ಅವರನ್ನು ಅವಮಾನ ಮಾಡಲಾಗಿದೆ. ಶಿಕ್ಷಕರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕುರಿತಂತೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ‌ ಉತ್ತರ ನೀಡಿದ ಸಚಿವರು ಒತ್ತಡ ರಹಿತ‌, ಫಲಿತಾಂಶದಲ್ಲಿ‌ ಉನ್ನತೀಕರಿಸಲು ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಈ‌ ನಿರ್ಧಾರ ಕೈಗೊಳ್ಳಲಾಗಿದೆ.

ಶಿಕ್ಷಕರನ್ನು ಅವಮಾನಿಸುವ ಉದ್ದೇಶ ನಮಗಿಲ್ಲ ಎಂದು ಹೇಳುತ್ತಿದ್ದಂತೆ ಸದಸ್ಯ ಮರಿತಿಬ್ಬೇಗೌಡ, ಪ್ರೌಢಶಾಲಾ ಶಿಕ್ಷಕರನ್ನ‌ ಪರೀಕ್ಷಾ‌ ಮೇಲ್ವಿಚಾರಕರನ್ನು ಹೊರಗಿಟ್ಟಿರುವುದು ಸರಿಯಲ್ಲ. ಶಿಕ್ಷಕರನ್ನು ಸರ್ಕಾರವು ಸಂಶಯದಿಂದ ನೋಡುತ್ತಿದೆ. ಅಲ್ಲದೆ ಯಾರ ವರದಿ ಆಧಾರದ ಮೇರೆಗೆ ಎಸ್ಸೆಸ್ಸೆಲ್ಸಿಗೆ ಮೂರು ಬಾರಿ ಪರೀಕ್ಷೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದರು. ಶಿಕ್ಷಕರಿಗೆ ಮಾಡಿದ ಅವಮಾನ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ವೈ.ಎ.ನಾರಾಯಣಸ್ವಾಮಿ, ಎಸ್.ವಿ.ಸಂಕನೂರು ಹಾಗೂ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಧ್ವನಿಗೂಡಿಸಿದರು. ಈ ವೇಳೆ ಸದನದ ಬಾವಿಗಿಳಿದು ಕೆಲ ಕ್ಷಣಗಳ ಕಾಲ ಧರಣಿ ನಡೆಸಿದರು. ಶೂನ್ಯವೇಳೆಯಲ್ಲಿ ಚರ್ಚೆ ನಡೆಸುವುದು ನಿಯಮಬಾಹಿರ. ಅಲ್ಲದೇ ಬಾವಿಗಿಳಿದು ಮಾತನಾಡುವುದು ಸರಿಯಲ್ಲ ಎಂದು ಸಭಾಪತಿ ಪೀಠದಲ್ಲಿದ್ದ ಎಂ ಕೆ ಪ್ರಾಣೇಶ್ ಬೇಸರ ವ್ಯಕ್ತಪಡಿಸಿದರು.

ಈ ಮಧ್ಯೆ ಸರಿಯಾಗಿ ಓದೋಕೆ ಬರುವುದಿಲ್ಲ ಎಂದು ನಾರಾಯಣಸ್ವಾಮಿ ಆರೋಪಕ್ಕೆ ಪ್ರತಿರೋಧವಾಗಿ ನನಗೆ ಓದಲು ಬರುವುದಿಲ್ಲ ಎಂದು ಹೇಳಬೇಡಿ ಎಂದು ಮಧುಬಂಗಾರಪ್ಪ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದರು‌. ಸರ್ಕಾರ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಮರಿತಿಬ್ಬೇಗೌಡ ಅವರು ಸಚಿವರಿಗೆ ಧಿಕ್ಕಾರ ಕೂಗಿ‌ ಸಭಾತ್ಯಾಗ ಮಾಡಿದರು.

ಇದನ್ನೂಓದಿ:ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ, ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ: ಪರಿಷತ್​ನಲ್ಲಿ ವಿಧೇಯಕ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.