ETV Bharat / state

ಶಿವಮೊಗ್ಗ: ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ಅತಿರುದ್ರ ಮಹಾಯಾಗ ಹೋಮ - shivmogga

ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಲೆಂದು ಶಿವಮೊಗ್ಗದಲ್ಲಿ ಅತಿರುದ್ರ ಮಹಾಯಾಗ ಹೋಮ ನಡೆಸಲಾಯಿತು.

ಶಿವಮೊಗ್ಗ: ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ಅತಿರುದ್ರ ಮಹಾಯಾಗ ಹೋಮ

author img

By ETV Bharat Karnataka Team

Published : Mar 6, 2024, 10:31 PM IST

Updated : Mar 6, 2024, 11:04 PM IST

ಶಿವಮೊಗ್ಗ: ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ಅತಿರುದ್ರ ಮಹಾಯಾಗ ಹೋಮ

ಶಿವಮೊಗ್ಗ: ನರೇಂದ್ರ‌ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಹಾಗೂ ಅರ್ಚಕರ ಸಂಘದ ವತಿಯಿಂದ ಎರಡು ದಿನಗಳ‌ ಕಾಲ ಅತಿರುದ್ರ ಮಹಾಯಾಗವನ್ನು ನಡೆಸಲಾಯಿತು.

ವಿನೋಬನಗರದ ಶಿವಾಲಯ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಮಹಾಯಾಗದಲ್ಲಿ ಉಜ್ಜೈಯಿನಿ ಪೀಠದ ದೇಶಿಕೇಂದ್ರ ಶಿವಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಇಂದು ಪೂರ್ಣಾಹುತಿಯನ್ನು ನೀಡಲಾಯಿತು. ಈ ವೇಳೆ ಬಿಳಕಿ ಹಿರೇಮಠದ ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.

ಅತಿರುದ್ರ ಮಹಾಯಾಗದ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅತಿರುದ್ರ ಯಾಗಕ್ಕೆ‌‌ ನಿರೀಕ್ಷೆಗೂ‌ ಮೀರಿ ನೂರಾರು‌ ಜನ ಭಾಗಿಯಾಗಿದ್ದರು. ಹೋಮ ನಿನ್ನೆ ಪ್ರಾರಂಭವಾಗಿ ಇಂದು ಮುಕ್ತಾಯವಾಗಿದೆ. 11 ಹೋಮ ಕುಂಡಗಳಲ್ಲಿ ಹೋಮ ನಡೆಸಲಾಯಿತು. ಲೋಕಕಲ್ಯಾಣಕ್ಕಾಗಿ ಉಜ್ಜೈಯಿನಿ ಗುರುಗಳು ಸಂದೇಶ ನೀಡಿದ್ದಾರೆ. ದೇಶ ಹಾಗೂ ಧರ್ಮ ಉಳಿಸಬೇಕಾದರೆ, ನಿಸ್ವಾರ್ಥ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂದು ಉಜ್ಜೈಯಿನಿ ಜಗದ್ಗುರುಗಳು ಹೇಳಿದ್ದು ಭಕ್ತರಿಗೆ ಸಂತೋಷವಾಗಿದೆ. ಅವರು ಆಶೀರ್ವಾದದಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ನಾವೆಲ್ಲಾ ಪ್ರಯತ್ನ ಮಾಡುತ್ತೇವೆ ಎಂದರು.

ಬಳಿಕ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ‌ ಮಂತ್ರಿಯಾಗಲು ಎಲ್ಲಾ ಶಕ್ತಿ ಅವರಿಗೆ ಸಿಗಬೇಕು. ಬರಗಾಲ ಹೋಗಿ ಜನ ನೆಮ್ಮದಿಯಿಂದ ಇರಬೇಕೆಂದು ಇಂದು ಉಜ್ಜೈಯಿನಿ ಶ್ರೀಗಳು ಹಾಗೂ ನಮ್ಮ ಜಿಲ್ಲೆಯ ಮಹಾನ್ ನಾಯಕರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹೋಮ ಪೂರ್ಣಾಹುತಿಯನ್ನು ಹಾಗೂ ಧರ್ಮಸಭೆಯನ್ನು ನಡೆಸಲಾಯಿತು ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಚಾರ; ತಮಿಳುನಾಡಿನ ಬುಲೆಟ್ ರಾಣಿ ರಾಜಲಕ್ಷ್ಮಿಯಿಂದ ಬೈಕ್ ರ‍್ಯಾಲಿ

Last Updated : Mar 6, 2024, 11:04 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.