ETV Bharat / state

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡ ಕರುವಿಗೆ ಕೃತಕ ಕಾಲು ಜೋಡಣೆ

ರೈಲು ಅಪಘಾತದಲ್ಲಿ ಒಂದು ಕಾಲಿನ ಜೊತೆಗೆ ತನ್ನ ತಾಯಿಯನ್ನೂ ಕಳೆದುಕೊಂಡ ಆಕಳ ಕರುವಿಗೆ ಸಂಘಟನೆಯೊಂದು ಚಿಕಿತ್ಸೆ ನೀಡಿ ಕೃತಕ ಕಾಲು ಜೋಡಿಸಿದೆ.

Artificial leg assembly
ಕರುವಿಗೆ ಕೃತಕ ಕಾಲು ಜೋಡಣೆ
author img

By ETV Bharat Karnataka Team

Published : Feb 4, 2024, 1:14 PM IST

Updated : Feb 4, 2024, 2:11 PM IST

ಕಾಲು ಕಳೆದುಕೊಂಡ ಕರುವಿಗೆ ಕೃತಕ ಕಾಲು ಜೋಡಣೆ

ಹುಬ್ಬಳ್ಳಿ: ಸಾಮಾನ್ಯವಾಗಿ ಮನುಷ್ಯರಿಗೆ ಕೃತಕ ಕಾಲು ಜೋಡಿಸುವುದನ್ನು ನೋಡಿದ್ದೇವೆ. ಆದರೆ ಪ್ರಾಣಿಗಳಿಗೆ ಅದರಲ್ಲೂ ಅತೀ ಹೆಚ್ಚು ತೂಕದ ಪ್ರಾಣಿಗಳಿಗೂ ಕೃತಕ ಕಾಲು ಜೋಡಣೆ ಅಸಾಧ್ಯವೆನ್ನಬಹುದು. ಹುಬ್ಬಳ್ಳಿಯಲ್ಲಿ ಆಕಳ ಕರುವಿಗೆ ಕೃತಕ ಕಾಲು ಜೋಡಣೆ ಮಾಡಿರುವ ಅಪರೂಪದ ಘಟನೆ ನಡೆದಿದೆ.

ರೈಲು ಅಪಘಾತದಲ್ಲಿ ತಾಯಿಯ ಜೊತೆಗೆ ತನ್ನ ಒಂದು ಕಾಲು ಕಳೆದುಕೊಂಡಿದ್ದ ಆಕಳ ಕರುವಿಗೆ ಕೃತಕ ಕಾಲು ಜೋಡಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ನಡೆಸುವ ಗೋಶಾಲೆ ಇಂಥದ್ದೊಂದು ಅಪರೂಪದ ಕೆಲಸ ಮಾಡಿದೆ. ಅಪಘಾತದಲ್ಲಿ ಒಂದು ಕಾಲು ತುಂಡಾಗಿ ಓಡಾಡಲೂ ಆಗದೇ ಇರುವ ಆಕಳನ್ನು ಗೋ ಶಾಲೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ಅಲ್ಲದೆ ಮಹಾವೀರ್​ ಲಿಂಬ್ ಸೆಂಟರ್​ನಿಂದ ಕೃತಕ ಕಾಲು ಜೋಡಿಸಿದ್ದಾರೆ.

ಸದ್ಯ ಪ್ರಾಯೋಗಿಕವಾಗಿ ಕಾಲು ಜೋಡಿಸಲಾಗಿದೆ. ಇನ್ನೂ ಸ್ವಲ್ಪ ಪ್ರಮಾಣದ ಫಿಟ್ಟಿಂಗ್ ಕೆಲಸ ಬಾಕಿ ಇದೆ‌. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಜೋಡಣೆ ಕಾರ್ಯ ಪೂರ್ಣಗೊಳ್ಳಲಿದೆ. ಕರು ಬೆಳೆದಂತೆ ಕ್ರಮೇಣ ಕಾಲಿನ ಅಳತೆಗನುಗುಣವಾಗಿ ಕೃತಕ ಕಾಲು ಬದಲಾವಣೆ ಮಾಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು.

ಇದನ್ನೂ ಓದಿ: ಹಾವೇರಿ ಸಹೋದರರ ಬದುಕು ಬದಲಿಸಿದ ಹೈನುಗಾರಿಕೆ

Last Updated : Feb 4, 2024, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.