ETV Bharat / state

ನಮ್ಮ ಮೆಟ್ರೋ ಡೆಲ್ಟಾ ಎಲೆಕ್ಟ್ರಾನಿಕ್ಸ್ ನಡುವೆ ಒಡಂಬಡಿಕೆ: ಬೊಮ್ಮಸಂದ್ರ ಮೆಟ್ರೊ ನಿರ್ಮಾಣಕ್ಕೆ 65 ಕೋಟಿ ರೂ ಘೋಷಣೆ

author img

By ETV Bharat Karnataka Team

Published : Mar 14, 2024, 9:45 PM IST

ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ತೈವಾನ್ ದೇಶದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದ ನಡೆಯಿತು. ಒಪ್ಪಂದದ ಪ್ರಕಾರ ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ 30 ವರ್ಷಗಳ ಅವಧಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ಹಕ್ಕುಗಳನ್ನು ಹೊಂದಲಿದೆ.

agreement between our metro and delta electronics
ನಮ್ಮ ಮೆಟ್ರೋ ಹಾಗೂ ಡೆಲ್ಟಾ ಎಲೆಕ್ಟ್ರಾನಿಕ್ಸ್ ನಡುವೆ ಒಪ್ಪಂದ ನಡೆಯಿತು.

ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ. ಈ ಒಪ್ಪಂದದಂತೆ ಬೆಂಗಳೂರು ಮೆಟ್ರೋ ರೈಲು ಯೋಜನೆಯ 2 ನೇಯ ಹಂತದ ಆ‌ರ್.ವಿ ರಸ್ತೆಯಿಂದ ಹಳದಿ ಮಾರ್ಗದ ಬೊಮ್ಮಸಂದ್ರ ಮೆಟ್ರೊ ನಿರ್ಮಾಣಕ್ಕೆ ಡೆಲ್ಟಾ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಹಣಕಾಸು ಕಾರ್ಯವಿಧಾನದ ಭಾಗವಾಗಿ 65 ಕೋಟಿ ರೂಪಾಯಿ ನೀಡಲಿದೆ. ಇದರ ಭಾಗವಾಗಿ ಇಂದು 10 ಕೋಟಿ ರೂಪಾಯಿ ನೀಡಿತು.

ಡೆಲ್ಟಾ ಎಲೆಕ್ಟ್ರಾನಿಕ್ಸ್ ತೈವಾನ್ ದೇಶದ ಉತ್ಪಾದನಾ ಕಂಪನಿ ಆಗಿದ್ದು, ಪರಿಸರ ಸುಸ್ಥಿರತೆಗೆ ಬಲವಾದ ಬದ್ಧತೆ ಹೊಂದಿದೆ. ಇಂಗಾಲದ ಹೆಜ್ಜೆ ಗುರುತು ಕಡಿಮೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೆ ತಂದಿದೆ. ಒಪ್ಪಂದದಂತೆ ಬೆಂಗಳೂರು ಮೆಟ್ರೋ ನಿಗಮ ಕರ್ನಾಟಕ ಸರ್ಕಾರದ ಅನುಮೋದನೆ ಸಹಿತ ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ 30 ವರ್ಷಗಳ ಅವಧಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ಹಕ್ಕುಗಳನ್ನು ಹೊಂದಲಿದೆ.

ಒಪ್ಪಂದದ ಸಂದರ್ಭದಲ್ಲಿ ಬಿಎಂಆರ್‌ಸಿಎಲ್​​​​​ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ್ ಮಾತನಾಡಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ಬೆಂಬಲಿಸಲು ಮುಂದೆ ಬಂದಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದರು.

ಡೆಲ್ಟಾ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಹೊಸೂರು ರಸ್ತೆಯ ಬೊಮ್ಮಸಂದ್ರದಲ್ಲಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ಬಿ ಎಂ ಆರ್ ಸಿ ಎಲ್ ನೊಂದಿಗೆ ಪಾಲುದಾರಿಕೆ ಮಾಡಲು ಸಂತೋಷ ಪಡುತ್ತೇವೆ. ಒಡಂಬಡಿಕೆಯು ಸಾರ್ವಜನಿಕ ಸಾರಿಗೆ ಹೆಚ್ಚಿನ ಬಳಕೆಯನ್ನು ಉತ್ತೇಜಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ನಮ್ಮ ಮೆಟ್ರೋದ 3ನೇ ಒಡಂಬಡಿಕೆ: ಹಳದಿ ಮಾರ್ಗದಲ್ಲಿ ಸಹಿ ಮಾಡಲಾದ 3ನೇ ಒಡಂಬಡಿಕೆ ಇವತ್ತಿನದ್ದಾಗಿದೆ. ಕೋನಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ಕುರಿತು ಕ್ರಮವಾಗಿ ಇನ್ಫೋಸಿಸ್ ಫೌಂಡೇಶನ್ ಮತ್ತು ಬಯೋಕಾನ್ ಫೌಂಡೇಶನ್ ಸಂಸ್ಥೆಗಳೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದನ್ನೂಓದಿ:ಬಹು ನಿರೀಕ್ಷಿತ ನಮ್ಮ ಮೆಟ್ರೋ ಚಾಲಕರಹಿತ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.