ಬೆಳಗಾವಿ: ಹೆತ್ತ ತಾಯಿಯೇ ಮಗುವನ್ನು ಕೆರೆಗೆ ಎಸೆದು ಕೊಲ್ಲಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಗುವಿಗೆ ಫಿಟ್ಸ್ ರೋಗ ಇತ್ತು, ಚಿಕಿತ್ಸೆ ಕೊಡಿಸಿದ್ದರೂ ರೋಗ ಗುಣಮುಖವಾಗದ ಕಾರಣ ಶಾಂತಾ ಕರವಿನಕುಪ್ಪಿ ಎಂಬ ಮಹಿಳೆ ತನ್ನ ಎರಡು ತಿಂಗಳ ಗಂಡು ಮಗುವನ್ನು ಕಣಬರಗಿ ಕೆರೆಯಲ್ಲಿ ಎಸೆದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯನ್ನು ಮಾಳಮಾರುತಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಯಚೂರು: ಅತ್ಯಾಚಾರಕ್ಕೆ ವಿರೋಧಿಸಿದ ಸೊಸೆಯನ್ನು ಕೊಂದ ಮಾವ