ETV Bharat / state

WATCH... ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್! - BIKER JUST MISSED

ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ದಾಳಿಯಿಂದ ಬೈಕ್​ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್!
ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್! (ETV Bharat)
author img

By ETV Bharat Karnataka Team

Published : Oct 19, 2024, 11:44 AM IST

ಚಾಮರಾಜನಗರ: ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್​ ಸವಾರ ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ.

ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಅರಣ್ಯದ ನಡುವೆ ಹಾದುಹೋಗಿದೆ. ಹೆದ್ದಾರಿಯಲ್ಲಿ ಶುಕ್ರವಾರದಂದು ಊಟಿ ಕಡೆಯಿಂದ ಮೈಸೂರಿನತ್ತ ಬರುತ್ತಿದ್ದ ಬೈಕ್​ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಜೀವ ಝಲ್​ ಎನಿಸುವ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.

ಬಂಡೀಪುರದಲ್ಲಿ ಆನೆ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್! (ETV Bharat)

ರಸ್ತೆ ಬದಿ ಮರಿ ಜೊತೆ ನಿಂತಿದ್ದ ಎರಡು ಆನೆಗಳಲ್ಲಿ ಒಂದು ದಿಢೀರನೇ ದಾಳಿ ಮಾಡಲು ಮುಂದಾಗಿದೆ. ಅವಾಕ್ಕಾದ ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದಾಗ ಮತ್ತೊಂದು ಆನೆ ದಾಳಿ ಮಾಡಲು ಮುಂದಾಗುತ್ತದೆ. ಅಷ್ಟರಲ್ಲೇ, ಆನೆಗಳು ಮರಿಯತ್ತ ಹೆಜ್ಜೆ ಹಾಕಿದ್ದು, ಸ್ವಲ್ಪದರಲ್ಲೇ ಆನೆ ದಾಳಿಯಿಂದ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾನೆ.

ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಬಂಡೀಪುರದ ಸಿಎಫ್ ಕಚೇರಿ ಸಮೀಪ ಈ ಘಟನೆ ನಡೆದಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಲಾರಿ ತಡೆದು ಕಬ್ಬು ಸವಿದ ಗಜರಾಜ: ವಿಡಿಯೋ - Elephant Stops Truck Eat Sugarcane

ETV Bharat Logo

Copyright © 2025 Ushodaya Enterprises Pvt. Ltd., All Rights Reserved.