ಚಾಮರಾಜನಗರ/ವಯನಾಡ್ : ವಯನಾಡು ದುರಂತದಲ್ಲಿ ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳು ಕೂಡ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದು, 5 ಹಸುಗಳು ಮತ್ತೆ ತನ್ನ ಒಡೆಯನ ಬಳಿ ಸೇರಿದ ಘಟನೆ ಕೇರಳದ ಚೂರಲ್ ಮಲೆ ಟೀ ಎಸ್ಟೇಟ್ನಲ್ಲಿ ನಡೆದಿದೆ.
![cows](https://etvbharatimages.akamaized.net/etvbharat/prod-images/11-08-2024/kn-cnr-01-vaynadu-av-ka10038_11082024174929_1108f_1723378769_847.jpg)
ಚಾಮರಾಜನಗರ ಮೂಲದ ವಿನೋದ್ ಎಂಬವರು ಹಸುವಿನ ಚೀರಾಟದಿಂದಲೇ ಎಚ್ಚರಗೊಂಡು ಬಚಾವಾಗಿದ್ದರು. ದುರಂತ ನಡೆದ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನಗಳ ಹಗ್ಗ ಬಿಚ್ಚಿ ಬಳಿಕ ತಾವು ಬೆಟ್ಟ ಏರಿ ಪಾರಾಗಿದ್ದರು.
![cows](https://etvbharatimages.akamaized.net/etvbharat/prod-images/11-08-2024/kn-cnr-01-vaynadu-av-ka10038_11082024174929_1108f_1723378769_993.jpg)
ಅದಾದ ನಂತರ, ಇಂದು ಟೀ ಎಸ್ಟೇಟ್ ಒಂದರಲ್ಲಿ ತಮ್ಮ 5 ಹಸುಗಳು ಇರುವುದು ಗೊತ್ತಾಗಿ 5 ಹಸುಗಳನ್ನು ಕಾಳಜಿ ಕೇಂದ್ರದತ್ತಲೇ ಕರೆತಂದಿದ್ದಾರೆ.
![cows](https://etvbharatimages.akamaized.net/etvbharat/prod-images/11-08-2024/kn-cnr-01-vaynadu-av-ka10038_11082024174929_1108f_1723378769_113.jpg)
ಒಟ್ಟಿನಲ್ಲಿ ಮಳೆಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಹಸುಗಳು ಪವಾಡದ ರೀತಿಯಲ್ಲಿ ಪಾರಾಗಿ ತಮ್ಮ ಜೀವ ಉಳಿಸಿಕೊಂಡಿವೆ.
![cows](https://etvbharatimages.akamaized.net/etvbharat/prod-images/11-08-2024/kn-cnr-01-vaynadu-av-ka10038_11082024174929_1108f_1723378769_695.jpg)
ಇದನ್ನೂ ಓದಿ : ವಯನಾಡ್ಗೆ ಭೇಟಿ ನೀಡಿದ ಪ್ರಧಾನಿ, ವೈಮಾನಿಕ ಸಮೀಕ್ಷೆ; ಸಂತ್ರಸ್ತರಿಗೆ ಮೋದಿ ಸಾಂತ್ವನ - PM Modi visiti Wayanad