ETV Bharat / state

ಧಾರಾಕಾರ ಮಳೆ: ನೆಲಕ್ಕುರುಳಿದ 300 ವರ್ಷದ ಪುರಾತನ ಮರ, ಬಯಲು ಸೀಮೆಯಲ್ಲಿ ಒಡೆದ ಕೆರೆಯ ಕಟ್ಟೆ - tree fell into the ground

author img

By ETV Bharat Karnataka Team

Published : May 21, 2024, 8:05 PM IST

Updated : May 21, 2024, 9:10 PM IST

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ.

300-year-old-tree-fell-into-the-ground
ನೆಲಕ್ಕೆ ಬಿದ್ದ 300 ವರ್ಷದ ಮರ (ETV Bharat)
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ (ETV Bharat)

ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಕೆರೆ ಹೊಸಹಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ 300 ವರ್ಷದ ಅರಳಿಮರ ಧರೆಗೆ ಉರುಳಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮಧ್ಯರಾತ್ರಿಯಿಂದಲೂ ತರೀಕೆರೆ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ.

ರಾತ್ರಿ ಸುರಿದ ಭಾರಿ ಮಳೆಗೆ ಕಡೂರು ತಾಲೂಕಿನ ಗೌಡನಕಟ್ಟೆ ಕೆರೆಯ ಏರಿ ಒಡೆದು ನೀರು ಪೋಲಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಮಳೆಗೆ ಕೆರೆ ಭರ್ತಿಯಾಗಿತ್ತು. ಏರಿ ತುಂಡಾದ ಪರಿಣಾಮ ಪಿ ಕೋಡಿಹಳ್ಳಿ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಈ ಅವಘಡ ಜರುಗಿದೆ. ಇದರಿಂದಾಗಿ ಕೆರೆ ಏರಿ ಹಿಂಭಾಗದ ತೋಟ, ಜಮೀನುಗಳು ಜಲಾವೃತವಾಗಿವೆ.

ಮೂಡಿಗೆರೆ ತಾಲೂಕಿನಾದ್ಯಂತ ಮುಂದುವರೆದ ಮಳೆ : ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಬಣಕಲ್, ಬಾಳೂರು, ಜಾವಳಿ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ ತಾಲೂಕಿನ ಹತ್ತು ಹಲವು ಗ್ರಾಮಗಳಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರಿ ಮಳೆ ಹಿನ್ನೆಲೆ ಕೊಟ್ಟಿಗೆಹಾರದಲ್ಲಿ ವಾಹನಗಳು ಸಂಚರಿಸದೇ ನಿಂತಲ್ಲಿಯೇ ನಿಂತುಕೊಂಡಿವೆ.

ಕಳೆದ 8 -10 ದಿನಗಳಿಂದ ಕೊಟ್ಟಿಗೆಹಾರದಲ್ಲಿ ಸಾಧಾರಣ ಮಳೆಯಾಗಿತ್ತು. ಇಂದು ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ರಸ್ತೆಯಲ್ಲಿ ಮಳೆ ನೀರು ನಿಲ್ಲಲು ಪ್ರಾರಂಭವಾಗಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಅರ್ಧ ಗಂಟೆಗಳವರೆಗೆ ಭಾರಿ ಮಳೆ ಸುರಿದಿದೆ.

ತರೀಕೆರೆ ಪಟ್ಟಣದಲ್ಲಿ ಮಳೆ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ಸುಮಾರು ಒಂದೂವರೆ ಅಡಿ ನೀರು ನಿಂತುಕೊಂಡಿದೆ. ರಸ್ತೆಯಲ್ಲಿನ ನೀರಲ್ಲಿ ಆಟೋ-ಕಾರಿನ ಚಕ್ರಗಳು ಅರ್ಧ ಮುಳುಗಿವೆ. ಈ ಬಾರಿ ಮಲೆನಾಡಿಗಿಂತ ಬಯಲುಸೀಮೆ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆ ಕಂಡು ಕಡೂರು, ಬೀರೂರು, ಅಜ್ಜಂಪುರ, ತರೀಕೆರೆ ಜನ ಫುಲ್ ಖುಷ್ ಆಗಿದ್ದಾರೆ. ನಿರಂತರವಾಗಿ ಹೀಗೆ ಪ್ರತಿದಿನ ಮಳೆ ಸುರಿಯಲಿ ಎಂದು ರೈತರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಗಿರಿ-ಪರ್ವತಗಳು : ಮಳೆಯ ಸಿಂಚನಕ್ಕೆ ಕಾಫಿನಾಡು ಹಚ್ಚ ಹಸಿರಾಗಿ ಕಂಗೊಳಿಸಲು ಪ್ರಾರಂಭವಾಗಿದೆ. ಮಳೆ ಇಲ್ಲದೆ ಬಿಸಿಲಿನ ತಾಪಕ್ಕೆ ಬೋಳು ಬೋಳಾಗಿ ಕಾಣಿಸುತ್ತಿದ್ದ ಗಿರಿ ಪರ್ವತಗಳೀಗ ಹಚ್ಚ ಹಸಿರಾಗಿ ಕಂಡು ಬರುತ್ತಿವೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಲು ಪ್ರಾರಂಭಿಸಿದೆ.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಒಂದು ಕಡೆ ಬಿಸಿಲು ಇನ್ನೊಂದು ಕಡೆ ಮಳೆಯ ವಾತಾವರಣ ಅಲ್ಲಲ್ಲಿ ನಿರ್ಮಾಣವಾಗುತ್ತಿದೆ. ಚಿಕ್ಕಮಗಳೂರು ನಗರದ ಹೊರ ವಲಯದ ಕಲ್ಲುದೊಡ್ಡಿ ಗ್ರಾಮದಲ್ಲಿ ನವಿಲಿನ ನೃತ್ಯ ನೋಡಿ ಸ್ಥಳೀಯರು ಸಂತೋಷದಿಂದ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಚಲಿಸುತ್ತಿದ್ದ ಎರಡು ಕಾರುಗಳ ಮೇಲೆ ಬಿದ್ದ ಬೃಹತ್ ಮರ: ತಾಯಿ, ಮಗು ಬಚಾವ್​​ - Tree Fell On Two Moving Cars

Last Updated : May 21, 2024, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.