ETV Bharat / state

ದಾವಣಗೆರೆ: ಸಾಲ ಕೊಡಿಸುವುದಾಗಿ ನಂಬಿಸಿ 12.15 ಲಕ್ಷ ರೂ. ವಂಚನೆ, ಪ್ರಕರಣ ದಾಖಲು - Money fraud

ದಾವಣಗೆರೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 12.15 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನಗರದ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾನಗರ ಪೊಲೀಸ್​ ಠಾಣೆ
ವಿದ್ಯಾನಗರ ಪೊಲೀಸ್​ ಠಾಣೆ
author img

By ETV Bharat Karnataka Team

Published : Apr 4, 2024, 5:36 PM IST

ದಾವಣಗೆರೆ : ಯಾಮಾರೋರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೂ ಯಾಮಾರಿಸುವವರು ಇರುತ್ತಾರೆ ಎಂಬ ಮಾತಿಗೆ ಸಾಕ್ಷಿಯಂತಿದೆ ನಗರದಲ್ಲಿ ನಡೆದ ಪ್ರಕರಣ. ಸ್ವಯಂ ಉದ್ಯೋಗ ಮಾಡಲು ಸಾಲ ಕೊಡಿಸುವುದಾಗಿ ನಂಬಿಸಿ 12.15 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಬೆಣ್ಣೆ ನಗರಿಯ ನಿವಾಸಿಗಳಾದ ತಿಪ್ಪಣ್ಣ, ರವಿ ಮತ್ತು ಸಿ. ಮಲ್ಲಿಕಾರ್ಜುನ್ ಎಂಬುವರು ವಂಚನೆಗೊಳಗಾಗಿ ಹಣ ಕಳೆದುಕೊಂಡವರು. ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿರುವ ಖಾಸಗಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಕಲ್ವೇಶ್‌ ವೈ. ಅಗಸಿಮನಿ ಪತ್ನಿ ಸರಸ್ವತಿ ಹಾಗೂ ಬ್ಯಾಂಕ್ ಮ್ಯಾನೇಜ‌ರ್ ಮಂಜುನಾಥ ನಾಯ್ಕ ವಿರುದ್ಧ ವಂಚನೆ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಆರೋಪಿಗಳಾದ ಸರಸ್ವತಿ ಹಾಗೂ ಮಂಜುನಾಥ ನಾಯ್ಕ 4.05 ಲಕ್ಷ ರೂ. ಷೇರು ನೀಡಿದರೆ, 15 ರಿಂದ 20 ಲಕ್ಷ ರೂ.ವರೆಗೂ ಸಾಲ ನೀಡುತ್ತೇವೆ. ಇದರಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಈ ಮೂರು ಜನರಿಗೆ ನಂಬಿಸಿದ್ದರು. ಇದನ್ನು ನಂಬಿ ನಾನು, ತಿಪ್ಪಣ್ಣ ಹಾಗೂ ರವಿ ತಲಾ 4.05 ಲಕ್ಷ ರೂ. ಗಳಂತೆ ಒಟ್ಟು 12.15 ಲಕ್ಷ ರೂ. ಗಳನ್ನು ನೀಡಿದ್ದೆವು. ಬಳಿಕ ಸಾಲ ಮಂಜೂರು ಬಗ್ಗೆ ಕೇಳಿದಾಗ ತಿಂಗಳು ಬಿಟ್ಟು ಬನ್ನಿ ಎಂದು ಹೇಳಿಕೊಂಡು ಈವರೆಗೆ ದೂಡಿದ್ದಾರೆ. ಕೊನೆಗೆ ತಾವು ಹಾಕಿರುವ ಷೇರು ಹಣವನ್ನಾದರೂ ವಾಪಸ್ ಕೊಡಿ ಎಂದು ಕೇಳಿದಾಗ, ಹಣ ನೀಡದೆ ಬೆದರಿಕೆವೊಡ್ಡಿದ್ದಾರೆ ಎಂದು ವಂಚನೆಗೊಳಗಾದ ಸಿ ಮಲ್ಲಿಕಾರ್ಜುನ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಹೆಚ್ಚಿನ ಲಾಭಾಂಶ ಕೊಡುವ ನೆಪದಲ್ಲಿ 84 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ - Money fraud

ETV Bharat Logo

Copyright © 2024 Ushodaya Enterprises Pvt. Ltd., All Rights Reserved.